ಯಾರೂ ಸಹ ಹಸಿವಿನಿಂದ ನರಳಬಾರದು: ಅಧಿಕಾರಿಗಳಿಗೆ ಸಚಿವ ಕೆ. ಗೋಪಾಲಯ್ಯ ಕಟ್ಟುನಿಟ್ಟಿನ ಆದೇಶ

ರಾಜ್ಯದಲ್ಲಿ 1.88 ಲಕ್ಷ  ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಮಂತ್ರಿಯವರ ಆದೇಶದಂತೆ ಅರ್ಜಿ ಸಲ್ಲಿಸಿದ್ದ ಎಲ್ಲ ಕುಟುಂಬಗಳಿಗೂ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳವರೆಗೆ ಪ್ರತಿ ತಿಂಗಳು 10 ಕೆ.ಜಿ ಉಚಿತ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.   

Written by - Yashaswini V | Last Updated : Apr 30, 2020, 07:53 AM IST
ಯಾರೂ ಸಹ ಹಸಿವಿನಿಂದ ನರಳಬಾರದು: ಅಧಿಕಾರಿಗಳಿಗೆ ಸಚಿವ ಕೆ. ಗೋಪಾಲಯ್ಯ ಕಟ್ಟುನಿಟ್ಟಿನ ಆದೇಶ title=

ಹಾವೇರಿ: ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯದ ಪಡಿತರಿಗೆ ಯಾವ ಮೋಸಗಳು ಆಗಬಾರದು ಮತ್ತು ಯಾರು ಹಸಿವಿನಿಂದ ನರಳಬಾರದು ಅವರಿಗೆಲ್ಲಾ ಆಹಾರ ಪೂರೈಕೆ ಇಲಾಖೆಯಿಂದ ಸಿಗಬೇಕಾದಂದ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ  ಕೆ. ಗೋಪಾಲಯ್ಯ (K Gopalaiah) ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಶಿಸ್ತಿನಿಂದ ಕಾರ್ಯನಿರ್ವಹತ್ತಿದ್ದಾರಾ? ಏನಾದರು ತೊಂದರೆಗಳು ಇವೆಯಾ? ಜೊತೆಗೆ ಗೋದಾಮುಗಳ ವ್ಯವಸ್ಥೆ ಹೇಗಿದೆ ಅನ್ನೊದನ್ನ ಪರಿಶೀಲಿಸಲು ಸಚಿವರು ಮೂರು ದಿನಗಳ ಜಿಲ್ಲಾ ಪ್ರವಾಸವನ್ನ ಕೈಗೊಂಡಿದ್ದು, ಹಾವೇರಿ ಜಿಲ್ಲೆಗೆ ಭೇಟಿನೀಡಿ ವೇಳೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು‌‌‌.

ಬಳಿಕ ಮಾತನಾಡಿದ ಅವರು, ಹಾವೇರಿ ಜಿಲ್ಲೆನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳು ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ನೀಡುತ್ತಿರುವ ಪಡಿತರ 95 % ರಷ್ಟು ವಿತರಣೆಯಾಗಿದೆ. ಜೊತೆಗೆ ರಾಜ್ಯದಲ್ಲಿ 1.88 ಲಕ್ಷ  ಬಿಪಿಎಲ್ ಕಾರ್ಡು (BPL Card)ಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಮಂತ್ರಿಯವರ ಆದೇಶದಂತೆ ಅರ್ಜಿ ಸಲ್ಲಿಸಿದ್ದ ಎಲ್ಲ ಕುಟುಂಬಗಳಿಗೂ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳವರೆಗೆ ಪ್ರತಿ ತಿಂಗಳು 10 ಕೆ.ಜಿ ಉಚಿತ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಎಪಿಎಲ್ ಕಾರ್ಡ್ ದಾರರಿಗೂ ಪ್ರತಿ ತಿಂಗಳು 10 ಕೆಜಿ ಅಕ್ಕಿಗೆ 15 ರೂ ನಂತೆ ಪಡಿತರಿಗೆ ವಿತರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕರೋನಾವೈರಸ್ (Coronavirus) ಸಂಕಷ್ಟದ ವೇಳೆ ಕೇಂದ್ರ ಸರ್ಕಾರ ಈ ರಾಜ್ಯದ ಜನರಿಗೆ ಮೂರು ತಿಂಗಳು ಉಚಿತವಾಗಿ ಪ್ರತಿ ಮನೆಯ ಒಬ್ಬರಿಗೆ 5 ಕೆಜಿ ಅಕ್ಕಿಯನ್ನ. ಅಂದರೆ ಏಪ್ರಿಲ್, ಮೇ, ಜೂನ್ ತಿಂಗಳ ಒಟ್ಟು 15 ಕೆ.ಜಿ ಅಕ್ಕಿಯನ್ನ ಒಬ್ಬ ವ್ಯಕ್ತಿಗೆ ಮತ್ತು 3 ಕೆ.ಜಿ ಬೇಳೆಯನ್ನ ಕೊಟ್ಟು ನಮ್ಮ ರಾಜ್ಯಕ್ಕೆ ಸಾಕಷ್ಟು ಅನುಕೂಲವನ್ನ ಮಾಡಿದೆ ಹಾಗಾಗಿ ಈ ಸಂದರ್ಭ ಪ್ರಧಾನಿ ಮೋದಿಯವರಿಗೆ ನಾವು ಕೃತಜ್ಞತೆಯನ್ನ ಸಲಿಸಬೇಕು ಎಂದರು. 

