ಬೆಂಗಳೂರು: ನಗರದಲ್ಲಿ ಮಾಂಸ ದಂಧೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿ.ಆರ್.ಮಧು (43), ಅಸ್ಸೋಂ ಮೂಲದ ರಫಿಕುಲ್ ಇಸ್ಲಾಂ (21), ಪಶ್ಚಿಮ ಬಂಗಾಳದ ರುಬೇಲ್ ಮಂಡಲ್ (28) ಎಂಬ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಅರೆಸ್ಟ್ (Arrest) ಮಾಡಿದ್ದಾರೆ.
ಇದನ್ನೂ ಓದಿ:ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಧಾರವಾಡ ಯುವಕನಿಗೆ ಅಭಿನಂದನೆಗಳ ಮಹಾಪೂರ
ವಿದ್ಯಾರಣ್ಯಪುರದ ಜಯಕೃಷ್ಣ ಬಡಾವಣೆಯ ಮನೆಯಲ್ಲಿ ಆರೋಪಿಗಳು ಮಾಂಸ ದಂಧೆ ನಡೆಸುತ್ತಿದ್ದರು. ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿ ಮಧು ಈ ದಂಧೆ ನಡೆಸಿತ್ತಿದ್ದ ಎಂದು ತಿಳಿದುಬಂದಿದೆ.
ಈತನಿಗೆ ರಫಿಕುಲ್ ಮತ್ತು ರುಬೇಲ್ ಮಂಡಲ್ ಮಹಿಳೆಯರನ್ನು ಪೂರೈಸುತ್ತಿದ್ದರು. ಈಶಾನ್ಯ ರಾಜ್ಯದ ಬಡ ಮಹಿಳೆಯರನ್ನು (Poor Women) ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು (Bangalore Police) ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ಈ ವೇಳೆ ಪಶ್ಚಿಮ ಬಂಗಾಳ ಮೂಲದ 35 ವರ್ಷದ ಮಹಿಳೆಯೊಬ್ಬರನ್ನು ಸಹ ರಕ್ಷಿಸಿದ್ದಾರೆ.
ಇದನ್ನೂ ಓದಿ:ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ: ಡಿಕೆಶಿ ವಿಶ್ವಾಸ
ಈ ಬಗ್ಗೆ ವಿದ್ಯಾರಣ್ಯಪುರ (Vidyaranyapura) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.