ಸರ್ಕಾರದ ಒಂದು ವಿಕೆಟ್ ಅಷ್ಟೇ ಅಲ್ಲ- ತನಿಖೆ ಮಾಡಿದ್ರೆ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತೆ- ಪ್ರಿಯಾಂಕ್ ಖರ್ಗೆ

ಸಮಾಜ ಕಲ್ಯಾಣ ಇಲಾಖೆಯಲ್ಲಿ 14,530 ಬೋರ್ ವೆಲ್ ಗೆ 431 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿತ್ತು. ಐಟಿ ರಿಟರ್ನ್ ಫೇಕ್ ಮಾಡಲಾಗಿದೆ ಎಂಬ ಆರೋಪ ಮಾಡಿದ್ದೆವು.‌ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆವು. ಇಲಾಖೆಯಿಂದ ತನಿಖೆಗೆ ನಿವೃತ್ತ ಇಂಜಿನಿಯರ್ ನೇತೃತ್ವದ ತನಿಖೆಗೆ ಸೂಚನೆ ನೀಡಲಾಗಿತ್ತು. 

Written by - Sowmyashree Marnad | Last Updated : Apr 15, 2022, 11:32 AM IST
  • ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಕಿಕ್ ಬ್ಯಾಕ್ ಹೋಗಿದೆ- ಪ್ರಿಯಾಂಕ್ ಖರ್ಗೆ ಆರೋಪ
  • 40% ಸರ್ಕಾರ, ಭ್ರಷ್ಟಾಚಾರ ಪ್ರತಿ ಇಲಾಖೆಯಲ್ಲಿ ಇದೆ.
  • ಇದನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ.
ಸರ್ಕಾರದ ಒಂದು ವಿಕೆಟ್ ಅಷ್ಟೇ ಅಲ್ಲ- ತನಿಖೆ ಮಾಡಿದ್ರೆ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತೆ- ಪ್ರಿಯಾಂಕ್ ಖರ್ಗೆ title=
Priyanka Kharge slams government over Corruption

ಬೆಂಗಳೂರು: ಕಮಿಷನ್ ವಿಚಾರವಾಗಿ ಈಶ್ವರಪ್ಪ ರಾಜಿನಾಮೆ ಘೋಷಿಸಿದ್ದು, ಇದೊಂದೇ ವಿಕೆಟ್ ಅಲ್ಲ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದ್ರೆ ಸರ್ಕಾರದ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ  2019- 20 ಹಾಗೂ 20-21 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೋರ್ ವೆಲ್ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ವಿಚಾರ ತನಿಖೆಯಾಗ್ತಿದೆ. ಆದರೆ ಕೆಲಸ ಇನ್ನೂ ನಡೆಸಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಕಿಕ್ ಬ್ಯಾಕ್ ಹೋಗಿದೆ ಎಂದು ಆರೋಪಿಸಿದರು.  40% ಸರ್ಕಾರ, ಭ್ರಷ್ಟಾಚಾರ ಪ್ರತಿ ಇಲಾಖೆಯಲ್ಲಿ ಇದೆ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ ಎಂದರು. 

ಸಮಾಜ ಕಲ್ಯಾಣ ಇಲಾಖೆಯಲ್ಲಿ 14,530 ಬೋರ್ ವೆಲ್ ಗೆ 431 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿತ್ತು. ಐಟಿ ರಿಟರ್ನ್ ಫೇಕ್ ಮಾಡಲಾಗಿದೆ ಎಂಬ ಆರೋಪ ಮಾಡಿದ್ದೆವು.‌ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆವು. ಇಲಾಖೆಯಿಂದ ತನಿಖೆಗೆ ನಿವೃತ್ತ ಇಂಜಿನಿಯರ್ ನೇತೃತ್ವದ ತನಿಖೆಗೆ ಸೂಚನೆ ನೀಡಲಾಗಿತ್ತು. ಅದರ ವರದಿ ಇಂದು ಬರಬೇಕಿತ್ತು. ಆದರೆ 15 ದಿನಗಳಲ್ಲಿ ತನಿಖೆ ಆಗಬೇಕು ಎಂದರೂ ಇನ್ನೂ ಬೋರ್ ವೆಲ್ ಕೆಲಸ ನಿಂತಿಲ್ಲ. ದೇವರಾಜ ಅರಸ್ ನಿಗಮದಲ್ಲಿ ಒಂದು ಬೋರ್ ವೆಲ್ ಗೆ 93 ಲಕ್ಷ ಬಿಲ್ ಮಾಡಲಾಗುತ್ತಿದೆ. ಆದರೆ ಅಂಬೇಡ್ಕರ್, ಆದಿ ಜಾಂಬವ ನಿಗಮದಲ್ಲಿ  ಬೋರ್ ವೆಲ್ 1.83 ಲಕ್ಷ ಇದೆ. ಯಾವುದೇ ತನಿಖೆ ಆಗಬೇಕಾದರೆ ಮೊದಲು ಕೆಲಸ ನಿಲ್ಲಿಸಬೇಕು. ಲೋಪ ಆಗಿಲ್ಲ ಎಂದ ನಂತರ ಕೆಲಸ ಆರಂಭಿಸಬೇಕು. ಆದರೆ ಕೆಲಸ ಏಕೆ ನಿಲ್ಲಿಸಿಲ್ಲ? ಕೋಟಾ ಶ್ರೀನಿವಾಸ್ ಪೂಜಾರಿ ತನಿಖಾ ವರದಿ ಕೊಡಿ, ಲೋಪ ಕಂಡು ಬಂದರೆ ಬಿಲ್ ಕೊಡಲ್ಲ ಎಂದಿದ್ದಾರೆ. ಇದರ ಅರ್ಥ ಏನು?. ಹಾಗಾದರೆ ಗುತ್ತಿಗೆದಾರರು ಸುಮ್ಮನಿರುತ್ತಾರಾ? ನ್ಯಾಯಾಲಯಕ್ಕೆ ಹೋಗುತ್ತಾರೆ.  ಇದರಲ್ಲಿ ಕಿಕ್ ಬ್ಯಾಕ್ ಹೋಗಿದೆ ಅದಕ್ಕೆ ಕೆಲಸ ನಿಂತಿಲ್ಲ ಎಂಬ ಅನುಮಾನ ಇದೆ ಎಂದು ಆರೋಪಿಸಿದರು. ಇದು ತನಿಖೆಯಾದರೆ ಮಾಜಿ ಸಚಿವರು ಹಾಗೂ ಹಾಲಿ ಸಚಿವರ ವಿಕೆಟ್ ಬೀಳುತ್ತೆ ಎಂದರು. 

