Murugesh Nirani : 'ರಾಜ್ಯದಲ್ಲಿ ಹದಿನೈದು ದಿನದೊಳಗಾಗಿ ಹೊಸ ಮರಳು ನೀತಿ ಜಾರಿ'

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ

Last Updated : May 23, 2021, 05:41 PM IST
  • ಹೊಸ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿ
  • ರಾಜ್ಯದಲ್ಲಿ ಇನ್ನು ಹದಿನೈದು ದಿನದೊಳಗಾಗಿ ಹೊಸ ಮರಳು ನೀತಿ
  • ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ
Murugesh Nirani : 'ರಾಜ್ಯದಲ್ಲಿ ಹದಿನೈದು ದಿನದೊಳಗಾಗಿ ಹೊಸ ಮರಳು ನೀತಿ ಜಾರಿ' title=

ಚಾಮರಾಜನಗರ : ರಾಜ್ಯದಲ್ಲಿ ಇನ್ನು ಹದಿನೈದು ದಿನದೊಳಗಾಗಿ ಹೊಸ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಯಾಗರರ ಜೊತೆ ಮಾತನಾಡಿದ ಸಚಿವ ಮುರುಗೇಶ ನಿರಾಣಿ(Murugesh Nirani), ಹೊಸ ಮರಳು ಹಾಗೂ ಗಣಿ ನೀತಿ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಕರಡು ಪ್ರತಿಯನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗಿದ್ದು, ಈ ಕುರಿತು ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದು ನೂತನ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದೆಂದು ತಿಳಿಸಿದರು.

ಇದನ್ನೂ ಓದಿ : S Suresh Kumar : PUC ಪರೀಕ್ಷೆಗಳ ಬಗ್ಗೆ ಮಹತ್ವದ ಮಾಹಿತಿ : ಸಚಿವ ಸುರೇಶ್ ಕುಮಾರ್!

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುತ್ತಿದೆ. ಹೊಸ ಗಣಿ ನೀತಿ(New sand policy 2021)ಯನ್ನು ತರಲಾಗುತ್ತಿದ್ದು, ತ್ವರಿತ ಕಾರ್ಯನಿರ್ವಹಣೆ ಹಾಗೂ ಸರಳೀಕರಣಕ್ಕಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ. ಇಲಾಖೆಯ ಅಧಿಕಾರಿಗಳಿಗೆ ಪೊಲೀಸರಂತೆ ಸಮವಸ್ತ್ರ, ಪ್ರತ್ಯೇಕ ವಾಹನ, ಮೈನಿಂಗ್‌ಗಳಿಗೆ ತೆರಳುವಾಗ ಸೆಕ್ಯೂರಿಟಿ ಗಾರ್ಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Basavaraj Bommai : ಅಂತರ ರಾಜ್ಯ ಪ್ರಯಾಣಿಕರಿಗೆ 'ಕೋವಿಡ್ ನೆಗೆಟಿವ್' ಕಡ್ಡಾಯ!

ಮರಳನ್ನು ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಎತ್ತಿನ ಗಾಡಿಯಲ್ಲಿ ಸಣ್ಣ ಪ್ರಮಾಣದಲ್ಲಿ ಸ್ವಂತ ಬಳಕೆಗೆ ಸಾಗಿಸುವವರ ವಿರುದ್ಧ ಎಫ್‌ಐಆರ್(FIR) ದಾಖಲು ಮಾಡಬಾರದೆಂದು ಸೂಚಿಸಲಾಗಿದೆ ಎಂದು  ಸ್ಪಷ್ಟಪಡಿಸಿದರು.

ಇದನ್ನೂ ಓದಿ : Karnataka Govt : ಚಾಮರಾಜನಗರ ಆಕ್ಸಿಜನ್ ದುರಂತ : ಸರ್ಕಾರದಿಂದ ಸಂತ್ರಸ್ತರಿಗೆ ₹ 2 ಲಕ್ಷ ಪರಿಹಾರ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News