PSI Recruitment Scam: 'ಬೇರೆ ಪರೀಕ್ಷಾ ಕೇಂದ್ರಗಳಲ್ಲಿಯೂ ತನಿಖೆ ನಡೆಸಬೇಕು'

 PSI ಹಗರಣದಲ್ಲಿ ಕೇವಲ ಒಂದು ಕೇಂದ್ರವನ್ನು ಸೀಮಿತಗೊಳಿಸದೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Jul 13, 2022, 11:42 PM IST
  • PSI ಹಗರಣದಲ್ಲಿ ಕೇವಲ ಒಂದು ಕೇಂದ್ರವನ್ನು ಸೀಮಿತಗೊಳಿಸದೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ತನಿಖೆ ನಡೆಸಬೇಕು
    ⏩ ಕೂಡಲೇ ನ್ಯಾಯಾಂಗ ತನಿಖೆಗೆ ನೀಡಬೇಕು
    ⏩ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್'ಗಳನ್ನು ಮುಚ್ಚಿ ಹಾಕುವುದಕ್ಕೆ ಪಿತೂರಿ ನಡೆಸುತ್ತಿದ್ದಾರೆ
PSI Recruitment Scam: 'ಬೇರೆ ಪರೀಕ್ಷಾ ಕೇಂದ್ರಗಳಲ್ಲಿಯೂ ತನಿಖೆ ನಡೆಸಬೇಕು'  title=
Photo Courtsey: Facebook

ಬೆಂಗಳೂರು: PSI ಹಗರಣದಲ್ಲಿ ಕೇವಲ ಒಂದು ಕೇಂದ್ರವನ್ನು ಸೀಮಿತಗೊಳಿಸದೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

RSS ಕಟ್ಟಾಳು, ಕಟ್ಟಾ ಬಿಜೆಪಿ ನಾಯಕರಾದ ಬಸವರಾಜ್ ಯತ್ನಾಳ್ ಅವರೇ ರಾಜಾರೋಷವಾಗಿ ಹೇಳುತ್ತಾರೆ, PSI ಹಗರಣದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ, ನನ್ನ ಬಳಿ ಸಾಕ್ಷಿ ಇದೆ ಎಂದು. 
ಸಿಎಂ ಅವರೇ ನಿಮ್ಮದೇ ಪಕ್ಷದ ನಾಯಕರು, ಶಾಸಕರು ಬಹಿರಂಗವಾಗಿ ನನ್ನ ಬಳಿ ಸಾಕ್ಷಿ ,ಪುರಾವೆ ಇದೆ ಎಂದು ಹೇಳಿದ್ದಾರೆ ಅವರನ್ನು ಯಾವಾಗ ವಿಚಾರಣೆಗೆ ಕರೆಯುತ್ತೀರಿ, 
ಬಿಜೆಪಿ ರಾಜ್ಯಾಧ್ಯಕ್ಷರಾದ ಕಟೀಲ್ ಅವರೇ ಸದಾ ಕಾಂಗ್ರೆಸ್ ನಾಯಕರ ಮೇಲೆ ಬೆರಳು ತೋರಿಸುತ್ತೀರಿ ನಿಮ್ಮದೇ ಪಕ್ಷದ ನಾಯಕರ ಮೇಲೆ ತನಿಖೆ ಯಾವಾಗ ನಡೆಸುತ್ತೀರಿ. ಇಲ್ಲಾ ಈಗಲೂ ನನಗೆ ನೋಟಿಸ್ ನೀಡುತ್ತೀರಾ?
ನಿಮ್ಮದೇ ಬಿಜೆಪಿ ಸರ್ಕಾರದ ಶಾಸಕರಾದ ಯತ್ನಾಳ್ ಹೇಳುತ್ತಾರೆ ಈ ಸರ್ಕಾರದಲ್ಲಿ ಈಗಾಗಲೇ ಎಲ್ಲವನ್ನು ನುಂಗಿದ್ದಾರೆ ನನಗೆ ಸಚಿವ ಸ್ಥಾನ ಬೇಡ
ಇದು ಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರ ಎಂದು, ಅವರನ್ನು ಕರೆಸಿ ಅವರ ಬಳಿ ದಾಖಲೆಗಳನ್ನು ಯಾವಾಗ ಪಡೆಯುತ್ತೀರಿ?
ಬಿಜೆಪಿಗರೇ ಯತ್ನಾಳ್ ಅವರ ಬಳಿಯಿರುವ ದಾಖಲೆಗಳನ್ನು ಪಡೆದು ಸಮಗ್ರ ತನಿಖೆ ನಡೆಸಿದರೆ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ನಿಮ್ಮನ್ನು ಪೂಜೆ ಮಾಡುತ್ತಾರೆ. 
ನಾವು ಕೇಳುವುದು ಇಷ್ಟೇ 
⏩ PSI ಹಗರಣದಲ್ಲಿ ಕೇವಲ ಒಂದು ಕೇಂದ್ರವನ್ನು ಸೀಮಿತಗೊಳಿಸದೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ತನಿಖೆ ನಡೆಸಬೇಕು 
⏩ ಕೂಡಲೇ ನ್ಯಾಯಾಂಗ ತನಿಖೆಗೆ ನೀಡಬೇಕು
⏩ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್'ಗಳನ್ನು ಮುಚ್ಚಿ ಹಾಕುವುದಕ್ಕೆ ಪಿತೂರಿ ನಡೆಸುತ್ತಿದ್ದಾರೆ
⏩ SDA /FDA, ಪೊಲೀಸ್ ಕಾನ್ಸ್ಟೇಬಲ್'ನಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು 
⏩ ADGP ಅಮೃತ್ ಪೌಲ್ ಅವರನ್ನ ಮ್ಯಾಜಿಸ್ಟ್ರೇಟ್ ಅವರ ಮುಂದೆ ತಂದು ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಬೇಕು. 

ನಾವು ಪ್ರಾಮಾಣಿಕರು ಎಂದು ಹೇಳುವ ಬಿಜೆಪಿಗರೇ ಈ ಹಗರಣಗಳನ್ನು ಸಮಗ್ರವಾಗಿ ತನಿಖೆ ನಡೆಸಿ ನಿಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಿ ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News