ರಾತ್ರೋ ರಾತ್ರಿ ಸರ್ಕಾರಿ ಶಾಲಾ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಹಳೇ ಕೆನರಾ ಬ್ಯಾಂಕ್ ಪಕ್ಲದಲ್ಲಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ಥಿಯಲ್ಲಿದ್ದನ್ನು ಕಂಡ ಅನಿತಾ ಚಾರಿಟಬಲ್ ಟ್ರಸ್ಟ ಹಾಗೂ ಲಿಯೋ ಕ್ಲಬ್ ಜೊತೆಗೂಡಿ ಅಭಿವೃಡಿಸುತ್ತಿದೆ.
ಈಗಾಗಲೇ ವರದಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಂಡಿದ್ದಾರೆ. ಇಂತಹ ಕೃತ್ಯಗಳು ಬೇರೆ ಶಾಲೆಗಳಲ್ಲಿ ನಡೆಯುತ್ತಿದ್ದರೆ ಅವುಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಒಂದೆಡೆ ಸರ್ಕಾರಿ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರೋ ಪಾಲಕರು. ಮತ್ತೊಂದೆಡೆ ಸರ್ಕಾರದಿಂದ ಮನರು ನಿಯೋಜನೆ ಕೈಯಲ್ಲಿ ಹಿಡಿದು ಶಾಲೆಗೆ ಹಾಜರಾದ ಶಿಕ್ಷಕ. ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯ ಬಿಟಿಡಿಎ ಆವರಣದಲ್ಲಿರೋ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ.
ಶಿಕ್ಷಕ ಶಾಲೆಗೆ ಬರದೆ ಕಳ್ಳಾಟವಾಡಿದ್ರೂ ಶಿಕ್ಷನ ಇಲಾಖೆಯಿಂದ ಸರ್ಕಾರಿ ಸಂಬಳ ಪಡೆಯುತ್ತಿದ್ದ. 2014ರಲ್ಲಿ ಈತ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ ನಿರ್ವಹಿಸಿದ್ದ. ಬಳಿಕ ಈತ ಶಾಲೆಗೆ ಶಾಲೆಗೆ ಚಕ್ಕರ್ ಹಾಕಿದ್ದ, ಆದರೆ ತಿಂಗಳ ಕೊನೆಗೆ ಹಾಜರಾತಿ ಪುಸ್ತಕಕ್ಕೆ ನಿತ್ಯ ಸಹಿ ಹಾಕುತ್ತಿದ್ದ.
ವಿಜಯಪುರ ಜಿಲ್ಲೆಯಲ್ಲಿ 3 ದಿನದಿಂದ ನಿರಂತರ ಮಳೆ
ಭಾರಿ ಮಳೆಗೆ ಸೋರುತ್ತಿದೆ ಸರ್ಕಾರಿ ಶಾಲೆ ಮೇಲ್ಛಾವಣಿ
ಪ್ರತೀ ಕ್ಷಣವೂ ಆತಂಕ.. ಭಯದಲ್ಲೇ ಮಕ್ಕಳಿಗೆ ಪಾಠ.!
ಶಾಲೆಯ ಫುಟ್ಪಾತ್ನಲ್ಲಿ ಕುಳಿತು ವಿದ್ಯಾರ್ಥಿಗಳ ಕಲಿಕೆ
ಕೂಡಲೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರ ಆಗ್ರಹ
ಸಿದ್ದಯ್ಯನಪುರ ಗ್ರಾಮದಲ್ಲಿ 7-8 ಮಂದಿ ಹಿರಿಯರು ಈಗಲೂ ಹಬ್ಬ-ಹರಿದಿನಗಳಲ್ಲಿ ಪಾರಂಪರಿಕ ಕಲೆಯಾದ ದೊಣ್ಣೆ ವರಸೆಯನ್ನು ಪ್ರದರ್ಶನ ಮಾಡಲಿದ್ದಾರೆ. ಅದರಂತೆ, ಕಳೆದ ದೀಪಾವಳಿ ಹಬ್ಬದಲ್ಲಿ ಹಿರಿಯರು ದೊಣ್ಣೆ ಹಿಡಿದು ಗರಗರನೇ ತಿರುಗಿಸುತ್ತಿದ್ದ ಚಾಕಚಕತ್ಯತೆಗೆ ಮನಸೋತ ಚಿರಂತ್, ಜಯಸುಂದರ್, ಪ್ರೀತಂ, ಜೀವನ್, ಅರ್ಜುನ್ ಎಂಬ ಬಾಲಕರು ತಾವು ದೊಣ್ಣೆ ಹಿಡಿದು ಏಕಲವ್ಯರಂತೆ ವರಸೆಯನ್ನು ಕಲಿತಿದ್ದಾರೆ.
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸ್ವಾತಂತ್ರ್ಯ ಪೂರ್ವದಲ್ಲಿ ಶುರುವಾದ ಸರ್ಕಾರಿ ಶಾಲೆ 77 ವರ್ಷಗಳ ನಂತರ ಮಾರಾಟಕ್ಕಿದೆ. ದುರಂತ ಅಂದ್ರೆ ಸರ್ಕಾರಿ ಶಾಲೆಯನ್ನು ಮಾರಾಟಕ್ಕೆ ಇಟ್ಟಿರೋದು ಕಂದಾಯ ಇಲಾಖೆ. ಅರೇ, ಕಥೆ ತುಂಬಾ ಇಂಟ್ರೆಸ್ಟಿಂಗ್ ಅನ್ನಿಸುತ್ತಿದ್ಯಾ..? ಹಾಗಾದ್ರೆ ಈ ಸ್ಟೋರಿ ನೋಡಿ..
ಇದೀಗ ಕರೋನಾ ಕೇಸ್ ಗಳಲ್ಲಿ ಇಳಿಮುಖ ವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ . ಆದರೆ ಈ ಬಾರಿ ಕೂಡಾ ಬಿಬಿಎಂಪಿ ಶಾಲೆಗಳಲಿ ಶಿಕ್ಷಕರ ಕೊರತೆ ಕಾಣಿಸಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.