ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪರಿಹಾರ ರೀತಿ ಶಮೀರ್ ಶಹಾಪುರ್ ಗೂ ಪರಿಹಾರ ನೀಡಿ: ಸಲೀಮ್ ಅಹ್ಮದ್

ಕೂಡಲೇ ಸರ್ಕಾರ ಶಮೀರ್ ಶಹಾಪುರ್ ಕುಟುಂಬಕ್ಕೆ ಪರಿಹಾರ ಕೊಡಬೇಕು. ನಿನ್ನೆ ಸಿಎಂ ಗಮನಕ್ಕೂ ಸಹ ತಂದಿದ್ದೆ, ಈ ಕುರಿತಂತೆ ಮುಖ್ಯಮಂತ್ರಿ ಬೊಮ್ಮಾಯಿಗೂ ಪತ್ರ ಬರೆದಿದ್ದೇನೆ. ಭೇದಭಾವ ತೋರದೇ ಪರಿಹಾರ ಕೊಡಲಿ ಎಂದು ಸಲೀಮ್ ಅಹ್ಮದ್ ಹೇಳಿದರು. 

Written by - Zee Kannada News Desk | Last Updated : Mar 7, 2022, 04:24 PM IST
  • ಕೂಡಲೇ ಸರ್ಕಾರ ಶಮೀರ್ ಶಹಾಪುರ್ ಕುಟುಂಬಕ್ಕೆ ಪರಿಹಾರ ಕೊಡಬೇಕು
  • ನಿನ್ನೆ ಸಿಎಂ ಗಮನಕ್ಕೂ ಸಹ ತಂದಿದ್ದೆ
  • ಈ ಕುರಿತಂತೆ ಮುಖ್ಯಮಂತ್ರಿ ಬೊಮ್ಮಾಯಿಗೂ ಪತ್ರ ಬರೆದಿದ್ದೇನೆ
  • ಭೇದಭಾವ ತೋರದೇ ಪರಿಹಾರ ಕೊಡಲಿ ಎಂದ ಪರಿಷತ್ ಸದಸ್ಯ ಸಲೀಮ್ ಅಹ್ಮದ್
ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪರಿಹಾರ ರೀತಿ ಶಮೀರ್ ಶಹಾಪುರ್ ಗೂ ಪರಿಹಾರ ನೀಡಿ: ಸಲೀಮ್ ಅಹ್ಮದ್  title=
ಸಲೀಮ್ ಅಹ್ಮದ್

ಬೆಂಗಳೂರು: ಶಿವಮೊಗ್ಗ (Shivamogga) ಜಿಲ್ಲೆಯ ಬಜರಂಗ ದಳ ಕಾರ್ಯಕರ್ತ ಹತ್ಯೆಗೆ ಪರಿಹಾರವಾಗಿ ಸರ್ಕಾರ ₹25 ಲಕ್ಷ ನೀಡಿದ ರೀತಿಯಲ್ಲಿ ನರಗುಂದದಲ್ಲಿ ಶಮೀರ್ ಶಹಾಪುರ್ ಗೂ ಪರಿಹಾರ ನೀಡಬೇಕು ಎಂದು ಪರಿಷತ್ ಸದಸ್ಯ ಸಲೀಮ್ ಅಹ್ಮದ್ (Saleem Ahmed) ಆಗ್ರಹ ಮಾಡಿದರು.

ಇದನ್ನೂ ಓದಿ: ಸಚಿವ ಸೋಮಣ್ಣ ಮಾತಿಗೆ ಕಿಮ್ಮತ್ತಿಲ್ಲ : ಚಾಮರಾಜನಗರದಲ್ಲಿ ಸ್ಥಗಿತಗೊಂಡಿಲ್ಲ ಗಣಿಗಾರಿಕೆ

ಪರಿಷತ್ ಕಲಾಪದ (Vidhanaparishat) ನಂತರ ಮಾತನಾಡಿದ ಅವರು, ನರಗುಂದದಲ್ಲಿ ಶಮೀರ್ ಶಹಾಪುರ್ ಒಂದು ತಿಂಗಳ ಹಿಂದೆ ಹತ್ಯೆ ಆಗಿದ್ದಾರೆ. ನ್ಯಾಯಾಂಗ ತನಿಖೆಗೆ ನಾವು ಒತ್ತಾಯ ಮಾಡಿದ್ವಿ. ಕೂಡಲೇ ಸರ್ಕಾರ ಶಮೀರ್ ಶಹಾಪುರ್ ಕುಟುಂಬಕ್ಕೆ ಪರಿಹಾರ ಕೊಡಬೇಕು. ನಿನ್ನೆ ಸಿಎಂ ಗಮನಕ್ಕೂ ಸಹ ತಂದಿದ್ದೆ, ಈ ಕುರಿತಂತೆ ಮುಖ್ಯಮಂತ್ರಿ ಬೊಮ್ಮಾಯಿಗೂ (Basavaraj Bommai) ಪತ್ರ ಬರೆದಿದ್ದೇನೆ. ಭೇದಭಾವ ತೋರದೇ ಪರಿಹಾರ ಕೊಡಲಿ ಎಂದು ಹೇಳಿದರು.

ಇದನ್ನೂ ಓದಿ: ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್ ಲಿಫ್ಟ್ ಮಾಡಿದ ವಿದ್ಯಾರ್ಥಿಗಳ ಭವಿಷ್ಯವೇನು..?: ಎಚ್​ಡಿಕೆ

ಈ ವಿಷಯವಾಗಿ ಕಾಂಗ್ರೆಸ್ (Congress) ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಶೂನ್ಯ ವೇಳೆಯಲ್ಲಿ (Zero Hour) ಪ್ರಸ್ತಾಪ ಮಾಡಿದ ವಿಷಯಕ್ಕೆ ಉತ್ತರಿಸಿದ ಸಮಾಜಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Poojari), ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರದಿಂದ ಬರುವ ಪರಿಹಾರ ನೀಡುತ್ತೇವೆ. ಇಬ್ಬರ ಜಗಳವನ್ನ ಪಕ್ಷದ ಗಲಾಟೆ ಎಂಬುದಂತೆ ಬಿಂಬಿಸುದು ಸರಿಯಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News