ಕೋರ್ಟ್ ಆದೇಶದ ಮೇಲೆ ಸರ್ಕಾರದ ಹೆಜ್ಜೆ: ಅಡಕತ್ತರಿಯಲ್ಲಿ ಪಿಎಸ್ಐ ಅಭ್ಯರ್ಥಿಗಳು

ರಾಜಕೀಯ ಮುಖಂಡರು, ನೇಮಕಾತಿ ವಿಭಾಗದ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳು ಹಾಗೂ ಆಭ್ಯರ್ಥಿಗಳು ಸೇರಿ ಸುಮಾರು 50ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ  ಕೊಂಡೊಯ್ಯುವತ್ತ ಸಿಐಡಿ ತನಿಖೆ ಚುರುಕಿನಿಂದ‌‌ ನಡೆಸುತ್ತಿದೆ.

Written by - Manjunath Hosahalli | Edited by - Ranjitha R K | Last Updated : Jun 17, 2022, 12:19 PM IST
  • ಪಿಎಸ್ಐ ಪರೀಕ್ಷಾ‌ ಅಕ್ರಮ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.
  • ಸಿಐಡಿ ತನಿಖೆ ಚುರುಕಿನಿಂದ‌‌ ನಡೆಸುತ್ತಿದೆ.
  • ಸಮಸ್ಯೆ ಇತ್ಯರ್ಥದ ಬಳಿಕ ಕ್ರಮ - ರಾಜ್ಯ ಸರ್ಕಾರ ಭರವಸೆ
ಕೋರ್ಟ್ ಆದೇಶದ ಮೇಲೆ ಸರ್ಕಾರದ ಹೆಜ್ಜೆ: ಅಡಕತ್ತರಿಯಲ್ಲಿ ಪಿಎಸ್ಐ ಅಭ್ಯರ್ಥಿಗಳು title=
PSI SCAM (file photo)

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಪಿಎಸ್ಐ ಪರೀಕ್ಷಾ‌ ಅಕ್ರಮ ನೇಮಕಾತಿ ಹಗರಣದ ತನಿಖೆಯನ್ನು  ಸಿಐಡಿ ನಡೆಸುತ್ತಿದೆ. ಮತ್ತೊಂದೆಡೆ ತಾತ್ಕಾಲಿಕ ನೇಮಕಾತಿ ಆಯ್ಕೆ‌‌ಪಟ್ಟಿಯನ್ನು ಸರ್ಕಾರ ರದ್ದುಗೊಳಿಸಿರುವುದನ್ನು  ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇನ್ನೊಂದೆಡೆ ಅರ್ಜಿ ಕೋರ್ಟ್‌ ನಲ್ಲಿದ್ದು ಸಮಸ್ಯೆ ಇತ್ಯರ್ಥದ ಬಳಿಕ  ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ವಿಳಂಬ ಸಾಧ್ಯತೆ ಹಿನ್ನೆಲೆ ಮರುಪರೀಕ್ಷೆ ನಿರೀಕ್ಷೆಯಲ್ಲಿರುವ ಸಾವಿರಾರು ಆಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ‌‌‌ ಪರಿಣಾಮಿಸಿದೆ. ಮರುಪರೀಕ್ಷೆ ವಿರೋಧಿಸುತ್ತಿರುವ ಆಭ್ಯರ್ಥಿಗಳಿಗೂ ಪರೋಕ್ಷವಾಗಿ ಹಿನ್ನೆಡೆಯಾಗಿದೆ.

 ಪಿಎಸ್ಐ‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗುತ್ತಿದ್ದಂತೆ ಸರ್ಕಾರ ತಾತ್ಕಾಲಿಕ‌ ನೇಮಕಾತಿ ಪಟ್ಟಿ ರದ್ದುಗೊಳಿಸಿ ಪ್ರಕರಣದ ತನಿಖೆಯನ್ನು ಸಿಐಡಿ ಹೆಗಲಿಗೆ ವಹಿಸಿತ್ತು‌. ರಾಜಕೀಯ ಮುಖಂಡರು, ನೇಮಕಾತಿ ವಿಭಾಗದ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳು ಹಾಗೂ ಆಭ್ಯರ್ಥಿಗಳು ಸೇರಿ ಸುಮಾರು 50ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ  ಕೊಂಡೊಯ್ಯುವತ್ತ ಸಿಐಡಿ ತನಿಖೆ ಚುರುಕಿನಿಂದ‌‌ ನಡೆಸುತ್ತಿದೆ.
 
