ಬೆಂಗಳೂರು: ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಬಳಿಕ ತೆರವಾಗಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ವಿಶೇಷ ಅಂದ್ರೆ ಬಸವರಾಜ್ ಹೊರಟ್ಟಿ ಅವರ ನಾಮಪತ್ರ ಸಲ್ಲಿಕೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ(HD Revanna) ಅವರು ಮೂಹರ್ತ ನಿಗದಿ ಮಾಡಿದ್ದಾರೆ.
Farmers: ರೈತರಿಗೊಂದು ಗುಡ್ ನ್ಯೂಸ್: ಹನಿ ನೀರಾವರಿಗೆ 90% ಸಹಾಯಧನ!
ಸೋಮವಾರ ಬೆಳಗ್ಗೆ 10.15ರಿಂದ 10.30ರವರೆಗೆ ಶುಭ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸುವಂತೆ ರೇವಣ್ಣ ಅವರು ಬಸವರಾಜ್ ಹೊರಟ್ಟಿ ಅವರಿಗೆ ಸಲಹೆ ನೀಡಿದ್ದರು. ಎಚ್.ಡಿ ರೇವಣ್ಣ ಸಲಹೆಗೆ ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿಯಿಂದ SC, ST, ಹಿಂದುಳಿದ ಜಾತಿಗಳಿಗೆ ಮೋಸ: ಸಿದ್ದರಾಮಯ್ಯ
ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ(pratap chandra shetty) ಗುರುವಾರ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾಗಿರುವ ಸಭಾಪತಿ ಹುದ್ದೆಗೆ ಇದೇ ಮಂಗಳವಾರ ಫೆಬ್ರವರಿ 9ರಂದು ನ ಚುನಾವಣೆ ನಡೆಯಲಿದೆ. ಸೋಮವಾರ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮರುದಿನ ಚುನಾವಣೆ ನಡೆಯಲಿದೆ.
B.S.Yediyurappa: 'ಮೋದಿ-ಶಾ ಬೆಂಬಲ ಇರೋವರೆಗೆ ನಾನೇ ಕರ್ನಾಟಕದ ಸಿಎಂ'
ಬಹುತೇಕ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ನೂತನ ಸಭಾಪತಿಯಾಗಲಿದ್ದಾರೆ. ಯಾಕಂದ್ರೆ ಬಿಜೆಪಿ ಬೆಂಬಲದೊಂದಿಗೆ, ಬಿಜೆಪಿ 31 ಹಾಗೂ ಜೆಡಿಎಸ್ 13 ಸದಸ್ಯರ ಬಲದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿದೆ.
MTB Nagaraj: ಸದನದಲ್ಲಿ ತಪ್ಪು ಉತ್ತರ ನೀಡಿ ಮುಜುಗರಕ್ಕೀಡಾದ ಸಚಿವ MTB ನಾಗರಾಜ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.