ಇದನ್ನೂ ಓದಿ- ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬೀಸಾಡುವ #ಟೂಲ್‌ಕಿಟ್ ಅಷ್ಟೇ: ಕಾಂಗ್ರೆಸ್

PSI ನೇಮಕಾತಿಯಲ್ಲಿ ಭ್ರಷ್ಟಾಚಾರ ಆಗಿದೆ- ಗೃಹ ಸಚಿವರೇ ಭಾಗಿ ಎಂಬ ಆರೋಪ:
545 ಪಿಎಸ್ಐ ಹುದ್ದೆಗೆ 70 ಸಾವಿರ ಜನ ಪರೀಕ್ಷೆ ಬರ್ದಿದಾರೆ. ಆದರೆ ಅವ್ಯವಹಾರ ಆಗಿರುವ ಬಗ್ಗೆ ಸಾಕಷ್ಟು ಜನ ಅಭ್ಯರ್ಥಿಗಳು ಹೋಂ ಮಿನಿಷ್ಟರ್ ಗೆ ದೂರು ಕೊಟ್ಟಿದಾರೆ. ಆರಂಭದಲ್ಲಿ ಏನೂ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಿದ್ದರು. ಹಾಗಿದ್ದರೆ ಮತ್ತೆ ಮೊನ್ನೆ ಯಾಕೆ ಸಿಐಡಿ ತನಿಖೆಗೆ ಕೊಟ್ರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ-  ಸಂತೋಷ್ ಪಾಟೀಲ್ ಕುಟುಂಬಸ್ಥರಿಗೆ 1 ಕೋಟಿ ರೂ.ಪರಿಹಾರ ನೀಡಲಿ-ಸಿದ್ದರಾಮಯ್ಯ

ಒಬ್ಬೊಬ್ಬ ಅಭ್ಯರ್ಥಿಯಿಂದ 70 ರಿಂದ 80 ಲಕ್ಷ ತಗೊಂಡಿದ್ದಾರೆ!
20, 21 ಮಾರ್ಕ್ ತಗೊಂಡವರಿಗೆ 7th ರ್ಯಾಂಕ್ ಕೊಡಲಾಗಿದೆ. ಪೇಪರ್ ಲೀಕ್ ಆಗಿದ್ದು ಬಿಜೆಪಿ ಸೆಕ್ರೆಟರಿಯ ಒಡೆತನದ ಒಂದು ಶಾಲೆಯಲ್ಲಿ. ಇದನ್ನು ಸರಿಯಾಗಿ ತನಿಖೆ ನಡೆಸಿದ್ದಲ್ಲಿ ಸರ್ಕಾರದ ಇನ್ನೆರಡು ವಿಕೆಟ್ ಹೋಗುತ್ತದೆ‌. ಬಿಜೆಪಿ ಪದಾಧಿಕಾರಿಯ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಅದರ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ. ಬಿಜೆಪಿ ಪದಾಧಿಕಾರಿ ಮನೆಗೆ ಹೊಗಿಲ್ಲ ಎಂದು ಗೃಹ ಸಚಿವರು ಹೇಳಲಿ ನೋಡೋಣ, ನಮ್ಮ ಬಳಿ ಪೋಟೋ ಎಲ್ಲ ಇದೆ. ಈಶ್ವರಪ್ಪ ಬಂಧನ ಆಗಲಿ ಆ ಮೇಲೆ ಎಲ್ಲ ದಾಖಲೆ ಬಿಚ್ಚುತ್ತೇವೆ, ಸರ್ಕಾರದ ಸಚಿವರು ಆಲ್ ಔಟ್ ಆಗ್ತಾರೆ ಎಂದು ಆರೋಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News