ಕೊರೋನಾ ಕಷ್ಟಕಾಲದಲ್ಲಿ ಮೋಸಮಾಡುತ್ತಿರುವ ನ್ಯಾಯಬೆಲೆ ಪರವಾನಗಿ ರದ್ದು: ಗೋಪಾಲಯ್ಯ

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮೂರು ತಿಂಗಳು ಉಚಿತವಾಗಿ ಗ್ಯಾಸ್ ಸಿಲೆಂಡರ್ ಕೊಡೋದಕ್ಕೆ ಆಗ್ನೆಯನ್ನ ಮಾಡಿ, ಈಗಾಗಲೇ ಏಪ್ರಿಲ್ ತಿಂಗಳ ಸಂಪೂರ್ಣ ಹಣವನ್ನ ಗ್ಯಾನ್ ತೆಗೆದುಕೊಂಡಿದ್ದ 31.5 ಲಕ್ಷ  ಕುಟುಂಬಕ್ಕು ಪಾವತಿಯನ್ನ ಮಾಡಿದೆ. ಹಾವೇರಿ ಜಿಲ್ಲೆಯ ಎಲ್ಲಾ ಕುಟುಂಬಕ್ಕು ಅದೇ ರೀತಿ ಪಾವತಿಸಲಾಗಿದೆ. ಜೊತೆಗೆ  ಮುಖ್ಯ ಮಂತ್ರಿಗಳ ಅನಿಲ ಭಾಗ್ಯ ಯೋಜನೆಗೆ 27 ಕೋಟಿ ಹಣವನ್ನ ಕೊಡೋದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು. ಯಾರು ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೂ ಮೂರುತಿಂಗಳ ಗ್ಯಾಸ್ ಸಿಲಿಂಡರ್ ನ್ನ ಉಚಿತವಾಗಿ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಪಡಿತರದಾರರಿಗೆ ವಂಚಿಸುವ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದು - ಸಚಿವ ಕೆ. ಗೋಪಾಲಯ್ಯ

ಹಾವೇರಿಯಲ್ಲಿ ಜಿಲ್ಲಾ ಅಧಿಕಾರಿಗಳು ಹತ್ತಾರು ಟೀಮ್ ಗಳನ್ನ ಮಾಡಿ ಪ್ರತಿ ಅಂಗಡಿಗಳಿಗೆ ಬೇಟಿ ನೀಡಬೇಕು. ನ್ಯಾಯಬೆಲೆ ಅಂಗಡಿ ಮಾಲಿಕರು ಪಡಿತರ ಬಳಿ 1ರುಪಾಯಿ ಹಣ ಪಡಿಯಬಾರದು, ತೂಕದಲ್ಲಿ ವ್ಯತ್ಯಾಸ ಮಾಡಬಾರದು ಹಾಗೇ ಎಲ್ಲರ ಮೇಲೂ ನಿಗವಗಿಸಬೇಕು ಯಾಕೆಂದರೆ ನಮ್ಮದು ಬಡವರ ಪರವಾಗಿರುವ ಸರ್ಕಾರ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಸಿಎಂ ಉದಾನೆ, ನೆಹರು ಜಲೇಕಾರ, ಅರುಣ ಕುಮಾರ್ ಪೂಜಾರಿ ಮತ್ತಿತರರಿದ್ದರು.
 

Trending News