ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಶಿಕ್ಷಕರ ಕೊರತೆ..! ಮಕ್ಕಳು ಬಂದರೂ ಟೀಚರ್ ಇಲ್ಲ ..!

ಇದೀಗ ಕರೋನಾ ಕೇಸ್ ಗಳಲ್ಲಿ ಇಳಿಮುಖ ವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ . ಆದರೆ ಈ ಬಾರಿ ಕೂಡಾ ಬಿಬಿಎಂಪಿ ಶಾಲೆಗಳಲಿ ಶಿಕ್ಷಕರ ಕೊರತೆ ಕಾಣಿಸಿಕೊಂಡಿದೆ. 

Written by - Ranjitha R K | Last Updated : Jun 9, 2022, 11:03 AM IST
  • ಶಾಲೆಗೆ ಮಕ್ಕಳು ಬಂದರೂ ಶಿಕ್ಷಕರಿಲ್ಲ
  • ಪಾಲಿಕೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ
  • ಮಕ್ಕಳ ವಿದ್ಯಾಭ್ಯಾಸದ ಮೇಲೆ ಬೀಳುತ್ತಿದೆ ಪರಿಣಾಮ
ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಶಿಕ್ಷಕರ ಕೊರತೆ..! ಮಕ್ಕಳು ಬಂದರೂ ಟೀಚರ್ ಇಲ್ಲ ..!  title=
no teachers in bbmp school ( file photo)

ಬೆಂಗಳೂರು : ಬೆಂಗಳೂರಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಶಾಲೆಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದರೂ, ಶಿಕ್ಷಕರು ಮಾತ್ರ ಇಲ್ಲ.  ಪಾಲಿಕೆ ವ್ಯಾಪ್ತಿಯ ಬಹುತೇಕ ಶಾಲೆಗಳಲ್ಲಿ ಇದೆ ಸ್ಥಿತಿ ಎದುರಾಗಿದೆ. ಈ ವರ್ಷ ಕೂಡಾ 
ಬಿಬಿಎಂಪಿ ಶಾಲಾ ಕಾಲೇಜಿಗೆ ಗುತ್ತಿಗೆ ಶಿಕ್ಷಕರೇ ಗತಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. 

ಕೊರೊನಾ ಹಿನ್ನೆಲೆಯಲ್ಲಿ ಸುಮಾರು 2 ವರ್ಷಗಳ ಕಾಲ ವಿದ್ಯಾರ್ಥಿಗಳು ಆನ್ಲೈನ್ ತರಗತಿಯಲ್ಲಿಯೇ ಪಾಠ ಕಲಿಯುವಂತಾಗಿತ್ತು. ಇದೀಗ ಕರೋನಾ ಕೇಸ್ ಗಳಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ . ಆದರೆ ಈ ಬಾರಿ ಕೂಡಾ ಬಿಬಿಎಂಪಿ ಶಾಲೆಗಳಲಿ ಶಿಕ್ಷಕರ ಕೊರತೆ ಕಾಣಿಸಿಕೊಂಡಿದೆ. ಶಾಲೆಗೆ ಮಕ್ಕಳು ಬರುತ್ತಿದ್ದರೂ ಶಿಕ್ಷಕರು ಮಾತ್ರ ಬರುತ್ತಿಲ್ಲ. 

ಇದನ್ನೂ ಓದಿ :  ಬಳ್ಳಾರಿ ನಗರ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ

ಕರೋನಾ ಬಳಿಕ ಇದೀಗ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೂ ಬಿಬಿಎಂಪಿ ಮಾತ್ರ ಇನ್ನು ಕೂಡಾ  ಶಿಕ್ಷಕರನ್ನ ನೇಮಕ ಮಾಡಿಕೊಂಡಿಲ್ಲ. ಬಿಬಿಎಂಪಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದು  ವಿದ್ಯಾರ್ಥಿಗಳ ಕಲಿಕೆ ಮೇಲೆ ನೇರ ಪರಿಣಾಮ ಬೀಳಲಿದೆ. 

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 23 ಸಾವಿರ ವಿದ್ಯಾರ್ಥಿಗಳು ಶಾಲೆಗೆ ದಾಖಲಾತಿ ಪಡೆದಿದ್ದಾರೆ. ಈ ವರ್ಷ 5% ರಷ್ಟು ವಿದ್ಯಾರ್ಥಿಗಳ ದಾಖಾಲಾತಿ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಕೂಡಾ ಇದೆ. ಆದರೆ ಇಷ್ಟು ಮಕ್ಕಳಿಗೆ ಕೇವಲ 680 ಶಿಕ್ಷಕರು ಹೊರ ಗುತ್ತಿಗೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಇದನ್ನೂ ಓದಿ :  ನೀವು ನಿರುದ್ಯೋಗಿಗಳಾಗಿದ್ದರೆ ಕೂಡಲೇ ಈ ಯೋಜನೆ ಸದುಪಯೋಗ ಪಡೆದುಕೊಳ್ಳಿ

ಬಿಬಿಎಂಪಿ ಹಾಗೂ ಶಿಕ್ಷಣ ಇಲಾಖೆಗೆ  ಈ ಬಗ್ಗೆ ಮಾಹಿತಿಯಿದ್ದರೂ  ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಗೊತ್ತಿದ್ದರೂ ಪಾಲಿಕೆ ಮಾತ್ರ ಕೈ ಕಟ್ಟಿ ಕುಳಿತಿದೆ ಎನ್ನುವುದು ಪೋಷಕರ ಆರೋಪ . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News