ನಮ್ಮ ಗ್ಯಾರಂಟಿಗಳು ಜನರ ಬದುಕನ್ನು ಉತ್ತಮಪಡಿಸುತ್ತಿವೆ-ಸಚಿವ ಎಂ.ಬಿ.ಪಾಟೀಲ್

MB Patil: ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಅಭ್ಯರ್ಥಿ ಪರವಾಗಿ ಜಯಘೋಷ ಮೊಳಗಿಸಿದರು. ಕಾರ್ಯಕರ್ತರ ಉತ್ಸಾಹವೇ ಪಕ್ಷದ ಬಲವಾಗಿದ್ದು, 1ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಶ್ರೀ ರಾಜು ಅವರು ವಿಜಯ ಸಾಧಿಸಲಿದ್ದಾರೆಂಬ ವಿಶ್ವಾಸ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.

Written by - Manjunath N | Last Updated : Apr 18, 2024, 12:03 AM IST
  • ಸಂಸತ್ತಿನಲ್ಲಿ ಯಾವುದೇ ವಿಷಯದ ಕುರಿತು ಪ್ರಶ್ನಿಸಿಲ್ಲ
  • ನಮ್ಮ ಧ್ವನಿಯಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ, ಜಿಲ್ಲೆಯ ಜನತೆಗೆ ವಂಚಿಸಿದ್ದಾರೆ
  • ಈ ಬಾರಿ ಅವರನ್ನು ತಿರಸ್ಕರಿಸಬೇಕಿದೆ
ನಮ್ಮ ಗ್ಯಾರಂಟಿಗಳು ಜನರ ಬದುಕನ್ನು ಉತ್ತಮಪಡಿಸುತ್ತಿವೆ-ಸಚಿವ ಎಂ.ಬಿ.ಪಾಟೀಲ್ title=

ವಿಜಯಪುರ: ನಮ್ಮ ಗ್ಯಾರಂಟಿಗಳು ಜನರ ಬದುಕನ್ನು ಉತ್ತಮಪಡಿಸುತ್ತಿವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಬಬಲೇಶ್ವರ ಮತ ಕ್ಷೇತ್ರದ ಕನಮಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

'ನಮ್ಮ ಗ್ಯಾರಂಟಿಗಳು ಜನರ ಬದುಕನ್ನು ಉತ್ತಮಪಡಿಸುತ್ತಿರುವುದರ ಕುರಿತು ವಿವರವಾಗಿ ತಿಳಿಸಿಕೊಟ್ಟೆ.ವಿಜಯಪುರದಿಂದ ಆಯ್ಕೆಯಾಗಿ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ ಅವರು ಕೇಂದ್ರ ಸರ್ಕಾರದಿಂದ ಸೂಕ್ತ ಯೋಜನೆಗಳನ್ನೇ ತಂದಿಲ್ಲ! ಸಂಸತ್ತಿನಲ್ಲಿ ಯಾವುದೇ ವಿಷಯದ ಕುರಿತು ಪ್ರಶ್ನಿಸಿಲ್ಲ. ನಮ್ಮ ಧ್ವನಿಯಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ, ಜಿಲ್ಲೆಯ ಜನತೆಗೆ ವಂಚಿಸಿದ್ದಾರೆ. ಈ ಬಾರಿ ಅವರನ್ನು ತಿರಸ್ಕರಿಸಬೇಕಿದೆ.ಸುಶಿಕ್ಷಿತ ಶ್ರೀ ರಾಜು ಆಲಗೂರ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದೆ ಎಂದು ಹೇಳಿದರು.

ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಅಭ್ಯರ್ಥಿ ಪರವಾಗಿ ಜಯಘೋಷ ಮೊಳಗಿಸಿದರು. ಕಾರ್ಯಕರ್ತರ ಉತ್ಸಾಹವೇ ಪಕ್ಷದ ಬಲವಾಗಿದ್ದು, 1ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಶ್ರೀ ರಾಜು ಅವರು ವಿಜಯ ಸಾಧಿಸಲಿದ್ದಾರೆಂಬ ವಿಶ್ವಾಸ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.

ಸಭೆಗೂ ಮುನ್ನ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ, ಸಾರ್ವಜನಿಕರ ಗಮನ ಸೆಳೆದರು.ಎಂಎಲ್ಸಿ ಶ್ರೀ ಪ್ರಕಾಶ್ ರಾಠೋಡ್, ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸೇರಿದಂತೆ ಜಿಲ್ಲೆ ಹಾಗೂ ಜಿಪಂ ವ್ಯಾಪ್ತಿಯ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News