ಬೆಂಗಳೂರು : ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ ಮೂರು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Power cut in Bengaluru). ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಫೆಬ್ರವರಿ 12ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ (Bescom) ಹೇಳಿದೆ.
ಇಂದು ಅಂದರೆ ಫೆಬ್ರವರಿ 10 ರಂದು ಬೆಂಗಳೂರಿನ ದಕ್ಷಿಣ ವಲಯ, ಉತ್ತರ ವಲಯ ಮತ್ತು ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪಶ್ಚಿಮ ವಲಯದಲ್ಲಿ ಮಾತ್ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಪವರ್ ಕಟ್ (Power cut) ಉಂಟಾಗಲಿದೆ.
ಇಂದು ಪವರ್ ಕಟ್ ಇರಲಿರುವ ಏರಿಯಾಗಳು :
ಯಡಿಯೂರು ಕೆರೆ, ಜಯನಗರದ (Jayanagara) ಕೆಲವು ಭಾಗಗಳು, ಕೆಎಸ್ಆರ್ಟಿಸಿ ಕ್ವಾರ್ಟರ್ಸ್, ಗೌಡನಪಾಳ್ಯ, ವಸಂತಪುರ ಮುಖ್ಯ ರಸ್ತೆ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ ಬಿಎಡಿ ಕಾಂಪ್ಲೆಕ್ಸ್, ಕಿಮ್ಸ್ ಕಾಲೇಜು, ಚಿಕ್ಕಲಸಂದ್ರ, ತೂರಹಳ್ಳಿ, ಬಸ್ ನಿಲ್ದಾಣ, ಈಜಿಪುರ, ದೊಮ್ಮಲೂರು, ಮಾರುತಿ ನಗರ, ಹಳೆ ಮಡಿವಾಳ, ಡಾಲರ್ಸ್ ಕಾಲೋನಿ, ಎಸ್ಜೆಆರ್ ಕಾಲೇಜು ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ಮಾರತ್ಹಳ್ಳಿ, ವೀವರ್ಸ್ ಕಾಲೋನಿ ಮತ್ತು ಬಿಡಿಎ 9ನೇ ಹಂತದಲ್ಲಿ ಇಂದು ವಿದ್ಯುತ್ ಪೂರೈಕೆ (Power cut in Bengaluru) ಇರುವುದಿಲ್ಲ.
ಇದನ್ನೂ ಓದಿ : Karnataka Hijab Row:ಇಂದು ಮಧ್ಯಾಹ್ನ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದದ ವಿಚಾರಣೆ, ಶಾಲಾ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಹಾಗೆಯೇ ಬೆಂಗಳೂರು ಪೂರ್ವ ವಲಯ ಪ್ರದೇಶಗಳಲ್ಲಿಯೂ ಇಂದು ಸಂಜೆಯವರೆಗೆ ಕರೆಂಟ್ ಇರುವುದಿಲ್ಲ. ಉದಯ ನಗರ, ಕಸ್ತೂರಿ ನಗರ, ಎ. ನಾರಾಯಣಪುರ, ಕೆಜಿ ಪುರ ಮುಖ್ಯ ರಸ್ತೆ, ಜೋಗುಪಾಳ್ಯ, ಐಟಿಸಿ ಮುಖ್ಯರಸ್ತೆ, ಒಡ್ಡರಪಾಳ್ಯ, ಉಮರ್ ನಗರ, ನಾಗವಾರ, ವರ್ತೂರು ಮುಖ್ಯರಸ್ತೆ, ಹಲಸಹಳ್ಳಿ ರಸ್ತೆ, ಕೆಆರ್ ಪುರಂ ಮಾರುಕಟ್ಟೆ, ಮಹದೇವಪುರ ಮತ್ತು ಜಿಸಿ ಪಾಳ್ಯದಲ್ಲಿ ಪವರ್ ಕಟ್ ಇರಲಿದೆ.
ಇನ್ನು ಉತ್ತರ ವಲಯದ ಪ್ರದೇಶಗಳಾದ ರಾಜಾಜಿನಗರ, ಸದಾಶಿವನಗರ, ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ನ್ಯೂ ಬಿಇಎಲ್ ರಸ್ತೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಸಿಲ್ವೇಪುರ, ಕುಂಬಾರಹಳ್ಳಿ, ಕಲಾನಗರ, ಶಾರದಾಂಬ ನಗರ, ಎಚ್ಎಂಟಿ ಲೇಔಟ್, ಬಸವಲಿಂಗಪ್ಪ ನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಕೆ.ಬಿ. ರಂಕಾ ನಗರ, ಹೆಗಡೆ ನಗರ, ದ್ವಾರಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ, ಮಹೇಶ್ವರಿ ನಗರ, ಎಂಐಸಿಒ ಲೇಔಟ್ ಮತ್ತು ಜೆಸಿ ನಗರದಲ್ಲಿಯೂ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದೆ.
