"ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಎಕ್ಸ್ ಪೈರಿ ಡೇಟ್ ಮುಗಿದಿದೆ"-ಸಿಎಂ ಸಿದ್ದರಾಮಯ್ಯ

ನರೇಂದ್ರಮೋದಿಯವರ ಜನಪ್ರಿಯತೆಯ ಎಕ್ಸ್ ಪೈರಿ ಡೇಟ್ ಮುಗಿದಿದೆ. ಇದು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೇ ಸಾಬೀತಾಗಿದೆ. ತೆಲಂಗಾಣ ಸೇರಿದಂತೆ ಪಂಚರಾಜ್ಯ ಚುನಾವಣೆಗಳಲ್ಲಿ ಮರುಸಾಬೀತಾಗಲಿದೆ. ತಮ್ಮ ನಾಯಕತ್ವಕ್ಕೆ ಅಡ್ಡಗಾಲು ಆಗಬಾರದೆಂಬ ದುರುದ್ದೇಶದಿಂದ ಬಿಜೆಪಿಯಲ್ಲಿರುವ ಪ್ರಾದೇಶಿಕ ನಾಯಕರನ್ನೆಲ್ಲ ನರೇಂದ್ರಮೋದಿ ಮತ್ತು ಅಮಿತ್ ಶಾ ಜೋಡಿ ತುಳಿದುಹಾಕಿರುವುದರಿಂದ ಯಾವ ರಾಜ್ಯದಲ್ಲಿಯೂ ಜನತೆ ನಂಬಿಕೆ ಇಡಬಲ್ಲಂತಹ ಯಾವ ಸ್ಥಳೀಯ ನಾಯಕರು ಇಲ್ಲದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Written by - Manjunath N | Last Updated : Nov 28, 2023, 07:27 PM IST
  • ಪ್ರತ್ಯೇಕ ರಾಜ್ಯವಾಗಿ ತೆಲಂಗಾಣ ರೂಪುಗೊಳ್ಳಲು ಕಾಂಗ್ರೆಸ್ ಪಕ್ಷ ಕಾರಣ ಎನ್ನುವುದನ್ನು ಆ ರಾಜ್ಯದ ಮತದಾರರು ವಿಳಂಬವಾಗಿಯಾದರೂ ಅರ್ಥ ಮಾಡಿಕೊಂಡಿದ್ದಾರೆ
  • ಪ್ರಾದೇಶಿಕ ಆಶೋತ್ತರದ ಹೆಸರಲ್ಲಿ ಜನರನ್ನು ಮರುಳು ಮಾಡುತ್ತಾ ಬಂದಿರುವ ಬಿಆರ್ ಎಸ್ ಪಕ್ಷದ ನಾಟಕ ಅಲ್ಲಿನ ಮತದಾರರಿಗೆ ಅರಿವಾಗಿದೆ
  • ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಬಿಆರ್ ಎಸ್ ಪಕ್ಷ ಜನತೆಯ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದೆ
 "ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಎಕ್ಸ್ ಪೈರಿ ಡೇಟ್ ಮುಗಿದಿದೆ"-ಸಿಎಂ ಸಿದ್ದರಾಮಯ್ಯ title=

ಬೆಂಗಳೂರು: ನರೇಂದ್ರಮೋದಿಯವರ ಜನಪ್ರಿಯತೆಯ ಎಕ್ಸ್ ಪೈರಿ ಡೇಟ್ ಮುಗಿದಿದೆ. ಇದು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೇ ಸಾಬೀತಾಗಿದೆ. ತೆಲಂಗಾಣ ಸೇರಿದಂತೆ ಪಂಚರಾಜ್ಯ ಚುನಾವಣೆಗಳಲ್ಲಿ ಮರುಸಾಬೀತಾಗಲಿದೆ. ತಮ್ಮ ನಾಯಕತ್ವಕ್ಕೆ ಅಡ್ಡಗಾಲು ಆಗಬಾರದೆಂಬ ದುರುದ್ದೇಶದಿಂದ ಬಿಜೆಪಿಯಲ್ಲಿರುವ ಪ್ರಾದೇಶಿಕ ನಾಯಕರನ್ನೆಲ್ಲ ನರೇಂದ್ರಮೋದಿ ಮತ್ತು ಅಮಿತ್ ಶಾ ಜೋಡಿ ತುಳಿದುಹಾಕಿರುವುದರಿಂದ ಯಾವ ರಾಜ್ಯದಲ್ಲಿಯೂ ಜನತೆ ನಂಬಿಕೆ ಇಡಬಲ್ಲಂತಹ ಯಾವ ಸ್ಥಳೀಯ ನಾಯಕರು ಇಲ್ಲದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: ಕನ್ನಡ ಸಿನಿಮಾಗಳನ್ನು ನೋಡಿ, ಬೆಳೆಸಿಯೆಂದು ಮನವಿ ಮಾಡಿದ ಚಿಕ್ಕಣ್ಣ

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ನಿರ್ಣಾಯಕ ಪಾತ್ರ ವಹಿಸಲಿದೆ. ತೆಲಂಗಾಣದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಯಶಸ್ಸಿನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಸೋಲಿನ ಭೀತಿಗೀಡಾಗಿದ್ದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆಯ ಪ್ರಚಾರವನ್ನು ತಡೆಯಲು ಹತಾಶ ಪ್ರಯತ್ನ ನಡೆಸಿದ್ದಾರೆ ಎಂದು ಕಿಡಿ ಕಾರಿದರು.

