ಭಾರತ v/s ದ.ಆಫ್ರಿಕಾ ಪಂದ್ಯಾವಳಿ ಹಿನ್ನೆಲೆ : ಮೆಟ್ರೋದ ಸಮಯ ವಿಸ್ತರಣೆ ಮಾಡಿದ BMRCL

ಕ್ರಿಕೆಟ್ ಪ್ರಿಯರಿಗೆ ಮೆಟ್ರೋ ನಿಗಮದಿಂದ ಗುಡ್ ನ್ಯೂಸ್ ನೀಡಿದೆ. ಜೂನ್ 19ರಂದು ಮೆಟ್ರೋದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.  ಆ ದಿನ ಬೆಂಗಳೂರಿನಲ್ಲಿ  ಭಾರತ  ಮತ್ತು  ದ.ಆಫ್ರಿಕಾ ನಡುವೆ  ಕ್ರಿಕೆಟ್ ಪಂದ್ಯ ನಡೆಯಲಿದೆ.

Written by - Ranjitha R K | Last Updated : Jun 17, 2022, 11:21 AM IST
  • ಕ್ರಿಕೆಟ್ ಪ್ರಿಯರಿಗೆ ಮೆಟ್ರೋ ನಿಗಮದಿಂದ ಗುಡ್ ನ್ಯೂಸ್
  • ನಮ್ಮ ಮೆಟ್ರೋದ ಸಮಯ ವಿಸ್ತರಣೆ
  • ತಡ ರಾತ್ರಿವರೆಗೆ ಮೆಟ್ರೋ ಸೇವೆ ಲಭ್ಯ
ಭಾರತ v/s ದ.ಆಫ್ರಿಕಾ ಪಂದ್ಯಾವಳಿ ಹಿನ್ನೆಲೆ :  ಮೆಟ್ರೋದ ಸಮಯ ವಿಸ್ತರಣೆ ಮಾಡಿದ BMRCL  title=
Good news for cricket lovers (file photo)

ಬೆಂಗಳೂರು : ಬೆಂಗಳೂರಿನಲ್ಲಿ ಭಾರತ  ಮತ್ತು  ದ.ಆಫ್ರಿಕಾ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಜೂನ್ 19 ರಂದು ನಮ್ಮ ಮೆಟ್ರೋದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.  ಈ ಬಗ್ಗೆ BMRCL ಪತ್ರಿಕಾ ಪ್ರಕಟಣೆ ಹೊರಡಿಸಿದೆ. 

ಕ್ರಿಕೆಟ್ ಪ್ರಿಯರಿಗೆ ಮೆಟ್ರೋ ನಿಗಮದಿಂದ ಗುಡ್ ನ್ಯೂಸ್ ನೀಡಿದೆ. ಜೂನ್ 19ರಂದು ಮೆಟ್ರೋದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.  ಆ ದಿನ ಬೆಂಗಳೂರಿನಲ್ಲಿ ಭಾರತ ಮತ್ತು ದ.ಆಫ್ರಿಕಾ ನಡುವೆ  ಕ್ರಿಕೆಟ್ ಪಂದ್ಯ ನಡೆಯಲಿದೆ. ಪಂದ್ಯ ಮುಕ್ತಾಯದ ನಂತರ ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ತಮ್ಮ ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ಬಿಎಂ ಆರ್ ಸಿಎಲ್ ಈ ನಿರ್ಧಾರ ತೆಗೆದುಕೊಂಡಿದೆ. 

ಇದನ್ನೂ ಓದಿ : ಎಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ರಾಜ್ಯದ 80 ಕಡೆ ಏಕಕಾಲಕ್ಕೆ ದಾಳಿ

ಜೂನ್ 19 ರಂದು,  ಭಾರತ v/s ದಕ್ಷಿಣ ಆಫ್ರಿಕಾ ಟಿ-20 ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಮೆಟ್ರೋ ರೈಲು ಸಂಚಾರವನ್ನು ಮಧ್ಯರಾತ್ರಿ 1.30ರವರೆಗೆ ವಿಸ್ತರಣೆ ಮಾಡಲಾಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಸಹಕಾರಿ ಆಗುವ ನಿಟ್ಟಿನಲ್ಲಿ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ. ಎಲ್ಲಾ‌ ನಿಲ್ದಾಣಗಳಲ್ಲಿಯೂ ತಡ ರಾತ್ರಿವರೆಗೆ ಮೆಟ್ರೋ ಸೇವೆ ಲಭ್ಯವಿರಲಿದೆ. 

ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೆಯ ರೈಲು  ಹೊರಡಲಿದೆ.  ಮುಂಚಿತವಾಗಿಯೇ ನಿಲ್ದಾಣಗಳ ಲ್ಲಿ ಪೇಪರ್ ಟಿಕೆಟ್ ಲಭ್ಯವಿರಲಿದೆ. ಭಾನುವಾರ ಮಧ್ಯಾಹ್ನ 3ಗಂಟೆಯಿಂದಲೇ ಪೇಪರ್ ಟಿಕೆಟ್ ಲಭ್ಯವಿರಲಿದೆ.  ಪ್ರತೀ ಪೇಪರ್ ಟಿಕೆಟ್ ಗೂ 50 ರೂ. ಪಾವತಿಸಬೇಕಾಗುತ್ತದೆ.  ಪೇಪರ್ ಟಿಕೆಟ್ ಜೊತೆಗೆ ಸ್ಮಾರ್ಟ್ ಕಾರ್ಡ್ ಸೇವೆ ಕೂಡ ಪ್ರಯಾಣಿಕರಿಗೆ ಲಭ್ಯವಿರಲಿದೆ. 

ಇದನ್ನೂ ಓದಿ : 'ನ್ಯಾಷನಲ್ ಹೆರಾಲ್ಡ್' ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ-ಕಾಂಗ್ರೆಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News