ತಡರಾತ್ರಿಯಲ್ಲಿ ರೋಗಿ ನೆರವಿಗೆ ಧಾವಿಸಿದ ಸಚಿವ ಯು.ಟಿ. ಖಾದರ್

ಯೋಧನ ಸಂಬಂಧಿಕರ ಕರೆಗೆ ಓಡಿಬಂದ ಖಾದರ್. 

Last Updated : Nov 6, 2017, 11:41 AM IST
ತಡರಾತ್ರಿಯಲ್ಲಿ ರೋಗಿ ನೆರವಿಗೆ ಧಾವಿಸಿದ ಸಚಿವ ಯು.ಟಿ. ಖಾದರ್ title=
Pic: Youtube

ಮಂಗಳೂರು: ವಿಷದ ಹಾವು ಕಚ್ಚಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಯೋಧನ ನೆರವಿಗೆ ತಡರಾತ್ರಿ ಸಚಿವ ಯು.ಟಿ. ಖಾದರ್ ಧಾವಿಸಿದ್ದಾರೆ. 

ವಿಷದ ಹಾವು ಕಚ್ಚಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಯೋಧ ಸಂತೋಷ್ ಕುಮಾರ್ ನನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ರಾತ್ರಿ 11 ಗಂಟೆ ಸುಮಾರಿಗೆ ದಾಖಲಿಸಲಾಗಿತ್ತು. ವಿಷದ ಹಾವು ಕಚ್ಚಿರುವ ಪರಿಣಾಮ ರೋಗಿಯ ಜೀವಕ್ಕೆ ಯಾವುದೇ ಭರವಸೆಯನ್ನು ನೀಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಈ ಮಧ್ಯೆ ರೋಗಿಯ ಸಂಬಂಧಿಕರು ಸಚಿವ ಯು.ಟಿ. ಖಾದರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. 

ವಿಷಯ ತಿಳಿದ ಸಚಿವ ಯು.ಟಿ. ಖಾದರ್ ಮಂಗಳೂರಿನ  ಫಾದರ್ ಮುಲ್ಲರ್ ಆಸ್ಪತ್ರೆಗೆ ತಡರಾತ್ರಿ 1 ಗಂಟೆಗೆ ತೆರಳಿ ರೋಗಿಯನ್ನು ಭೇಟಿ ಮಾಡಿ ನಂತರ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಇದೀಗ ಯೋಧ ಸಂತೋಷ್ ಕುಮಾರ್ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಬ್ಬ ರೋಗಿಯ ಕರೆಗೆ ತಡರಾತ್ರಿ ಆಗಮಿಸಿದ ಖಾದರ್ ನಿಜವಾಗಿಯೂ ಒಬ್ಬ ಮಾದರಿ ಮಂತ್ರಿ ಎಂದರೆ ತಪ್ಪಾಗಲಾರದು. ಖಾದರ್ ಕರುಣೆ ಇದೇ ಮೊದಲೇನಲ್ಲ, ಈ ಮೊದಲು ಸಾಕಷ್ಟು ಬಾರಿ ಅವರು ನೊಂದವರಿಗೆ ತಮ್ಮ ಅಭಯ ಅಸ್ತ ನೀಡಿದ್ದಾರೆ.

Trending News