ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ

ಮಂಗಳೂರು ದಸರಾವನ್ನು ಯಾವುದೇ ಅನುದಾನ ಪಡೆಯದೇ ನಡೆಸುತ್ತಿರೋದು ಆಶ್ಚರ್ಯಕರ- ಸಿಎಂ ಹೆಚ್.ಡಿ. ಕುಮಾರಸ್ವಾಮಿ  

Last Updated : Oct 15, 2018, 08:43 AM IST
ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ title=

ಮಂಗಳೂರು: ನವರಾತ್ರಿ ಮಹೋತ್ಸವ ಮತ್ತು ಮಂಗಳೂರು ದಸರಾ 2018 ನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾನುವಾರ(ಅ.14) ರಂದು ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಉದ್ಘಾಟಿಸಿದರು. ನಂತರ ಮಂಗಳೂರು ದಸರಾ 2018ರ ಸಭಾ ಕಾರ್ಯಕ್ರಮ ನಡೆಯಿತು.

ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ. ಜನಾರ್ದನ ಪೂಜಾರಿ ಅವರು ಹೇಳಿದಾಗ ಅವರ ಮಾತಿಗೆ ಗೌರವ ಕೊಟ್ಟು ಇಲ್ಲಿಗೆ ಆಗಮಿಸಿದೆ. ಅಲ್ಲದೇ, ಭಕ್ತಿಯಿಂದ ಆಗಮಿಸಿದ ಕ್ಷೇತ್ರದ ದೇವರ ದರ್ಶನ ಮಾಡಿದ್ದೇನೆ ಎಂದರು.

ಯಾವುದೇ ಅನುದಾನ ಪಡೆಯದೇ ದಸರಾ ನಡೆಸುತ್ತಿರೋದು ಆಶ್ಚರ್ಯಕರ:
ಮಂಗಳೂರು ದಸರಾ ವಿಶೇಷವಾಗಿದ್ದು, ಇದು ಜನತಾ ಉತ್ಸವ, ಜನತಾ ದಸರಾ. ಕೆಲವರು ನವರಾತ್ರಿ, ದಸರಾ ಉತ್ಸವಕ್ಕೆ ಅಷ್ಟು ಬೇಕು, ಇಷ್ಟು ಬೇಕು ಎಂದು ಕೇಳುತ್ತಾರೆ. ಆದರೆ ಯಾವುದೇ ಅನುದಾನ ಪಡೆಯದೇ ಮಂಗಳೂರು ದಸರಾವನ್ನು ನಡೆಸುತ್ತಿರುವುದು ಆಶ್ಚರ್ಯಕರ. ದಕ್ಷಿಣ ಕನ್ನಡ ‌ಜಿಲ್ಲೆಯಲ್ಲಿ ಬಡವರನ್ನೂ ಕಂಡಿದ್ದೇನೆ, ಶ್ರೀಮಂತರನ್ನೂ ಕಂಡಿದ್ದೇನೆ. ಆದರೆ, ಜನರೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ನಾಡು ಕಂಡ ಪ್ರಾಮಾಣಿಕ ರಾಜಕಾರಣಿ ಜನಾರ್ದನ ಪೂಜಾರಿ:
ಈ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ಅವರನ್ನು ಹಾಡಿ ಹೊಗಳಿದ ಸಿಎಂ, ನನ್ನನ್ನು ಸ್ವಾಗತಿಸಲು ಖುರ್ಚಿ ಹಾಕಿ ಮಳೆಯಲ್ಲಿ ಕೂತಿದ್ದ ಜನಾರ್ದನ ಪೂಜಾರಿಯವರ ಮೇಲೆ ನನಗೆ ವಿಶೇಷ ಗೌರವವಿದೆ. ಕ್ಷೇತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಕೊಡುಗೆ ನೀಡಿದವರು ಪೂಜಾರಿ. ಜನಾರ್ದನ ಪೂಜಾರಿ ನಾಡು ಕಂಡ ಪ್ರಾಮಾಣಿಕ ರಾಜಕಾರಣಿ ಎಂದರು.
 

Trending News