ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಅವಧಿ ಪೂರ್ಣ ಮಾಡುತ್ತಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel) ಹೇಳಿದ್ದಾರೆ. ಈ ಬಗ್ಗೆ ಮಂಗಳವಾರ ಮಾತನಾಡಿರುವ ಅವರ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ. ‘ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಪಕ್ಷ, ಸರ್ಕಾರದಲ್ಲಿ ಯಾವುದೇ ಬದಲಾವಣೆ(Basavaraj Bommai Cabinet Expansion) ಇಲ್ಲ’ ಅಂತಾ ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆ ಇಲ್ಲ, ಸಿಎಂ ಬಸವರಾಜ ಬೊಮ್ಮಾಯಿ ಅವರು ಅವಧಿ ಪೂರ್ಣ ಮಾಡುತ್ತಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಪಕ್ಷ, ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ : ಶ್ರೀ @nalinkateel #NalinSpeaks
— BJP Karnataka (@BJP4Karnataka) January 25, 2022
ಇದನ್ನೂ ಓದಿ: ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ನಮಗೂ ಮಂತ್ರಿಗಿರಿ ಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
‘ಕೆಲವೊಂದು ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವವರ ಜೊತೆ ಮಾತಾಡುತ್ತೇನೆ. ಶಿಸ್ತು ಸಮಿತಿ ಮೂಲಕ ವರಿಷ್ಠರಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುತ್ತೇವೆ. ಕೆಲವರಿಗೆ ಈಗಾಗಲೇ ಸ್ಪಷ್ಟೀಕರಣ ಕೇಳಿದ್ದು, ಅವರು ಸ್ಪಷ್ಟನೆ ನೀಡಿದ್ದಾರೆ’ ಅಂತಾ ಅನಗತ್ಯ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿರುವ ಕೆಲವು ಬಿಜೆಪಿ ನಾಯಕ(BJP MLA's)ರ ಬಗ್ಗೆ ನಳೀನ್ ಕುಮಾರ್ ಕಟೀಲ್(Nalin Kumar Kateel) ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಕೆಲವೊಂದು ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವವರ ಜೊತೆ ಮಾತಾಡುತ್ತೇನೆ. ಶಿಸ್ತು ಸಮಿತಿ ಮೂಲಕ ವರಿಷ್ಠರಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುತ್ತೇವೆ. ಕೆಲವರಿಗೆ ಈಗಾಗಲೇ ಸ್ಪಷ್ಟೀಕರಣ ಕೇಳಿದ್ದು, ಅವರು ಸ್ಪಷ್ಟನೆ ನೀಡಿದ್ದಾರೆ : ಶ್ರೀ @nalinkateel #NalinSpeaks
— BJP Karnataka (@BJP4Karnataka) January 25, 2022
ಇದನ್ನೂ ಓದಿ: ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಜಿ.ಪರಮೇಶ್ವರ್ ಅಂಜುತ್ತಿದ್ದಾರೆ: ಬಿಜೆಪಿ
ಬಿಜೆಪಿಯಲ್ಲಿ ಎಲ್ಲರೂ ಶಿಸ್ತು ಅನುಸರಿಸಬೇಕು. ಸಿಎಂ, ಅಧ್ಯಕ್ಷರು, ಶಾಸಕರಿಗೆ ಎಂದು ಬೇರೆ ಬೇರೆ ಶಿಸ್ತು ಎನ್ನುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು. ಬಿಜೆಪಿಯಲ್ಲಿ ಶಿಸ್ತು ಉಲ್ಲಂಘನೆಯನ್ನು ನಾವು ಸಹಿಸುವುದಿಲ್ಲ. ಯಾರೂ ಕೂಡ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು : ಶ್ರೀ @nalinkateel #NalinSpeaks
— BJP Karnataka (@BJP4Karnataka) January 25, 2022
‘ಬಿಜೆಪಿಯಲ್ಲಿ ಎಲ್ಲರೂ ಶಿಸ್ತು ಅನುಸರಿಸಬೇಕು. ಸಿಎಂ, ಅಧ್ಯಕ್ಷರು, ಶಾಸಕರಿಗೆ ಎಂದು ಬೇರೆ ಬೇರೆ ಶಿಸ್ತು ಎನ್ನುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು. ಬಿಜೆಪಿ(BJP)ಯಲ್ಲಿ ಶಿಸ್ತು ಉಲ್ಲಂಘನೆಯನ್ನು ನಾವು ಸಹಿಸುವುದಿಲ್ಲ. ಯಾರೂ ಕೂಡ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ವೇದಿಕೆಯಲ್ಲಿಯೇ ಮಾತನಾಡಬೇಕು. ಮುಂದಿನ ಚುನಾವಣೆಗಳಿಗೆ ಪೂರ್ಣಪ್ರಮಾಣದ ತಯಾರಿ ನಡೆಸುತ್ತಿದ್ದೇವೆ, ವಿಸ್ತಾರಕ್ ಯೋಜನೆ(Vistarak Campaign)ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ’ ಅಂತಾ ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.