ತೆಲಂಗಾಣ ಚುನಾವಣೆ ಎನ್ನುವುದು ವಚನಬದ್ದ ಕಾಂಗ್ರೆಸ್ ಮತ್ತು ವಚನಭ್ರಷ್ಟ ಬಿಜೆಪಿ ನಡುವಿನ ಸಮರ ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿಯ ಸುಳ್ಳುಗಳ ನಡುವಿನ ಸಂಘರ್ಷವೂ ಆಗಿದೆ. ಒಂಬತ್ತುವರೆ ವರ್ಷಗಳ ಅವಧಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯ ಶೇಕಡಾ ಹತ್ತರಷ್ಟು ಭರವಸೆಗಳನ್ನು ಕೂಡಾ ಈಡೇರಿಸಿಲ್ಲ ಎನ್ನುವುದು ಅಲ್ಲಿನ ಮತದಾರರಿಗೆ ಅರಿವಾಗಿದೆ. ಇದರಿಂದ ಅಲ್ಲಿ ಪ್ರಧಾನಿ ಮೋದಿಯವರ ಪ್ರಚಾರದಿಂದ ಆ ಪಕ್ಷಕ್ಕೆ ನಷ್ವವೇ ಹೊರತು ಲಾಭ ಇಲ್ಲ ಎಂದರು.

ಇದನ್ನೂ ಓದಿ-ತೂಕ ಇಳಿಕೆಗೆ ಕಾಶ್ಮೀರದ ಈ ಶಾಹಿ ಪೇಯ ಒಂದು ರಾಮಬಾಣ ಉಪಾಯ!

ನುಡಿದಂತೆ ನಡೆದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬದ್ಧತೆಯಿಂದ ತೆಲಂಗಾಣದ ಕಾಂಗ್ರೆಸ್ ಪಕ್ಷದ ಭರವಸೆಗಳನ್ನು ಅಲ್ಲಿನ ಮತದಾರರು ನಂಬುವಂತಾಗಿದೆ. ಇದರಿಂದ ತೆಲಂಗಾಣದ ಮತದಾರರ ವಿಶ್ವಾಸಾರ್ಹತೆಯನ್ನು ನಮ್ಮ ಪಕ್ಷ ಗಳಿಸಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಕರ್ನಾಟಕದವರೇ ಆಗಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣಗಳಲ್ಲಿ ‘‘ಕರ್ನಾಟಕ ಮಾದರಿ’’ ಆಡಳಿತವನ್ನು ಉಲ್ಲೇಖಿಸಿ ಮತದಾರರನ್ನು ಸೆಳೆಯತೊಡಗಿದ್ದಾರೆ ಎಂದು ಹೇಳಿದರು.

2013-18 ರ ಅವಧಿಯ ನಮ್ಮ ಹಿಂದಿನ ಸರ್ಕಾರ ಮತ್ತು ಆರು ತಿಂಗಳ ಅವಧಿಯ ಸರ್ಕಾರದ ಸಾಧನೆಗಳನ್ನು ಆ ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮನೆಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಮರೆತುಬಿಟ್ಟಿರುವ ರಾಜ್ಯದಲ್ಲಿ ಬಿಆರ್ ಎಸ್ ಪಕ್ಷ ಮತ್ತು ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಎದುರಲ್ಲಿ ತೆಲಂಗಾಣದ ಮತದಾರರಿಗೆ ಕಾಂಗ್ರೆಸ್ ಪಕ್ಷ ಭರವಸೆಯ ಆಶಾಕಿರಣದಂತೆ ಕಾಣಿಸುತ್ತಿರುವ ಕಾರಣದಿಂದಾಗಿಯೇ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಎದ್ದಿದೆ ಎಂದು ಹೇಳಿದರು.

ಇದನ್ನೂ ಓದಿ: ಬೇಯುವಾಗ ಮೊಟ್ಟೆ ಒಡೆಯದಿರಲು ಉಪ್ಪು ಹಾಕಿ

ಪ್ರತ್ಯೇಕ ರಾಜ್ಯವಾಗಿ ತೆಲಂಗಾಣ ರೂಪುಗೊಳ್ಳಲು ಕಾಂಗ್ರೆಸ್ ಪಕ್ಷ ಕಾರಣ ಎನ್ನುವುದನ್ನು ಆ ರಾಜ್ಯದ ಮತದಾರರು ವಿಳಂಬವಾಗಿಯಾದರೂ ಅರ್ಥ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಆಶೋತ್ತರದ ಹೆಸರಲ್ಲಿ ಜನರನ್ನು ಮರುಳು ಮಾಡುತ್ತಾ ಬಂದಿರುವ ಬಿಆರ್ ಎಸ್ ಪಕ್ಷದ ನಾಟಕ ಅಲ್ಲಿನ ಮತದಾರರಿಗೆ ಅರಿವಾಗಿದೆ. ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಬಿಆರ್ ಎಸ್ ಪಕ್ಷ ಜನತೆಯ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದೆ. ಬಿಜೆಪಿ ಮತ್ತು ಬಿಆರ್ ಎಸ್ ಎರಡೂ ಪಕ್ಷಗಳನ್ನು ಹಿಂದಕ್ಕಟ್ಟಿ ಮುಂದೋಡುತ್ತಿರುವ ಕಾಂಗ್ರೆಸ್ ಪಕ್ಷ ಅಚ್ಚರಿಯ ಗೆಲುವನ್ನು ದಾಖಲಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News