ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆ ಆಗಿದೆ: ಸಂಸದ ಗೋವಿಂದ ಕಾರಜೋಳ ಆರೋಪ

ವಾಲ್ಮೀಕಿ ನಿಗಮದ ಹಗರಣದಲ್ಲಿಯೂ ಬಹಳ ತಪ್ಪುಗಳು ಆಗಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆ ಮಾಡಿದ್ದಾರೆ. ಸರ್ಕಾರ ಕೂಡಲೇ ರಾಜೀನಾಮೆ ಕೊಡಬೇಕು. ಈ ಹಗರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. 

Written by - Yashaswini V | Last Updated : Jul 17, 2024, 03:07 PM IST
  • ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸ್ಪಷ್ಟವಾಗಿದ್ದು, ಇದರಲ್ಲಿ ಸಚಿವರು ತಪ್ಪು ಮಾಡಿದ್ದಾರೆ.
  • ವಾಲ್ಮೀಕಿ ನಿಗಮದ ಹಗರಣದಲ್ಲಿಯೂ ಬಹಳ ತಪ್ಪುಗಳು ಆಗಿವೆ.
  • ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆ ಆಗಿದೆ: ಸಂಸದ ಗೋವಿಂದ ಕಾರಜೋಳ ಆರೋಪ  title=

ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಹಗರಣ ಕೇವಲ ಅದು ಹಗರಣ ಅಲ್ಲಾ ಅದೊಂದು ಹಗಲು ದರೋಡೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪ ಮಾಡಿದರು.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ (MP Govinda Karajola), ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸ್ಪಷ್ಟವಾಗಿದ್ದು, ಇದರಲ್ಲಿ ಸಚಿವರು ತಪ್ಪು ಮಾಡಿದ್ದಾರೆ. ಮುಡಾ ಹಗರಣದಲ್ಲಿಯೂ ಬಹಳ  ತಪ್ಪು ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿಯೂ ಬಹಳ ತಪ್ಪುಗಳು ಆಗಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆ ಮಾಡಿದ್ದಾರೆ. ಸರ್ಕಾರ ಕೂಡಲೇ ರಾಜೀನಾಮೆ ಕೊಡಬೇಕು. ಈ ಹಗರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. 

ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಅಕ್ರಮ ಆಸ್ತಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ,  ನಾನು ಇದರ ಬಗ್ಗೆ ಹೆಚ್ಚಿಗೆ ಮಾತನಾಡಲ್ಲ. ಇದರಲ್ಲಿ ಸಿಬಿಐ, ಇಡಿ, ಐಟಿ ಸಾಂವಿಧಾನಿಕ ಸಂಸ್ಥೆಗಳು ಆಗಿದ್ದು ಅವು ತಮ್ಮ ಕೆಲಸ ಕಾರ್ಯ ಮಾಡುತ್ತಿವೆ. ಈಗಾಗಲೇ ತನಿಖೆ ಸಹ ಪ್ರಗತಿಯಲ್ಲಿದೆ. ಸತ್ಯಾಸತ್ಯ ಹೊರಗೆ ಬರಬೇಕು ಎಂದರು.

ಇದನ್ನೂ ಓದಿ- 7th Pay Commission: ಸರ್ಕಾರಿ ನೌಕರರಿಗೆ ಬಂಪರ್, 7ನೇ ವೇತನ ಆಯೋಗದ ಶಿಫಾರಸಿಗೆ ಅನುಮೋದನೆ

ಎಸ್‌ಸಿ ಎಸ್ ಪಿ/ ಟಿಎಸ್‌ಪಿ ಅನುದಾನ ದುರ್ಬಳಕೆ: 
ಎಸ್‌ಸಿ ಎಸ್ ಪಿ/ ಟಿಎಸ್‌ಪಿ ಅನುದಾನ ದುರ್ಬಳಕೆ ಬಗ್ಗೆಯೂ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ರಾಜ್ಯ ಸರ್ಕಾರ ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಾ ಇದೆ. ಸಂವಿಧಾನರ ಆಶಯದಂತೆ ಸಮಾಜದಲ್ಲಿ ನೊಂದವರನ್ನ ವಿಶೇಷ ಕಾನೂನು ಮೂಲಕ ಮುಖ್ಯ ವಾಹಿನಿಗೆ ತರಬೇಕಾಗಿದೆ. ದಲಿತರಿಗೆ ಕೊಡಬೇಕಾದ ಅನುದಾನ ಅವರಿಗೆ ಕೊಡಬೇಕು ಎಂದರು. 

ಇದನ್ನೂ ಓದಿ- ರೈತರ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕೆ

ಕಳೆದ ವರ್ಷ ಸಹ ಸಿದ್ಧರಾಮಯ್ಯ ಸರ್ಕಾರದಲ್ಲಿ 11 ಸಾವಿರ 144 ಕೋಟಿ ದುರುಪಯೋಗವಾಗಿದೆ. ಈ ವರ್ಷ ಸಹ 13 ಸಾವಿರ ಕೋಟಿ ದುರುಪಯೋಗ ಆಗಿದೆ. ಗ್ಯಾರಂಟಿ ಹೆಸರಿನಲ್ಲಿ ದುರುಪಯೋಗ ಆಗಿದ್ದು ಒಟ್ಟು 25 ಸಾವಿರ ಕೋಟಿ ಹಣ ಎಂದರಲ್ಲದೆ,  ಸಿದ್ಧರಾಮಯ್ಯ ಅವರೇ ತಾವು ಅಹಿಂದ ನಾಯಕರೆಂದು ಪೆಟೆಂಟ್ ತೆಗೆದುಕೊಂಡಿದ್ದೀರಿ. ಈ ಮೂಲಕ ಹಿಂದುಳಿದವರನ್ನ ಉದ್ಧಾರ ಮಾಡುತ್ತೇವೆ ಅಂತಾ ಹೇಳಿದ್ದೀರಿ. ಈಗ 25 ಸಾವಿರ ಕೋಟಿ ಅನುದಾನ ವಾಪಾಸ್ ಕೊಡಿ. ಅವರಿಗೆ ಭೂಮಿ, ಹಾಸ್ಟೆಲ್, ಸ್ವತಃ ಉದ್ಯೋಗ ಮಾಡಲು ಅನುದಾನ ಕೊಡಿ ಎಂದು ಆಗ್ರಹಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News