ಇದನ್ನೂ ಓದಿ : 
ಭಾರತ v/s ದ.ಆಫ್ರಿಕಾ ಪಂದ್ಯಾವಳಿ ಹಿನ್ನೆಲೆ : ಮೆಟ್ರೋದ ಸಮಯ ವಿಸ್ತರಣೆ ಮಾಡಿದ BMRCL 

ಪ್ರಕರಣ ತನಿಖೆ ಮುಕ್ತಾಯವಾಗುವರೆಗೂ ಮರುಪರೀಕ್ಷೆ ನಡೆಸದಿರಲು ನಿರ್ಧರಿಸಿದ್ದ ಸರ್ಕಾರ‌, ಇದೀಗ ಕೋರ್ಟ್ ಆದೇಶ ನೋಡಿಕೊಂಡು ಮುಂದಿನ‌‌‌ ಹೆಜ್ಜೆ ಇಡುವುದಾಗಿ ಹೇಳಿದೆ. ಮತ್ತೊಂದೆಡೆ ನೇಮಕಾತಿ ಪಟ್ಟಿ ರದ್ದುಗೊಳಿಸಿರುವುದನ್ನು ‌ ಪ್ರಶ್ನಿಸಿ ಸುಮಾರು 24 ಮಂದಿ ಆಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹಾಕಿದ್ದ ಅರ್ಜಿಗಳು ವಿಚಾರಣೆ ಹಂತದಲ್ಲಿವೆ.‌ ವಿಚಾರಣೆ ಮುಗಿಯುವವರೆಗೂ ಮರುಪರೀಕ್ಷೆ ನಡೆಸಬೇಕಾ,ಬೇಡವಾ ಎಂಬ ಕುರಿತು ಸರ್ಕಾರ‌ ಜಿಜ್ಞಾಸೆಯಲ್ಲಿದೆ. 

ಇನ್ನೊಂದು‌ ಕಡೆ ಶತಾಯಗತಾಯ ಪಿಎಸ್ಐ ಆಗಲು‌ ಪರೀಕ್ಷೆಯಲ್ಲಿ ವಾಮಮಾರ್ಗದಲ್ಲಿ ಲಕ್ಷಾಂತರ ರೂಪಾಯಿ ನೀಡಿ ಅಕ್ರಮವಾಗಿ ಕೆಲ ಆಭ್ಯರ್ಥಿಗಳು ನೇಮಕಾತಿಯಾಗಿರುವುದು ತನಿಖೆಯಲ್ಲಿ‌ ಗೊತ್ತಾಗಿದೆ. ಇದರಿಂದ ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ನೇಮಕಾತಿಯಾಗಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾದಂತಾಗಿದೆ. ಜೊತೆಗೆ ಕೆಲವೇ ಅಂಕಗಳಿಂದ ನೇಮಕವಾಗದ ಸಾವಿರಾರು ಆಭ್ಯರ್ಥಿಗಳು ಮರುಪರೀಕ್ಷೆ ನಡೆಸಬೇಕೆಂದು‌‌ ಪಟ್ಟು ಹಿಡಿದಿದ್ದಾರೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಸರ್ಕಾರಿ ಕೆಲಸ ಸಿಕ್ಕಿತು  ಅಂದುಕೊಳ್ಳುವಾಗಲೇ ಕೆಲಸ ಕೈ ಜಾರಿದ್ದು ನೇಮಕವಾದ ಆಭ್ಯರ್ಥಿಗಳ ಪಾಲಿಗೆ ಜೀರ್ಣಿಸಿಕೊಳ್ಳಲಾಗದ ಸತ್ಯ. 

ಇದನ್ನೂ ಓದಿ : Arecanut Price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ

ಮತ್ತೆ ಓದಿ ಪರೀಕ್ಷೆಯಲ್ಲಿ ನೇಮಕವಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಕೆಲ ಅಭ್ಯರ್ಥಿಗಳು. ಮತ್ತೊಂದು ಕಡೆ ನಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಿಎಸ್ಐಯಾಗಿ ನೇಮಕಾತಿಯಾಗಿದ್ದೇವೆ. ಕೆಲ ಅಭ್ಯರ್ಥಿಗಳು‌ ಮಾಡಿದ ತಪ್ಪಿನಿಂದಾಗಿ ನಾವು ಯಾಕೆ‌‌ ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಇನ್ನುಳಿದವರಿಗೆ ನೇಮಕಾತಿ ಆದೇಶ ಪ್ರತಿಯನ್ನು ಸರ್ಕಾರ ನೀಡಲಿ ಎಂದು ಒತ್ತಾಯಿಸಿದ್ದಾರೆ.  ನ್ಯಾಯ ಸಿಗುವ ವಿಶ್ವಾಸದಿಂದ ಕೆಎಟಿ ಮೆಟ್ಟಿಲೇರಿದ್ದೇವೆ ಎನ್ನುತ್ತಾರೆ ನೇಮಕವಾದ ಅಭ್ಯರ್ಥಿಗಳು. ನೊಂದ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದೇ ಎಲ್ಲರ ಆಗ್ರಹ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News