Prajwal Revanna Case: ಸದನದಲ್ಲೇ ಕಣ್ಣೀರು ಹಾಕಿದ ಮಾಜಿ ಸಚಿವ ಎಚ್.ಡಿ.ರೇವಣ್ಣ!

Karnataka Assembly session 2024: ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ʼಪ್ರಜ್ವಲ್ ರೇವಣ್ಣನ ಪ್ರಕರಣ ಇದಕ್ಕಿಂತಲೂ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ? ಎಂದು ಲೈಂಗಿಕ ಹಗರಣ ಪ್ರಕರಣವನ್ನು ಕೆದಕಿದರು.

Written by - Puttaraj K Alur | Last Updated : Jul 17, 2024, 08:43 AM IST
  • ರೇವಣ್ಣಗೆ ಒಂದು, ಬೇರೆಯವರಿಗೆ ಒಂದು ಕಾನೂನಾ? ಎಂಬ ಆರ್.ಅಶೋಕ್‌ ಹೇಳಿಕೆಗೆ ತಿರುಗೇಟು
  • ಪ್ರಜ್ವಲ್ ರೇವಣ್ಣನ ಪ್ರಕರಣ ಇದಕ್ಕಿಂತಲೂ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ
  • ಪ್ರಜ್ವಲ್‌ ರೇವಣ್ಣ ಪ್ರಕರಣ ಕೆದಕಿದ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌, ಕಣ್ಣೀರು ಹಾಕಿದ ಎಚ್.ಡಿ.ರೇವಣ್ಣ
Prajwal Revanna Case: ಸದನದಲ್ಲೇ ಕಣ್ಣೀರು ಹಾಕಿದ ಮಾಜಿ ಸಚಿವ ಎಚ್.ಡಿ.ರೇವಣ್ಣ! title=
ಕಣ್ಣೀರು ಹಾಕಿದ ಎಚ್.ಡಿ.ರೇವಣ್ಣ!

Karnataka Assembly session 2024: ವಿಧಾನಸಭಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ತಮ್ಮ ಕುಟುಂಬದ ವಿಚಾರವೆತ್ತಿದ್ದಕ್ಕೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಣ್ಣೀರು ಹಾಕಿರುವ ಘಟನೆ ನಡೆದಿದೆ.  

ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಹಗರಣದ ಬಗ್ಗೆ SIT ತನಿಖೆಗೆ ಒಪ್ಪಿಸಿದ್ದಾರೆ. ಆದರೆ SIT ಏನು‌ ಮಾಡುತ್ತಿದೆ? ಎಚ್‌.ಡಿ.ರೇವಣ್ಣನವರನ್ನು ಕೂಡಲೇ ಅರೆಸ್ಟ್ ಮಾಡಿದರು. ಆದರೆ ಈ ಪ್ರಕರಣದಲ್ಲಿ ನಿಧಾನ ಏಕೆ? ರೇವಣ್ಣಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನಾ? ಅಂತಾ ಪ್ರಶ್ನಿಸಿದ್ದರು.   

ಇದನ್ನೂ ಓದಿ: ಪವಿತ್ರಾಗೌಡ ಮಾತ್ರವಲ್ಲದೇ ದರ್ಶನ್‌ ಜೊತೆಗೂ ಮಾತುಕತೆ ನಡೆಸಿದ್ದ ಸಮತಾ!

ಈ ವೇಳೆ ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ʼಪ್ರಜ್ವಲ್ ರೇವಣ್ಣನ ಪ್ರಕರಣ ಇದಕ್ಕಿಂತಲೂ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ? ಎಂದು ಲೈಂಗಿಕ ಹಗರಣ ಪ್ರಕರಣವನ್ನು ಕೆದಕಿದರು. ಇದಕ್ಕೆ ಧ್ವನಿಗೂಡಿಸಿದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ʼಪ್ರಜ್ವಲ್ ಪ್ರಕರಣ ಇಡೀ ಜಗತ್ತಿಗೆ ಗೊತ್ತಾಗಿದೆ. ಅಧ್ಯಕ್ಷರೇ ಹಣ ಹೋಗುತ್ತದೆ ಬರುತ್ತದೆ. ಆದರೆ ಹೋಗಿರುವ ಮಾನ ವಾಪಸ್ ಬರುತ್ತಾ? ಈ ಪ್ರಕರಣದಿಂದ ಕರ್ನಾಟಕ ಮಾನ ಹಾಳಾಯ್ತುʼ ಅಂತಾ ಕುಟುಕಿದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದವು ಮತ್ತಷ್ಟು ಜೋರಾಯ್ತು.

ಕಣ್ಣೀರು ಹಾಕಿದ ಎಚ್.ಡಿ.ರೇವಣ್ಣ !

ಸದನದಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿರುವಾಗ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಎದ್ದು ನಿಂತು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ʼಅಧ್ಯಕ್ಷರೇ ನನ್ನ ಹೆಸರು ಪ್ರಸ್ತಾಪ ಆಗಿದೆ, ಚರ್ಚೆ ಮಾಡ್ತೇನೆ. ಸಭಾಧ್ಯಕ್ಷರೇ ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ. ಆದರೆ ಯಾರೋ ಹೆಣ್ಣು ಮಗಳಿಂದ ದೂರು ಬರೆಸುತ್ತಾರೆ. ಡಿಜಿ ಆಫೀಸ್‌ನಲ್ಲಿ ಯಾರೋ ಹೆಣ್ಣುಮಗಳಿಂದ ಕಂಪ್ಲೇಂಟ್ ಕೊಡೆಸುತ್ತಾರೆ. ಅವನೇನು ಡಿಜಿ‌ ಆಗೋಕೆ‌ ಲಾಯಕ್ ಏನ್ರೀ? ಎಂದು ಆವೇಶದಲ್ಲಿ ಮಾತನಾಡಿದರು. ಆಗ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇದೇ ವೇಳೆ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಅಂತಾ ರೇವಣ್ಣ ಕಣ್ಣೀರು ಸಹ ಹಾಕಿದರು.

ಇದನ್ನೂ ಓದಿ:  ಕಾಂಗ್ರೆಸ್ ಶಾಸಕ ರಿಜ್ವಾನ್‌ ಅರ್ಷದ್‌ ಮಾತಿಗೆ ಎಚ್.ಡಿ.ರೇವಣ್ಣ ಆಕ್ರೋಶ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News