Umesh Katti: ಪಡಿತರ ಚೀಟಿದಾರರಿಗೆ 'ಭರ್ಜರಿ ಗುಡ್ ನ್ಯೂಸ್' ನೀಡಿದ ಸಚಿವ ಉಮೇಶ್ ಕತ್ತಿ..!

ಪಡಿತರ ಚೀಟಿದಾರರಿಗೆ ರಾಗಿ, ಕಡಲೆ, ಹೆಸರು ಬೇಳೆ, ಜೋಳ ಸೇರಿದಂತೆ ಸ್ಥಳೀಯ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು

Last Updated : Feb 6, 2021, 08:00 PM IST
  • ಪಡಿತರ ಚೀಟಿದಾರರಿಗೆ ರಾಗಿ, ಕಡಲೆ, ಹೆಸರು ಬೇಳೆ, ಜೋಳ ಸೇರಿದಂತೆ ಸ್ಥಳೀಯ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು
  • ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿ ಜೊತೆಗೆ ಹೆಸರು ಬೇಳೆ, ತೊಗರಿ, ಜೋಳ, ರಾಗಿ ವಿತರಿಸಲು ಯೋಜಿಸಲಾಗಿದೆ
  • ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಧಾನ್ಯ ವಿತರಿಸುವ ಯೋಜಿಸಲಾಗಿದ್ದು, ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ಜೋಳ, ತೊಗರಿ, ಹೆಸರುಬೇಳೆ
Umesh Katti: ಪಡಿತರ ಚೀಟಿದಾರರಿಗೆ 'ಭರ್ಜರಿ ಗುಡ್ ನ್ಯೂಸ್' ನೀಡಿದ ಸಚಿವ ಉಮೇಶ್ ಕತ್ತಿ..! title=

ಬೆಳಗಾವಿ: ಪಡಿತರ ಚೀಟಿದಾರರಿಗೆ ರಾಗಿ, ಕಡಲೆ, ಹೆಸರು ಬೇಳೆ, ಜೋಳ ಸೇರಿದಂತೆ ಸ್ಥಳೀಯ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಬಿಪಿಎಲ್ ಪಡಿತರ(BPL Card) ಚೀಟಿದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿ ಜೊತೆಗೆ ಹೆಸರು ಬೇಳೆ, ತೊಗರಿ, ಜೋಳ, ರಾಗಿ ವಿತರಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Farmers: ರೈತರಿಗೊಂದು ಗುಡ್ ನ್ಯೂಸ್: ಹನಿ ನೀರಾವರಿಗೆ 90% ಸಹಾಯಧನ!

ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಧಾನ್ಯ ವಿತರಿಸುವ ಯೋಜಿಸಲಾಗಿದ್ದು, ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿ(Rice)ಯ ಜೊತೆಗೆ ಜೋಳ, ತೊಗರಿ, ಹೆಸರುಬೇಳೆ ನೀಡಲಾಗುವುದು. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಅಕ್ಕಿ ಜೊತೆಗೆ ರಾಗಿ, ತೊಗರಿ, ಹೆಸರು ಬೇಳೆ ವಿತರಿಸಲಾಗುವುದು. ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಬಿಜೆಪಿಯಿಂದ SC, ST, ಹಿಂದುಳಿದ ಜಾತಿಗಳಿಗೆ ಮೋಸ: ಸಿದ್ದರಾಮಯ್ಯ

ಆಹಾರ ಭದ್ರತೆ ಯೋಜನೆಯಡಿ ನೀಡುತ್ತಿರುವ ಅಕ್ಕಿಯನ್ನು ರಾಜ್ಯದಲ್ಲಿಯೇ ಖರೀದಿಸಬೇಕೆಂಬ ಉದ್ದೇಶ ಹೊಂದಿದ್ದು, ಇದರಿಂದ ರಾಜ್ಯದ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶೀಘ್ರವೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ದೆಹಲಿಗೆ ತೆರಳಿ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸುವುದಾಗಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

B.S.Yediyurappa: 'ಮೋದಿ-ಶಾ ಬೆಂಬಲ ಇರೋವರೆಗೆ ನಾನೇ ಕರ್ನಾಟಕದ ಸಿಎಂ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News