ಟೊಮೇಟೊ ವಿಚಾರಕ್ಕೆ ಮಹಿಳೆ ಕೊಲೆ ಪ್ರಕರಣ: ಆರೋಪಿಗಳು ಅಂದರ್!

ಕೊಳೆತ ಟೊಮೇಟೊ ಎಸೆದ ವಿಚಾರದಲ್ಲಿ ಎದುರು ಮನೆ ಗೃಹಿಣಿಯನ್ನು ಇಬ್ಬರು ಆರೋಪಿಗಳು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

Written by - Zee Kannada News Desk | Last Updated : Mar 12, 2022, 08:53 AM IST
  • ಟೊಮೇಟೊ ವಿಚಾರದಲ್ಲಿ ಮಹಿಳೆ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
  • ತಮಿಳುನಾಡಿನ ಧರ್ಮಪುರಿಯಲ್ಲಿ ಆರೋಪಿಗಳನ್ನು ಬಂಧಿಸಿದ ಉದಯರಿಗಿ ಠಾಣೆ ಪೊಲೀಸರು
  • ಫೆ.2ರಂದು ಕೊಳೆತ ಟೊಮೇಟೊ ರಸ್ತೆಗೆ ಎಸೆದಿದ್ದಕ್ಕೆ ಜಗಳವಾಡಿ ಕೊಲೆ ಮಾಡಿದ್ದ ಆರೋಪಿಗಳು
ಟೊಮೇಟೊ ವಿಚಾರಕ್ಕೆ ಮಹಿಳೆ ಕೊಲೆ ಪ್ರಕರಣ: ಆರೋಪಿಗಳು ಅಂದರ್! title=
ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಮೈಸೂರು: ಟೊಮೇಟೊ(Tomato) ವಿಚಾರದಲ್ಲಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಳೆತ ಟೊಮೇಟೊ ಎಸೆದ ವಿಚಾರದಲ್ಲಿ ಎದುರು ಮನೆ ಗೃಹಿಣಿಯನ್ನು ಇಬ್ಬರು ಆರೋಪಿಗಳು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ತಮಿಳುನಾಡಿನ ಧರ್ಮಪುರಿಯಲ್ಲಿ ಆರೋಪಿಗಳನ್ನು ಬಂಧಿಸಲುವಲ್ಲಿ ಉದಯಗಿರಿ ಠಾಣೆ ಪೊಲೀಸರು(Udayagiri Police Station) ಯಶಸ್ವಿಯಾಗಿದ್ದಾರೆ.

ಮೈಸೂರಿನ ಉದಯಗಿರಿಯ ಕೆ.ಎನ್.ಪುರ(KN Pura)ದ ಗಿರೀಶ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಫೆ.2ರಂದು ಕೆ.ಎನ್.ಪುರದ ನಿವಾಸಿ ಸುನೀತಾ ಎಂಬಾಕೆಯನ್ನು ಭೀಕರವಾಗಿ ಕೊಲೆ ಮಾಡಿ ನಂತರ ಆಕೆಯ ತಾಯಿ ಭಾರತಿ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಫೆ.2ರಂದು ಭಾರತಿ ತಮ್ಮ ಮನೆ ಬಳಿ ನಡೆಸುತ್ತಿದ್ದ ಅಂಗಡಿಯಿಂದ ಕೊಳೆತ ಟೊಮೋಟೊಗಳನ್ನು ಬೀದಿಗೆ ಬಿಸಾಡಿದ್ದರು.

ಇದನ್ನೂ ಓದಿ: ಕಾರವಾರದಲ್ಲಿ ಜನವಸತಿ ಪ್ರದೇಶಕ್ಕೆ ಬಂದ ಬೃಹತ್ ಮೊಸಳೆ!

ಈ ವಿಚಾರದಲ್ಲಿ ಎದುರು ಮನೆಯಲ್ಲಿದ್ದ ಶಿವರಾಜು ಗಲಾಟೆ(Mysuru Crime News) ಮಾಡಿದ್ದಾರೆ. ನಂತರ ಶಿವರಾಜು ಮಗ ಗಿರೀಶ್ ಈ ಬಗ್ಗೆ ಮತ್ತೆ ಕ್ಯಾತೆ ತೆಗೆದಿದ್ದಾನೆ. ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕುಪಿತನಾಗಿದ್ದ ಗಿರೀಶ್ ಮಚ್ಚಿನಿಂದ ಸುನಿತಾ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳ ಬಿಡಿಸಲು ಬಂದ ಸುನಿತಾರ ತಾಯಿ ಭಾರತಿ ಮೇಲೂ ಹಲ್ಲೆ ನಡೆಸಿದ್ದಾನೆ.

ಸುನಿತಾ ಸ್ಥಳದಲ್ಲೇ ಸಾವನ್ನಪ್ಪಿದರೆ(Murder Case), ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಕೃತ್ಯವೆಸಗಿದ ನಂತರ ಅಪ್ಪ-ಮಗ ಇಬ್ಬರೂ ಎಸ್ಕೇಪ್ ಆಗಿದ್ದರು. ಆರೋಪಿಗಳ ಬಂಧನಕ್ಕಾಗಿ ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶಶಿಧರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಇದನ್ನೂ ಓದಿ: Bangalore Crime : ರಾಜಧಾನಿಯಲ್ಲಿ ಅಮಾನವೀಯ ಕೃತ್ಯ : ಬೀದಿ ನಾಯಿಗೆ ಥಳಿಸಿ ಆಸಿಡ್ ಹಾಕಲು ಯತ್ನ!

ಉದಯಗಿರಿ ಠಾಣೆ(Udayagiri Police Station)ಯ ಇನ್ಸ್ ಪೆಕ್ಟರ್ ಪಿ.ಕೆ.ರಾಜು, ಸಬ್ ಇನ್ಸ್ ಪೆಕ್ಟರ್ ಗಳಾದ ಸುನಿಲ್ ಹಾಗೂ ನಾಗರಾಜ ನಾಯಕ್ ನೇತೃತ್ವದಲ್ಲಿ ಶಂಕರ್, ಸಿದ್ದಿಕ್ ಅಹ್ಮದ್, ಸೋಮಶೇಖರ್, ಪುಟ್ಟರಾಜು, ಗೋಪಾಲ್, ಆನಂದ್, ರಾಥೋಡ್, ಮೋಹನ್ ಕುಮಾರ್, ಶಿವರಾಜಪ್ಪ, ಸಮೀರ್ ರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News