ಬೆಂಗಳೂರು : ಭಾರತ ನೆಲದ ಬಗ್ಗೆ ಕೀಳು ಹೇಳಿಕೆ ನೀಡಿದವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದಾರೆ. ಇಂಥವರಿಂದ ಈ ನೆಲಕ್ಕೇ ಅಪಚಾರವಾಗುತ್ತಿದೆ. ಇಂಥ ಯಾತ್ರೆಗೆ ಜನ ಬೆಲೆ ನೀಡುವುದಿಲ್ಲ ಎಂದು ಭಾರತ್ ಜೋಡೋ ಯಾತ್ರೆ ವಿರುದ್ಧ ಸಚಿವ ಆರ್, ಆಶೋಕ್ ಹರಿಹಾಯ್ದರು.
ವಿಧಾನಸೌಧದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಕಂದಾಯ ಸಚಿವರು, ಕೇರಳದಿಂದ ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಬಂದಿದೆ. ತಮಿಳುನಾಡು, ಕೇರಳ ಮುಗಿಸಿ ಬಂದಿದೆ. ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ. ಯಾಕೆಂದರೆ ಚರ್ಚ್ ಫಾದರ್ ಒಬ್ಬರು ಭಾರತ ನೆಲ ತುಳಿಯಲ್ಲ, ಇದು ಅಪವಿತ್ರ ಭೂಮಿ ಅದಕ್ಕೆ ಚಪ್ಪಲಿ ಹಾಕ್ತೀನಿ ಅಂತ ಹೇಳಿದ್ದರು. ಅವರಿಂದ ಆಶಿರ್ವಾದ ಪಡೆದು ಬಂದಿದ್ದಾರೆ. ಭಾರತ ಮಾತೆಯೇ ಇವರಿಗೆಲ್ಲ ಬುದ್ಧಿಕಲಿಸುತ್ತಾಳೆ. ಅದು ಬಿಟ್ಟು ಭಾರತ ನೆಲದ ಬಗ್ಗೆ ಕೀಳು ಹೇಳಿಕೆ ನೀಡಿದವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದಾರೆ. ಇಂಥವರಿಂದ ಈ ನೆಲಕ್ಕೇ ಅಪಚಾರವಾಗುತ್ತಿದೆ. ಇಂಥ ಯಾತ್ರೆಗೆ ಜನ ಬೆಲೆ ನೀಡುವುದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ʼಒರಿಜಿನಲ್ ನಾನು.. ಇರೋದೆ ಹೀಗೆʼ : ಫೇಕ್ ವ್ಯಕ್ತಿ ಎಂದವರ ಮೇಲೆ ರೂಪೇಶ್ ಗರಂ..!
ರಾಜ್ಯದಲ್ಲಿ 21 ದಿನ ಕಡಿಮೆ ಆಯ್ತು, 30-40ದಿನ ಮಾಡಿದ್ರೆ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚುತ್ತಿತ್ತು. ಕನಿಷ್ಠ 40-50 ದಿನ ಯಾತ್ರೆ ಕರ್ನಾಟಕದಲ್ಲಿ ಮಾಡಿ ಎನ್ನುವುದಾಗಿ ರಾಹುಲ್ ಗಾಂಧಿಯವರಿಗೆ ವಿನಂತಿ ಮಾಡುತ್ತೇನೆ. ರಾಹುಲ್ ಗಾಂಧಿ ಹೋದ ಕಡೆ 99% ಭಾಗ ಕಾಂಗ್ರೆಸ್ ನೆಲ ಕಚ್ಚಿದೆ. ಮೋದಿ ಹೋದ ಕಡೆ 99% ಸಕ್ಸಸ್ ಕಂಡಿದೆ. ಇನ್ನಷ್ಟು ಕಡೆ ಕಾಂಗ್ರೆಸ್ ಪಾದಯಾತ್ರೆ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚುವುದು ಶತಃಸಿದ್ಧ. ಸಿದ್ದರಾಮಯ್ಯ ಆರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬರಲಿದೆ ಎಂದಿದ್ದಾರೆ. ಅದು ಕಾಂಗ್ರೆಸ್ ನ ಹಗಲು ಕನಸು. ಆರು ತಿಂಗಳಲ್ಲ 60 ವರ್ಷ ಆದ್ರೂ ಕಾಂಗ್ರೆಸ್ ರಾಜ್ಯದಲ್ಲಿ ಬರಲ್ಲ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ:Video : ಬೆಂಗಾವಲು ಪಡೆ ತಡೆದು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ
ಡಿಕೆಶಿ ಆರೋಪಕ್ಕೆ ಬೆಲೆ ಇಲ್ಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅನ್ನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅಶೋಕ್ ಅವರು, ಪ್ರತಿ ಬಾರಿ ಡಿಕೆ ಶಿವಕುಮಾರ್ ಹೀಗೆಯೇ ಹೇಳುತ್ತಾರೆ. ಅವರ ಮೇಲೆ ಸಿಬಿಐ ಮಾಡಿದ್ದು ರಾಜಕೀಯ ಪ್ರೇರಿತ ಆದರೆ, ಜನಾರ್ದನ ರೆಡ್ಡಿ ಮೇಲೆ ಕಾಂಗ್ರೆಸ್ ಮಾಡಿದ್ದು ಏನು?. ಜನಾರ್ಧನ ರೆಡ್ಡಿ ಮೇಲೆ ಕಾಂಗ್ರೆಸ್ ಮಾಡಿದ್ದು ರಾಜಕೀಯ ಪ್ರೇರಿತ ಅಂತ ಹೇಳಬಹುದಲ್ಲ. ಸಿಬಿಐ, ಇಡಿ ಯಾವಾಗ ದಾಳಿ ಮಾಡಬೇಕು ಅಂತ ಅ ಸಂಸ್ಥೆಯೇ ನಿರ್ಧಾರ ಮಾಡುತ್ತೆ. ಚುನಾವಣೆ ಸಮಯದಲ್ಲಿ ಮಾಡಬಾರದು ಅಂತ ಏನಾದ್ರು ನಿಯಮ ಇದೆಯಾ?. ಅವು ಸ್ವತಂತ್ರ ಸಂಸ್ಥೆಗಳು. ಅದರಲ್ಲಿ ಯಾರ ಹಸ್ತಕ್ಷೇಪ ಮಾಡುವುದಿಲ್ಲ. ಆಯಾ ಸಂಸ್ಥೆಗಳು ಅವುಗಳ ಕೆಲಸ ಮಾಡುತ್ತವೆ. ಸುಮ್ಮನೆ ಇಂಥ ಆರೋಪಗಳಿಗೆ ಬೆಲೆ ಇಲ್ಲ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.