ಹನುಮಂತನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ರಸ್ತೆಯಲ್ಲೇ ನಿಂತ ವಾಹನ

62 ಎತ್ತರದ 750ಟನ್ ಭಾರದ ಹನುಮಂತನ ಮೂರ್ತಿಯೂ ನೀತಿ ಸಂಹಿತೆ ಬಿಸಿ ತಟ್ಟಿದೆ. 

Last Updated : Apr 4, 2018, 05:08 PM IST
ಹನುಮಂತನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ರಸ್ತೆಯಲ್ಲೇ ನಿಂತ ವಾಹನ title=

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇದರಿಂದಾಗಿ 62 ಎತ್ತರದ 750ಟನ್ ಭಾರದ ಹನುಮಂತನ ಮೂರ್ತಿಯೂ ನೀತಿ ಸಂಹಿತೆ ಬಿಸಿ ತಟ್ಟಿದೆ. 

ಹೌದು, ಬೆಂಗಳೂರಿನ ಹೆಚ್'ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹವನ್ನು ಸಾಗಿಸುತ್ತಿದ್ದ 300 ಚಕ್ರಗಳ ಬೃಹತ್ ವಾಹನವನ್ನು ಬೆಂಗಳೂರಿನಿಂದ 35 ಕಿ.ಮೀ. ದೂರದ ಹೊಸಕೋಟೆ ಸಮೀಪ ಸೋಮವಾರ ರಾತ್ರಿ ಪೊಲೀಸರು ತಡೆದಿದ್ದರು. ಇದರಿಂದಾಗಿ ಸುಮಾರು 15 ಗಂಟೆಗಳ ಕಾಲ NH-48ರಲ್ಲಿ ಸಂಚಾರಕ್ಕೆ ಅದ್ದಿಯುನ್ತಾಗಿತ್ತು. ಆದರೆ ಈ ವಿಚಾರ ಚುನಾವಣಾ ಆಯೋಗಕ್ಕೆ ತಿಳಿದು, ಮಧ್ಯಪ್ರವೇಶಿಸಿ ಪ್ರತಿಮೆ ಸಾಗಿಸಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ. 

Trending News