ರಾಜ್ಯದ ಜನತೆಗೆ ಸಂತಸದ ಸುದ್ದಿ, ಈ ಬೇಸಿಗೆಗಿಲ್ಲ ವಿದ್ಯುತ್ ಕೊರತೆ

2000 ಮೆಗಾವ್ಯಾಟ್ ಸಾಮಥ್ರ್ಯದ ಪಾವಗಡ ಸೌರಪಾರ್ಕಿನಲ್ಲಿ ಈಗಾಗಲೇ 600 ಮೆಗಾವ್ಯಾಟ್ ಸಾಮಥ್ರ್ಯದ ಯೋಜನೆಗಳು ಅನುಷ್ಠಾನಗೊಂಡಿವೆ - ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

Last Updated : Dec 14, 2018, 10:39 AM IST
ರಾಜ್ಯದ ಜನತೆಗೆ ಸಂತಸದ ಸುದ್ದಿ, ಈ ಬೇಸಿಗೆಗಿಲ್ಲ ವಿದ್ಯುತ್ ಕೊರತೆ title=

ಬೆಳಗಾವಿ: ಈ ಬೇಸಿಗೆಗೆ ಯಾವುದೇ ಕೊರತೆ ಇಲ್ಲದಂತೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಯಾವ ತೊಂದರೆಗಳೂ ಇಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಪ್ರತಿದಿನ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ 208 ಮಿಲಿಯನ್ ಯೂನಿಟ್‍ಗಳಾಗಿದೆ. ಮುಂಬರುವ ಬೇಸಿಗೆ ಹಾಗೂ ಪರೀಕ್ಷಾ ಸಮಯದಲ್ಲಿ 238 ಮಿಲಿಯನ್ ಯೂನಿಟ್‍ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಘಟಕಗಳಿಂದ ಮತ್ತು ರಾಜ್ಯದ ಆಂತರಿಕ ಮೂಲದ ವಿದ್ಯುತ್ ಘಟಕಗಳಿಂದ ಘೋಷಣೆಯಾದಂತೆ ವಿದ್ಯುತ್ ಲಭ್ಯವಾದರೆ ಯಾವುದೇ ಕೊರತೆ ಇಲ್ಲದಂತೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಯಾವ ತೊಂದರೆಗಳೂ ಇಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ವಿಧಾನಪರಿಷತ್ತಿನಲ್ಲಿ ಗುರುವಾರ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ರಾಜ್ಯದ ವಿದ್ಯುತ್ ಬೇಡಿಕೆಯು ವರ್ಷವಾರು ಸುಮಾರು 600-750 ಮೆಗಾವ್ಯಾಟ್‍ಗಳಷ್ಟು ಏರಿಕೆಯಾಗುತ್ತಿದೆ. ಇದನ್ನು ಗಮನಿಸಿ ಸೌರ ಮತ್ತು  ನವೀಕೃತ ಇಂಧನ ಮೂಲಗಳ ವಿದ್ಯುತ್ ಘಟಕಗಳ ಸ್ಥಾಪನೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. 370 ಮೆಗಾವ್ಯಾಟ್ ಸಾಮಥ್ರ್ಯದ ಯಲಹಂಕ ಅನಿಲ ಆಧಾರಿತ ವಿದ್ಯುತ್ ಯೋಜನೆ , 2000 ಮೆಗಾವ್ಯಾಟ್ ಸಾಮಥ್ರ್ಯದ ಪಾವಗಡ ಸೌರಪಾರ್ಕಿನಲ್ಲಿ ಈಗಾಗಲೇ 600 ಮೆಗಾವ್ಯಾಟ್ ಸಾಮಥ್ರ್ಯದ ಯೋಜನೆಗಳು ಅನುಷ್ಠಾನಗೊಂಡಿವೆ. 
1200 ಮೆಗಾವ್ಯಾಟ್ ಸಾಮಥ್ರ್ಯದ ಸೌರ ಯೋಜನೆಗಳನ್ನು ಕ್ರೆಡಲ್ ಮೂಲಕ ಟೆಂಡರ್ ಕರೆದು ಹಂಚಿಕೆ ಮಾಡಲಾಗಿದೆ. 43 ತಾಲ್ಲೂಕುಗಳಲ್ಲಿ 20 ಮೆಗಾವ್ಯಾಟ್‍ಗಳಂತೆ ಒಟ್ಟು 860 ಮೆಗಾವ್ಯಾಟ್ ಸಾಮಥ್ರ್ಯದ ಯೊಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ.

ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 2837 ಮೆಗಾವ್ಯಾಟ್ ಉತ್ಪಾದನೆ ಗರಿಷ್ಠ ಬೇಡಿಕೆ ದಾಖಲಾಗಿದೆ. ಬರುವ ದಿನಗಳಲ್ಲಿ 2800 ರಿಂದ 2950 ಮೆಗಾವ್ಯಾಟ್‍ಗಳಿಗೆ ಏರಿಕೆಯಾಬಹುದು ಎಂದು ಅಂದಾಜಿಸಲಾಗಿದೆ.    ಪ್ರತಿದಿನ 43 ರಿಂದ 48 ಮಿಲಿಯನ್ ಯೂನಿಟ್ ಬಳಕೆ ಅಂದಾಜಿಸಲಾಗಿದೆ ಎಂದು ಸಿಎಂ ತಿಳಿಸಿದರು.

Trending News