ರಾಜಧಾನಿಯ ಮೊತ್ತೊಂದು ಪ್ರಸಿದ್ಧ ದೇವಸ್ಥಾನಕ್ಕೆ ಪೊಲೀಸ್ ನೋಟಿಸ್- ಕೆಂಪಾಯ್ತು ಭಕ್ತರ ಕಣ್ಣು

ನಿನ್ನೆ ಮಲ್ಲೇಶ್ವರಂ ನ ಪುರಾತನ ದೇವಾಲಯವಾದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನೊಟೀಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದ್ರ ಬೆನ್ನಲ್ಲೆ ವೇಣುಗೋಪಾಲ ಸ್ವಾಮಿ ದೇವಾಲಯದ ಪಕ್ಕದಲ್ಲಿರೋ ಗಂಗಮ್ಮ ದೇವಿ ದೇವಸ್ಥಾನಕ್ಕೂ  ಪೊಲೀಸರಿಂದ ಶಬ್ದ ಮಾಲಿನ್ಯ ಮಾಡದಂತೆ ವಾರ್ನಿಂಗ್ ನೀಡಿರುವುದು ಬೆಳಕಿಗೆ ಬಂದಿದೆ. 

Written by - Manjunath Hosahalli | Edited by - Yashaswini V | Last Updated : Apr 22, 2022, 03:52 PM IST
  • ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ
  • ಶಬ್ದ ಮಾಲಿನ್ಯ ಮಾಡದಂತೆ ವಾರ್ನಿಂಗ್

    ಹೆಚ್ಚು ಧ್ವನಿವರ್ಧಕಗಳನ್ನು ಬಳಸದಂತೆ ಸೂಚನೆ
ರಾಜಧಾನಿಯ ಮೊತ್ತೊಂದು ಪ್ರಸಿದ್ಧ ದೇವಸ್ಥಾನಕ್ಕೆ ಪೊಲೀಸ್ ನೋಟಿಸ್- ಕೆಂಪಾಯ್ತು ಭಕ್ತರ ಕಣ್ಣು title=
Police Notice to Temple in bengaluru

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ದೇವಾಲಯಗಳ ಮೇಲೆ ಪೊಲೀಸ್ ರ ಕಣ್ಣು ಬಿದ್ದಿದೆ. ನಿತ್ಯವೂ ಪ್ರಸಿದ್ಧ ದೇವಾಲಯಗಳಿಗೆ ಅತಿಯಾದ ಶಬ್ದ ಬರುವಿಕೆ ವಿಚಾರವನ್ನು ಇಟ್ಟುಕೊಂಡು ನೋಟಿಸ್ ಮೇಲೆ ನೋಟಿಸ್ ಜಾರಿ ಮಾಡುತ್ತಿದ್ದಾರೆ.

ನಿನ್ನೆ ಮಲ್ಲೇಶ್ವರಂ ನ ಪುರಾತನ ದೇವಾಲಯವಾದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನೊಟೀಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದ್ರ ಬೆನ್ನಲ್ಲೆ ವೇಣುಗೋಪಾಲ ಸ್ವಾಮಿ ದೇವಾಲಯದ ಪಕ್ಕದಲ್ಲಿರೋ ಗಂಗಮ್ಮ ದೇವಿ ದೇವಸ್ಥಾನಕ್ಕೂ  ಪೊಲೀಸರಿಂದ ಶಬ್ದ ಮಾಲಿನ್ಯ ಮಾಡದಂತೆ ವಾರ್ನಿಂಗ್ ನೀಡಿರುವುದು ಬೆಳಕಿಗೆ ಬಂದಿದೆ. 

ಇದನ್ನೂ ಓದಿ- ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಪೊಲೀಸರ ನಡೆ ವಿರುದ್ಧ ಭಕ್ತರ ಅಸಮಾಧಾನ:
ನಿನ್ನೆ ಪೊಲೀಸ್ ಸಿಬ್ಬಂದಿಗಳಿಂದ ಮೌಕಿಕವಾಗಿ ನೋಟಿಸ್ ನೀಡಲಾಗಿದೆ. 45 ಡಿಸೆಬಲ್ ಗಿಂತ  ಹೆಚ್ಚು ಧ್ವನಿವರ್ಧಕ ಬಳಸದಂತೆ ಸೂಚಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ. ಹೆಚ್ಚು ಧ್ವನಿವರ್ಧಕಗಳನ್ನ ಬಳಸಬೇಡಿ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ- ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’

ನಾವು ಹಬ್ಬದ ದಿನಗಳಲ್ಲಿ ಮಾತ್ರ ಮೈಕ್ ಬಳಸುತ್ತೇವೆ:
ಇನ್ನು ಈ ಬಗ್ಗೆ ಮಾತನಾಡಿರುವ ಗಂಗಮ್ಮ ದೇವಿ ಅರ್ಚಕರು, ನಮ್ಮ ದೇವಾಲಯದಲ್ಲಿ ಹಬ್ಬದ ದಿನದಂದು ವಿಶೇಷ ಪೂಜೆ ವೇಳೆ ಅನುಮತಿ ಪಡೆಯುತ್ತೇವೆ. ಪೊಲೀಸರ ಅನುಮತಿ ಪಡೆದೇ ಧ್ವನಿವರ್ಧಕ ಬಳಸುತ್ತೇವೆ. ಆದ್ರೆ ನೋಟಿಸ್ ಯಾಕೆ ಕೊಟ್ಟಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅಸಮಧಾನ ಹೊರಹಾಕಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News