ಪಶ್ಚಿಮ ವಲಯದಲ್ಲಿ ಮಾತ್ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಾಗರಬಾವಿ ಮುಖ್ಯರಸ್ತೆ, ಮಾರುತಿ ನಗರ, ಕೆನರಾ ಬ್ಯಾಂಕ್ ಕಾಲೋನಿ, ಬಸವೇಶ್ವರನಗರ, ಮಂಜುನಾಥ ನಗರ, ಪಾಪಯ್ಯ ಗಾರ್ಡನ್, ಕೆಎಚ್ಬಿ 2ನೇ ಹಂತ, ಅಗ್ರಹಾರ ದಾಸರಹಳ್ಳಿ, ಸುಂಕದಕಟ್ಟೆ, ಬಿಎಚ್ಇಎಲ್ ಲೇಔಟ್, ರಾಘವೇಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಡಿ ಗ್ರೂಪ್ ಮಾವಿನ ರಸ್ತೆ, ವಿಘ್ನಳ್ಳಿ ರಸ್ತೆ, ಕೆಂಗೇರಿ ಮುಖ್ಯ ರಸ್ತೆ, ದುಬಾಸಿಪಾಳ್ಯ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ ಮತ್ತು ಭವಾನಿನಗರದ ನಿವಾಸಿಗಳು ವಿದ್ಯುತ್ ಸಮಸ್ಯೆ ಎದುರಿಸಬೇಕಾಗುತ್ತದೆ.
ಫೆಬ್ರವರಿ 11ರಂದು ಅಂದರೆ ನಾಳೆ ಪವರ್ ಕಟ್ ಇರಲಿರುವ ಏರಿಯಾಗಳು :
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕೆಆರ್ ರಸ್ತೆ, ಜಯನಗರ, ನಂಜಪ್ಪ ರಸ್ತೆ, ಶಾಂತಿನಗರ, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಸಿದ್ದಾಪುರ, ಸೋಮೇಶ್ವರನಗರ, ಬನಶಂಕರಿ ಥರ್ಡ್ ಸ್ಟೇಜ್ , ಸರ್ವಭೌಮನಗರ, ಮುರುಗೇಶಪಾಳ್ಯ, ಕುಂದಲಹಳ್ಳಿ ಗ್ರಾಮ, ಬಸವನಗರ, ವಿನಾಯಕ ನಗರ, ದೊಡ್ಡ ನೆಕುಂದಿ, ಬೊಮ್ಮನಹಳ್ಳಿ, ಬೇಗೂರು ಮುಖ್ಯರಸ್ತೆ ಹಾಗೂ 5ನೇ ಬ್ಲಾಕ್ ಬಿಡಿಎಯಲ್ಲಿ ವಿದ್ಯುತ್ ಪುಉರೈಕೆಯಲ್ಲಿ ವ್ಯತ್ಯಯವಾಗಲಿದೆ (POwer cut today in Bengaluru).
ಇದನ್ನೂ ಓದಿ : ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಶುಲ್ಕ ಪಾವತಿ: ಫೆ.21ರವರೆಗೆ ಅವಧಿ ವಿಸ್ತರಣೆ
ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮರಿಯಪ್ಪನಪಾಳ್ಯ, ಗಾಯತ್ರಿನಗರ, ನಾಗಪ್ಪ ಬ್ಲಾಕ್, ಸದಾಶಿವನಗರ, ನ್ಯೂ ಬಿಇಎಲ್ ರಸ್ತೆ, ಯಶವಂತಪುರ 1ನೇ ಮುಖ್ಯರಸ್ತೆ, ಅಬ್ಬಿಗೆರೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಲುಡುನಗರ, ಸಿಲ್ವೆಪುರ, ಕುಂಬಾರಹಳ್ಳಿ, ಆದಿತ್ಯನಗರ, ತಾತನಗರ, ದೇವಿನಗರ, ಲೊಟ್ಟೆಗೊಲ್ಲ ಹಳ್ಳಿ, ,ಶ್ರೀನಗರ 2ನೆ ಹಂತ, ಹೆಗ್ಡೆ ನಗರ, ದ್ವಾರಕಾ ನಗರ, ಭುವನೇಶ್ವರಿ ನಗರ, ಕನಕನಗರ, ಶೆಟ್ಟಿಹಳ್ಳಿ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಶ್ರೀ ಕಂಠೇಶ್ವರ ನಗರ ಮತ್ತು ಜೆ.ಸಿ.ಯಲ್ಲಿ ನಾಳೆ ಪವರ್ ಕಟ್ ಇರಲಿದೆ.
ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಸ್ವಾಮಿ ವಿವೇಕಾನಂದ ರಸ್ತೆ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಕೆಜಿ ಪುರ ಮುಖ್ಯ ರಸ್ತೆ, ಕೋಡಿಹಳ್ಳಿ, ಮರ್ಗೊಂಡನಹಳ್ಳಿ, ಮರ್ಫಿ ಟೌನ್, ಎಚ್ಬಿಆರ್ ಲೇಔಟ್, ವೈಟ್ಫೀಲ್ಡ್ ಮುಖ್ಯ ರಸ್ತೆ ಮತ್ತು ಕುಂಬೆನ ಅಗ್ರಹಾರಗಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಂಪಿನಗರ, ಶಿವಾನಂದನಗರ, ಗಂಗೊಂಡನ ಹಳ್ಳಿ, ಚಂದ್ರಾಲೇಔಟ್, ಬಸವೇಶ್ವರನಗರದ ಕೆಲವು ಭಾಗಗಳು, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಬ್ಬೇಹಳ್ಳಿ, ವೀವರ್ಸ್ ಕಾಲೋನಿ, ತ್ಯಾಗರಾಜನಗರ, ಬಾಲಶಾಪಾಳ್ಯ ರಸ್ತೆ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ವಿದ್ಯಾಪೀಠ ರಸ್ತೆ, ಆಂಧ್ರ ಹಳ್ಳಿ ಮುಖ್ಯ ರಸ್ತೆ, ಕುವೆಂಪು ಮುಖ್ಯ ರಸ್ತೆ, ಗಂಗಾನಗರ, ದ್ವಾರಕಾಬಸ ರಸ್ತೆ, ಅಂಬೇಡ್ಕರ್ ನಗರ, ಉಳ್ಳಾಲ ಬಸ್ ನಿಲ್ದಾಣ ಮತ್ತು ಬಿಡಿಎ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ..
ಫೆಬ್ರವರಿ 12ರಂದು ಪವರ್ ಕಟ್ ಇರಲಿರುವ ಏರಿಯಾಗಳು :
ಬೆಂಗಳೂರಿನ ದಕ್ಷಿಣ ವಲಯದ ಜಯನಗರ 4ನೇ ಬ್ಲಾಕ್, ಶಾಂತಿನಗರ, ವಿನಾಯಕ ನಗರ, ಕನಕ ಲೇಔಟ್, ಗೌಡನಪಾಳ್ಯ, ಕೋನೇನ ಅಗ್ರಹಾರ, ಮಾರತಹಳ್ಳಿ, ಸಂಜಯನಗರ, ಮಂಜುನಾಥ ನಗರ, ಪರಂಗಿಪಾಳ್ಯ, ಸರ್ಜಾಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಬಸಾಪುರ ಮುಖ್ಯರಸ್ತೆ ಮತ್ತು ಜಿಎಸ್ ಪಾಳ್ಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ : ವಿವಿಧ ಯೋಜನೆಗಳಡಿ ನಿರುದ್ಯೋಗಿ ಯುವಕ/ಯುವತಿಯರಿಗೆ ತರಬೇತಿಗೆ ಅರ್ಜಿ ಆಹ್ವಾನ
ಉತ್ತರ ವಲಯದ ಹನುಮಾನ್ ಲೇಔಟ್, ಬಾಲಾಜಿ ಲೇಔಟ್, ಎಂಎಲ್ಎ ಲೇಔಟ್, ಆರ್ ಟಿ ನಗರ ಮತ್ತು ಪೀಣ್ಯ ಗ್ರಾಮಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಪೂರ್ವ ವಲಯದ ಪ್ರದೇಶಗಳಾದ ಸೇಂಟ್ ಜೋಸೆಫ್ಸ್ ರಸ್ತೆ ಮತ್ತು ಮರ್ಫಿ ಟೌನ್ ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.
ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಂಪಿನಗರ, ಸುಬ್ಬಣ್ಣ ಗಾರ್ಡನ್, ಶಿವಾನಂದನಗರ, ಗಂಗೊಂಡನಹಳ್ಳಿ, ಚಂದ್ರಾಲೇಔಟ್, ಬಸವೇಶ್ವರನಗರದ ಕೆಲವು ಭಾಗಗಳು, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಬ್ಬೇಹಳ್ಳಿ, ಹೊಸಹಳ್ಳಿ ರಸ್ತೆ ಪ್ರದೇಶ ಮತ್ತು ಡಿ ಗ್ರೂಪ್ ಲೇಔಟ್ 1 ನೇ ಬ್ಲಾಕ್ ಪೀಡಿತ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.