ಮುಖ್ಯಮಂತ್ರಿ ಸಂಪರ್ಕಿಸಲು ಬಂದಿದೆ ಹೊಸ ಆಪ್

ಸರ್ಕಾರ ಮತ್ತು ಜನತೆಯ ನಡುವಿನ ಸಂಪರ್ಕವನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಸರಳವಾಗಿಸಲು 'ನಾಗರಿಕ ಸಂಪರ್ಕ ಸಾಧನ' ಆಪ್‌ ಅನ್ನು ನೂತನವಾಗಿ ಅಭಿವೃದ್ಧಿಪಡಿಸಲಾಗಿದೆ.

Last Updated : Nov 21, 2017, 11:15 AM IST
ಮುಖ್ಯಮಂತ್ರಿ ಸಂಪರ್ಕಿಸಲು ಬಂದಿದೆ ಹೊಸ ಆಪ್ title=

ಬೆಂಗಳೂರು: ಇನ್ನು ಮುಂದೆ ರಾಜ್ಯದ ಪ್ರತಿಯೊಬ್ಬ ಪ್ರಜೆಯು ಮುಖ್ಯಮಂತ್ರಿಗಳಿಗೆ ತಮ್ಮ ಸಮಸ್ಯೆಯ ಅಹವಾಲುಗಳನ್ನು ಸಲ್ಲಿಸಲು ಬೆಂಗಳೂರುವರೆಗೆ ಬರುವ ಅವಶ್ಯಕತೆ ಇಲ್ಲ. ಏಕೆಂದರೆ ಸರ್ಕಾರವು ಈಗ ಇ-ಆಡಳಿತದ ಮಹತ್ವವನ್ನು ಅರಿತಿದೆ. ಆದ್ದರಿಂದಾಗಿ ದಿನದಿಂದ ದಿನಕ್ಕೆ ಆಡಳಿತವನ್ನು ಪಾರದರ್ಶಕ ಮಾಡಲು ಸರ್ಕಾರವು ಎಲ್ಲಾ ವಿಭಾಗಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಸಿಕೊಳ್ಳುತ್ತಲೇ ಇದೆ. ಆ ಮೂಲಕ ರಾಜ್ಯದ ಎಲ್ಲ ಜನರನ್ನು ತಲುಪುವ ಮಹತ್ತರವಾದ ಯೋಜನೆಯನ್ನು ಈಗ ಸರ್ಕಾರವು ಕೈಗೊಂಡಿದೆ.

ಹಾಗಾದರೆ ಈ ಹೊಸ ಯೋಜನೆ ಯಾವುದಂತಿರಾ? ಅದೇ 'ಎ ಸಿಟಿಜನ್ ಔಟ್ರೀಚ್ ಇನಿಶೆಟಿವ್'(ನಾಗರಿಕ ಸಂಪರ್ಕ ಸಾಧನ ) ಎನ್ನುವ ಆಪ್, ಇದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ  ಬಿಡುಗಡೆಗೊಳಿಸಿದ್ದಾರೆ. ಆ ಮೂಲಕ ರಾಜ್ಯದ ಜನರು ತಮ್ಮ ಅಹವಾಲುಗಳನ್ನು ಸುಲಭವಾಗಿ ಮುಖ್ಯಮಂತ್ರಿಗಳಿಗೆ ತಲುಪಿಸಬಹುದು ಈ ಕುರಿತಾಗಿ  ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು "ಸರ್ಕಾರ ಮತ್ತು ಜನತೆಯ ನಡುವಿನ ಸಂಪರ್ಕವನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಸರಳವಾಗಿಸಲು 'ನಾಗರಿಕ ಸಂಪರ್ಕ ಸಾಧನ' ಆಪ್‌ ಅನ್ನು ನೂತನವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಮೂಲಕ ಜನರು ನೇರವಾಗಿ ತಮ್ಮ ಅಭಿಪ್ರಾಯ ಮತ್ತು ಅಹವಾಲುಗಳನ್ನು ಮುಖ್ಯಮಂತ್ರಿಗಳಲ್ಲಿ ಸಲ್ಲಿಸಬಹುದು" ಎಂದು ತಿಳಿಸಿದ್ದಾರೆ.

 

ಹಾಗಾದರೆ  ನೀವು ಮುಖ್ಯಮಂತ್ರಿಗಳನ್ನು ತಲುಪಲು ಮಾಡಬೇಕಾದ ಕೆಲಸವಿಷ್ಟೇ, ನಿಮ್ಮಲ್ಲಿ ಯಾರಾದರು ಆಂಡ್ರಾಯಿಡ ಮೊಬೈಲ್ ಇದ್ದರೆ ಸಾಕು ಪ್ಲೇ ಸ್ಟೋರ್ ಮೂಲಕ ಈ ಆಪ್ ನ್ನು ಡೌನ್ಲೋಡ್ ಮಾಡಿಕೊಳ್ಳಿ, ಅಲ್ಲಿ ತಮ್ಮ ಅಹವಾಲುಗಳ ಮೂಲಕ  ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ.

Trending News