ಶ್ರೀ ಶಿವಕುಮಾರ್ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಗೆ ಆಹ್ವಾನ

ಶ್ರೀ ಶಿವಕುಮಾರ್ ಸ್ವಾಮಿಜಿ ಅವರ ಮೊದಲ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಪ್ರಧಾನಿ ಮೋದಿಯವರೆಗೆ ಆಹ್ವಾನ ನೀಡಿದ್ದಾರೆ.

Updated: Nov 28, 2019 , 03:05 PM IST
ಶ್ರೀ ಶಿವಕುಮಾರ್ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಗೆ ಆಹ್ವಾನ
file photo

ಬೆಂಗಳೂರು: ಶ್ರೀ ಶಿವಕುಮಾರ್ ಸ್ವಾಮಿಜಿ ಅವರ ಮೊದಲ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಪ್ರಧಾನಿ ಮೋದಿಯವರೆಗೆ ಆಹ್ವಾನ ನೀಡಿದ್ದಾರೆ.

ಮೋದಿಯವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿ ಮಾಡಿ ಜನವರಿ 21 ರಂದು ನಡೆಯಲಿರುವ ಪುಣ್ಯಸ್ಮರಣೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಆದರೆ ಆಗ ಗಣರಾಜ್ಯೋತ್ಸವ ಇರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಲಿಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. 

ಇನ್ನೊಂದೆಡೆಗೆ ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಪುಣ್ಯಸ್ಮರಣೆ ಕಾರ್ಯಕ್ರಮಕ್ಕೂ ಮೊದಲೇ ಪ್ರಧಾನಿ ಮೋದಿ ಮಠಕ್ಕೆ ಭೇಟಿ ನೀಡಲು ಮನವಿ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.