ನಮ್ಮ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದೆ: ಡಿಕೆ ಸಹೋದರರ ಆರೋಪ

ಸದಾಶಿವನಗರದ ನಿವಾಸದಲ್ಲಿ ಬೆಳ್ಳಂಬೆಳಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಬ್ರದರ್ಸ್

Last Updated : May 31, 2018, 09:43 AM IST
ನಮ್ಮ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದೆ: ಡಿಕೆ ಸಹೋದರರ ಆರೋಪ title=

ಬೆಂಗಳೂರು: ಸಿಬಿಐ, ಇಡಿ, ಐಟಿ ಮೂಲಕ ನಮ್ಮ ಕುಟುಂಬದ ಮೇಲೆ ದಾಳಿ ನಡೆಸಲು ಸಂಚು ನಡೆಯುತ್ತಿದೆ. ಬುಧವಾರ ಸಿಬಿಐ ಕೋರ್ಟ್‌ನಿಂದ ಸರ್ಚ್‌ ವಾರಂಟ್‌ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಡಿ.ಕೆ.ಸುರೇಶ್‌ ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ನಮ್ಮ ಕುಟುಂಬವನ್ನು ರಾಜಕೀಯವಾಗಿ ಬಗ್ಗು ಬಡಿಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ. ನಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಬೆಳ್ಳಂಬೆಳಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.

ಸದಾಶಿವ ನಗರದ ನಿವಾಸದಲ್ಲಿ  ಗುರುವಾರ ಬೆಳಗ್ಗೆ  ತುರ್ತು ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಸಹೋದರರು, ಮೂರು-ನಾಲ್ಕು ತಿಂಗಳುಗಳಿಂದ ಅನೇಕ ಮಾಹಿತಿಗಳು ಬಂದಿವೆ.ಎಲ್ಲೆಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು  ನಮಗೆ ಗೌಪ್ಯತೆಯನ್ನು ತಿಳಿಸಿದ್ದಾರೆ. ಅವರ ಹೆಸರು ಹೊರಗೆ ಹಾಕಲು ಇಷ್ಟಪಡುವುದಿಲ್ಲ ಅವರು ನಮಗೆ ಕೆಲ ಮಾಹಿತಿಗಳನ್ನು ಕೊಟ್ಟಿದ್ದಾರೆ. ಸಿಬಿಐ, ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ಅಧಿಕಾರಿಗಳೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ರಾಜಕೀಯ ಉದ್ದೇಶದಿಂದ ತೊಂದರೆ ನೀಡಲಾಗುತ್ತಿದೆ. ನಮ್ಮ ಬಂಧುಗಳು ಹಾಗೂ ಸ್ನೇಹಿತರಿಗೂ ಚಿತ್ರಹಿಂಸೆ ಕೊಡುವ ಕೆಲಸದಲ್ಲಿ ಬಿಜೆಪಿ ಸರ್ಕಾರ ತೊಡಗಿದೆ. 

ಪ್ರಧಾನಿ ತಮ್ಮ ಎಲ್ಲಾ ತನಿಖಾ ಏಜೆನ್ಸಿಗಳನ್ನು ಅಮಿತ್ ಶಾ ಸುಪರ್ಥಿಗೆ ನೀಡಿ ಬಿಜೆಪಿ ವಿರುದ್ಧ ಇರುವ ಎಲ್ಲರನ್ನೂ ಸದೆ ಬಡಿಯಲು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದೆ. ಇದಕ್ಕೆ ನಮ್ಮ ಕುಟುಂಬ ಬಗ್ಗುವುದಿಲ್ಲ. ನಾವು ಕಾನೂನನ್ನು ಸಂಪೂರ್ಣ ಗೌರವಿಸುತ್ತೇವೆ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ತಿಳಿಸಿದರು.

Trending News