Covid-19: ಕೋವಿಡ್‌ ಪಾಸಿಟಿವ್‌ ಬಂದ ವಿದ್ಯಾರ್ಥಿಗಳಿಗೆ ಇಂದು ಮತ್ತೆ ಟೆಸ್ಟ್‌: ಮುಂದೇನು?

ಇನ್ನು ಪೀಣ್ಯ ಎರಡನೇ ಹಂತದ ನ್ಯೂ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆಯ 21 ಮಕ್ಕಳಿಗೆ ಕೊರೊನಾ ನೆಗಟಿವ್ ಬಂದಿದೆ. ಎಂಇಎಸ್‌ ಶಾಲೆಯ 10 ವಿದ್ಯಾರ್ಥಿಗಳ ರಿಪೋರ್ಟ್‌ ಬರಬೇಕಿದೆ. ಪಾಸಿಟಿವ್‌ ಬಂದು ಏಳು ದಿನ ಕಳೆದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೊರೊನಾ ಟೆಸ್ಟ್‌ ಮಾಡಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. 

Written by - Bhavishya Shetty | Last Updated : Jun 15, 2022, 11:42 AM IST
  • ಕೋವಿಡ್ ನಾಲ್ಕನೇ ಅಲೆ ದಿನದಿಂದ ದಿನಕ್ಕೆ ಏರಿಕೆ
  • ನ್ಯೂ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆಯ 21 ಮಕ್ಕಳಿಗೆ ಕೊರೊನಾ ನೆಗಟಿವ್
  • ಇಂದು ಮತ್ತೆ ಕೊರೊನಾ ಟೆಸ್ಟ್‌ ಮಾಡಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ
Covid-19: ಕೋವಿಡ್‌ ಪಾಸಿಟಿವ್‌ ಬಂದ ವಿದ್ಯಾರ್ಥಿಗಳಿಗೆ ಇಂದು ಮತ್ತೆ ಟೆಸ್ಟ್‌: ಮುಂದೇನು?  title=
Covid-19

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಧ್ಯೆ ಕಳೆದ ದಿನ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಇಂದು ಪಾಸಿಟಿವ್‌ ಬಂದ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಏಳು ದಿನಗಳ ಹಿಂದೆ ಶಾಲಾ ಮಕ್ಕಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದರ ವರದಿ ಬಂದಿದ್ದು, 31 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿತ್ತು. 

ಇದನ್ನು ಓದಿ: ಹಿಂದಿ ಭಾಷೆ ಗೊತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಪ್ರವಾಸ ಭಾಗ್ಯ..!

ಇನ್ನು ಪೀಣ್ಯ ಎರಡನೇ ಹಂತದ ನ್ಯೂ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆಯ 21 ಮಕ್ಕಳಿಗೆ ಕೊರೊನಾ ನೆಗಟಿವ್ ಬಂದಿದೆ. ಎಂಇಎಸ್‌ ಶಾಲೆಯ 10 ವಿದ್ಯಾರ್ಥಿಗಳ ರಿಪೋರ್ಟ್‌ ಬರಬೇಕಿದೆ. ಪಾಸಿಟಿವ್‌ ಬಂದು ಏಳು ದಿನ ಕಳೆದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೊರೊನಾ ಟೆಸ್ಟ್‌ ಮಾಡಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. ರ್ಯಾಪಿಡ್ ಆಂಟಿಜನ್ ಮತ್ತು ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಲು ದಾಸರಹಳ್ಳಿ ಅರೋಗ್ಯಾಧಿಕಾರಿಗಳು ನಿರ್ಧರಿಸಿದ್ದಾರೆ. 

ಇದನ್ನು ಓದಿ: OPPO 5G ಸ್ಮಾರ್ಟ್‌ಫೋನ್ ಅನ್ನು ಕೇವಲ 3,499 ರೂ.ಗೆ ಖರೀದಿಸಬಹುದು

ಹೋಂ ಐಸೋಲೇಶನ್‌ ಆಗಿರುವ ವಿದ್ಯಾರ್ಥಿಗಳ ಮನೆಗೆ ತೆರಳಿ ಸ್ವಾಬ್ ಟೆಸ್ಟ್‌ ಮಾಡಲು ಆರೋಗ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇಂದು ಕೊರೊನಾ ನೆಗೆಟಿವ್ ಬಂದರೆ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್‌ ವ್ಯಕ್ತಿಗಳು ಸೇಫ್‌ ಆಗಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News