ಬೆಂಗಳೂರು : ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರ್ ಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ (Puneeth Rajkumar)ಹೆಸರಿಡಲು ನಿರ್ಧರಿಸಲಾಗಿದೆ. 12 ಕಿಮೀ ಉದ್ದದ ರಸ್ತೆಗೆ ಪುನೀತ್ ಹೆಸರನ್ನು ನಾಮಕರಣ ಮಾಡಲಾಗುವುದು.
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ (Puneeth Rajkumar birthday) ಮಾಸದಲ್ಲಿಯೇ ಅಪ್ಪು ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ. ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರ್ ಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗೂ, ಅಂದರೆ ಒಟ್ಟು 12 ಕಿಮೀ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡಲು ಒಪ್ಪಿಗೆ ಸೂಚಿಸಲಾಗಿದೆ. ಬನಶಂಕರಿ , ಕದಿರೇನಹಳ್ಳಿ , ಸಾರಕ್ಕಿ ಸಿಗ್ನಲ್ , ಜೆಪಿ ನಗರ ಹಾದುಹೋಗುವ ಬನ್ನೇರುಘಟ್ಟ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗುವುದು (Puneeth Rajkumar Road).
ಇದನ್ನೂ ಓದಿ : '2023 ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ'
ಮಾರ್ಚ್ 30 ರಂದು ಈ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ಅಪ್ಪು ಇಡೀ ಕುಟುಂಬ ಭಾಗಿಯಾಗಲಿದೆ (Puneeth Rajkumar Family). ಅದೇ ದಿನ ಈ ರಸ್ತೆಯ ಎಲ್ಲಾ ಬೋರ್ಡ್ ಗಳನ್ನು ಕೂಡಾ ಬದಲಾಯಿಸಲಾಗುವುದು ಎನ್ನಲಾಗಿದೆ. ಕಮರ್ಷಿಯಲ್ ಅಂಗಡಿಗಳ ಬೋರ್ಡ್ ಗಳಲ್ಲಿಯೂ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಬದಲಾಯಿಸಲಾಗುವುದು ಎಂದು ಹೇಳಲಾಗಿದೆ.
ಈ ರಸ್ತೆಗೆ ಅಪ್ಪು ಹೆಸರಿಡುವಂತೆ, ಬಿಬಿಎಂಪಿ (BBMP)ಮಾಜಿ ಆಡಳಿತ ಪಕ್ಷ ನಾಯಕ ಎನ್ ಆರ್ ರಮೇಶ್ ಪ್ರಸ್ತಾಪ ಮಾಡಿದ್ದರು. ಇದೀಗ ಬಿಬಿಎಂಪಿ ಆಡಳಿತಾಧಿಕಾರಿ ವತಿಯಿಂದ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬನಶಂಕರಿ 2 ನೇ ಹಂತ , ಬನಶಂಕರಿ 3 ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಮಧುಗಿರಿ ನಿವಾಸಿಗಳ ಸಂಘ, ಗುರುರಾಜ ಬಡಾವಣೆ ಸಂಘ ,ಜೆ ಪಿ ನಗರ ನಿವಾಸಿಗಳ ಸಂಘ ಹೀಗೆ ಒಟ್ಟು 9 ಸಂಘಗಳು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು.
ಇದನ್ನೂ ಓದಿ : ಧಾರವಾಡದ ಜಿಲ್ಲಾಧಿಕಾರಿ ಕಚೇರಿಗೆ ಮಾಟ ಮಾಡಿಸಿದ ಭೂಪರು...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.