ಕಟ್ಟಡದಿಂದ ಬಿದ್ದ ಯುವತಿ ಸ್ಥಳದಲ್ಲೇ ಸಾವು: ರಕ್ಷಿಸಲು ಹೋದ ಯುವಕ ಹೇಳಿದ್ದು ಹೀಗೆ!

ಬ್ರಿಗೇಡ್ ರಸ್ತೆಯ ಫಿಪ್ತ್ ಅವೆನ್ಯೂ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಯುವತಿ ಹೆಸರು ಲಿಯಾ. ಈಕೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಎಂದು ತಿಳಿದುಬಂದಿದೆ. ಇನ್ನು ಗಾಯಾಳು ಯುವಕ ಕ್ರಿಸ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಹೆಚ್‌ಎಎಲ್‌ನ ನಿವಾಸಿ. ಇಬ್ಬರು ಸಹ ಇಲ್ಲಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು.   

Written by - Bhavishya Shetty | Last Updated : May 21, 2022, 05:44 PM IST
  • ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು
  • ಬ್ರಿಗೇಡ್ ರೋಡ್‌ನ ಐದನೇ ಕ್ರಾಸ್‌ನಲ್ಲಿ ಘಟನೆ
  • ಯುವತಿಯ ರಕ್ಷಣೆಗೆಂದು ತೆರಳಿದ ಯುವಕನಿಗೂ ಗಾಯ
ಕಟ್ಟಡದಿಂದ ಬಿದ್ದ ಯುವತಿ ಸ್ಥಳದಲ್ಲೇ ಸಾವು: ರಕ್ಷಿಸಲು ಹೋದ ಯುವಕ ಹೇಳಿದ್ದು ಹೀಗೆ!   title=
woman dies falling from Building

ಬೆಂಗಳೂರು: ಇಲ್ಲಿನ  ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಯುವತಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಬ್ರಿಗೇಡ್ ರೋಡ್‌ನ ಐದನೇ ಕ್ರಾಸ್‌ನಲ್ಲಿ ನಡೆದಿದೆ. ಇನ್ನು ಈ ಸಂದರ್ಭದಲ್ಲಿ ಯುವತಿಯ ರಕ್ಷಣೆಗೆಂದು ತೆರಳಿದ ಯುವಕನಿಗೂ ಗಾಯಗಳಾಗಿದ್ದು, ಆತನನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. 

ಇದನ್ನು ಓದಿ: ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಇಲ್ಲಿದೆ!

ಬ್ರಿಗೇಡ್ ರಸ್ತೆಯ ಫಿಪ್ತ್ ಅವೆನ್ಯೂ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಯುವತಿ ಹೆಸರು ಲಿಯಾ. ಈಕೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಎಂದು ತಿಳಿದುಬಂದಿದೆ. ಇನ್ನು ಗಾಯಾಳು ಯುವಕ ಕ್ರಿಸ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಹೆಚ್‌ಎಎಲ್‌ನ ನಿವಾಸಿ. ಇಬ್ಬರು ಸಹ ಇಲ್ಲಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. 

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬ್ರಿಗೇಡ್ ರಸ್ತೆಗೆ ಶಾಪಿಂಗ್‌ಗೆಂದು ಬಂದಿದ್ದ ಇವರು ಮಾತನಾಡುವ ಸಲುವಾಗಿ ಫಿಪ್ತ್‌ ಅವೆನ್ಯೂ ಶಾಪಿಂಗ್ ಕಟ್ಟಡದ ಮೇಲೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಟ್ಟಡದಿಂದ ಲಿಯಾ ಬಿದ್ದಿದ್ದಾಳೆ. ಈ ವೇಳೆ ಆಕೆಯನ್ನು ಕಾಪಾಡಲು ತೆರಳಿದ ಯುವಕ ಕ್ರಿಸ್‌ ಸಹ ಬಿದ್ದು ಗಾಯಗೊಂಡಿದ್ದಾನೆ. ಆದರೆ ದುರಾದೃಷ್ಟವಶಾತ್‌ ಲಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. 

ಇದನ್ನು ಓದಿ: PM Kisan: ದೇಶಾದ್ಯಂತದ ರೈತರಿಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಇನ್ನು ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. "ಲಿಯಾ ಆತ್ಮಹತ್ಯೆಗೆ ಯತ್ನಿಸಿಲ್ಲ. ನಾವಿಬ್ಬರೂ ಲವ್ವರ್ಸ್. ಇಂದು ಗೆಳೆಯನ ಬರ್ತ್‌ಡೇ ಪಾರ್ಟಿಗೆ ತೆರಳಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಇಂದು ಶನಿವಾರವಾದ್ದರಿಂದ ಕಾಲೇಜಿಗೆ ಸಹ ರಜೆ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ಶಾಪಿಂಗ್‌ ಮಾಡಿ ಸಂಜೆ ಪಾರ್ಟಿಗೆ ತೆರಳುವ ಎಂದು ಯೋಜಿಸಿದ್ದೆವು. ಅಷ್ಟರಲ್ಲಿ ಈ ಘಟನೆ ನಡೆದಿದೆ" ಎಂದು ಯುವಕ ತಿಳಿಸಿರುವುದಾಗಿ ಪೊಲೀಸ್‌ ಮೂಲಗಳಿಂದ ಮಾಹಿತಿ ಲಭಿಸಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News