ವೈದ್ಯರಂತೆ ಪಶುವೈದ್ಯರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಿ: ರಾಜ್ಯ ಪಶುವೈದ್ಯಕೀಯ ಸಂಘ ಒತ್ತಾಯ

ಚನ್ನಪಟ್ಟಣದಲ್ಲಿ ಕರ್ತವ್ಯನಿರತ ಪಶುವೈದ್ಯಾಧಿಕಾರಿಯಾದ  ಡಾ.ಗಿರೀಶ್‌ ರವರ ಮೇಲೆ ಹಲ್ಲೆಯನ್ನು ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ವೈದ್ಯರಂತೆ, ಪಶುವೈದ್ಯರನ್ನೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪಶುವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಸ್‌.ಸಿ.ಸುರೇಶ್‌ ಆಗ್ರಹಿಸಿದ್ದಾರೆ. 

Written by - Chetana Devarmani | Last Updated : May 22, 2022, 05:54 PM IST
  • ರಾಜ್ಯಾದ್ಯಂತ ಪಶುವೈದ್ಯರ ಮೇಲೆ ಹೆಚ್ಚಾಗುತ್ತಿರುವ ಹಲ್ಲೆ ಪ್ರಕರಣಗಳನ್ನು ತಪ್ಪಿಸಿಸುವಂತೆ ಸರ್ಕಾರಕ್ಕೆ ಆಗ್ರಹ
  • ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಸಂಧರ್ಭದಲ್ಲಿ ಪಶುವೈದ್ಯರು ಪಾಲ್ಗೊಳ್ಳುವುದಿಲ್ಲವೆಂದು ಸಂಘ ತೀರ್ಮಾನ
  • ವೈದ್ಯರಂತೆ ಪಶುವೈದ್ಯರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಿ‌
  • ರಾಜ್ಯ ಪಶುವೈದ್ಯಕೀಯ ಸಂಘ ಒತ್ತಾಯ
ವೈದ್ಯರಂತೆ ಪಶುವೈದ್ಯರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಿ: ರಾಜ್ಯ ಪಶುವೈದ್ಯಕೀಯ ಸಂಘ ಒತ್ತಾಯ  title=
ರಾಜ್ಯ ಪಶುವೈದ್ಯಕೀಯ ಸಂಘ

ಬೆಂಗಳೂರು: ಚನ್ನಪಟ್ಟಣದಲ್ಲಿ ಕರ್ತವ್ಯನಿರತ ಪಶುವೈದ್ಯಾಧಿಕಾರಿಯಾದ  ಡಾ.ಗಿರೀಶ್‌ ರವರ ಮೇಲೆ ಹಲ್ಲೆಯನ್ನು ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ವೈದ್ಯರಂತೆ, ಪಶುವೈದ್ಯರನ್ನೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪಶುವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಸ್‌.ಸಿ.ಸುರೇಶ್‌ ಆಗ್ರಹಿಸಿದ್ದಾರೆ. 

ಇದನ್ನೂ ಓದಿ: Arecanut Price: ರಾಜ್ಯದಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ ಎಷ್ಟಿದೆ?

ಜಾರಿಯಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಸಂಧರ್ಭದಲ್ಲಿ ಅನೇಕ ಪಶುವೈದ್ಯರಿಗೆ ಜೀವಭಯವಿದ್ದು ಇತ್ತೀಚೆಗೆ ಹಲ್ಲೆಯೂ ಸಹ ನಡೆದಿರುತ್ತದೆ. ಅದರಲ್ಲೂ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆದಿರುವುದು ನಿಜವಾಗಿಯೂ ವಿಷಾದನೀಯ. ಇದನ್ನು ಕರ್ನಾಟಕ ಪಶುವೈದ್ಯಕೀಯ ಸಂಘವು ಉಗ್ರವಾಗಿ ಖಂಡಿಸುತ್ತದೆ. ಈ ಕಾಯಿದೆಯನ್ನು ರೂಪಿಸುವಾಗ ಇಲಾಖೆಯ ಅಧಿಕಾರಿಗಳು ತಾಂತ್ರಿಕ ಮಾಹಿತಿಯನ್ನು ನೀಡಿರುವುದು ಮಾತ್ರ ಪಶುವೈದ್ಯರ ಕರ್ತವ್ಯವಾಗಿರುತ್ತದೆ. ಉಳಿದಂತೆ ವಾಣಿಜ್ಯ ಮಳಿಗೆ/ಉದ್ಯಮವನ್ನು ತಡೆಯುವ/ಮುಚ್ಚಿಸುವ ಕರ್ತವ್ಯವು ಆರಕ್ಷಕ ಇಲಾಖೆಗೆ ಸೇರಿದ್ದಾಗಿತ್ತದೆ. ಆದುದರಿಂದ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿ ಮಾಡುವ ಸಂದರ್ಭದಲ್ಲಿ ಪಶುವೈದ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಮೂದಿಸಿ ವಿಶೇಷ ಕಾನೂನ್ನು ರೂಪಿಸಬೇಕು ಎಂದು ಸಂಘವು ಒತ್ತಾಯಿಸಿದೆ.  

ಜೊತೆಗೆ ಈ ಹಿಂದೆಯೂ ಪಶುವೈದ್ಯರ ಮೇಲೆ ಅನೇಕ ಕಡೆ ಬೇರೆ ಬೇರೆ ಕಾರಣಗಳಿಗಾಗಿ ಹಲ್ಲೆ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಪಶುವೈದ್ಯರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿರುವಂತೆ ಅಫರಾಧಿಗಳನ್ನು ಬಂಧಿಸಲು/ಶಿಕ್ಷಿಸಲು ಉಗ್ರ ಕಾನೂನು ರೂಪಿಸಬೇಕು ಅಥವಾ ವೈದ್ಯರ ರಕ್ಷಣೆಯ ಕಾನೂನಿನ ಅಡಿಯಲ್ಲಿ ಪಶುವೈದ್ಯರನ್ನು ಪರಿಗಣಿಸುವಂತೆ ಒತ್ತಾಯಿಸಿದೆ. 

ಇದನ್ನೂ ಓದಿ: ಕಟ್ಟಡದಿಂದ ಬಿದ್ದ ಯುವತಿ ಸ್ಥಳದಲ್ಲೇ ಸಾವು: ರಕ್ಷಿಸಲು ಹೋದ ಯುವಕ ಹೇಳಿದ್ದು ಹೀಗೆ!

ಡಾ.ಗಿರೀಶ್‌ ಅವರ ಮೇಲೆ ನಡೆದಿರುವ ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲಾ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ವಿಧಿಸಲು ಸಂಘವು ಆಗ್ರಹಿಸುತ್ತದೆ. ಗೋಹತ್ಯೆ ನಿಷೇಧ ಕಾಯಿದೆಯನ್ನ ಜಾರಿಗೊಳಿಸುವ ಸಂಬಂಧ ಪಶುವೈದ್ಯರ ನಿಖರವಾದ ಜವಾಬ್ದಾರಿಗಳನ್ನು ಸರ್ಕಾರ ರೂಪಿಸಬೇಕು. ಹಲ್ಲೆ ನಡೆಸಿದವರನ್ನು ಈ ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಅಲ್ಲಿಯವರೆಗೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಪಶುವೈದ್ಯರು ಪಾಲ್ಗೊಳ್ಳುವುದಿಲ್ಲವೆಂದು ಸಂಘ ತೀರ್ಮಾನಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ.ವರಾಮ್‌.ಎ.ಡಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News