Rameshwaram Cafe in Ambanis Wedding : ಅಂಬಾನಿ ಪುತ್ರನ ಮದುವೆಯಲ್ಲಿ ಮೇಳೈಸಲಿದೆ ‘ರಾಮೇಶ್ವರಂ’ ಕೆಫೆ ರುಚಿ : ಅದ್ದೂರಿ ಮದುವೆಯಲ್ಲಿ ಕಮಾಲ್ ಮಾಡಲಿದೆ ರಾಜ್ಯದ ಹೊಟೇಲ್

Rameshwaram Cafe in Ambanis Wedding : ಇಡ್ಲಿ-ದೋಸೆಯಂತಹ ದಕ್ಷಿಣ ಭಾರತದ ಖಾದ್ಯಗಳಿಗೆ ಪ್ರಸಿದ್ಧವಾಗಿದೆ ಈ ಕೆಫೆ. ಅಲ್ಲದೆ ಇಲ್ಲಿಯ ಫಿಲ್ಟರ್ ಕಾಫಿ ಭಾರೀ ಫೇಮಸ್.

Written by - Ranjitha R K | Last Updated : Mar 2, 2024, 01:20 PM IST
  • ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಸಭವಿಸಿದ ಸ್ಫೋಟ
  • ಇಡ್ಲಿ-ದೋಸೆಯಂತಹ ದಕ್ಷಿಣ ಭಾರತದ ಖಾದ್ಯಗಳಿಗೆ ಪ್ರಸಿದ್ಧ
  • ಅಂಬಾನಿ ಪುತ್ರನ ಮದುವೆಯಲ್ಲಿಯೂ ಸದ್ದು ಮಾಡಲಿದೆ ‘ರಾಮೇಶ್ವರಂ’ ರುಚಿ
Rameshwaram Cafe in Ambanis Wedding : ಅಂಬಾನಿ ಪುತ್ರನ ಮದುವೆಯಲ್ಲಿ  ಮೇಳೈಸಲಿದೆ ‘ರಾಮೇಶ್ವರಂ’ ಕೆಫೆ ರುಚಿ : ಅದ್ದೂರಿ ಮದುವೆಯಲ್ಲಿ ಕಮಾಲ್ ಮಾಡಲಿದೆ ರಾಜ್ಯದ ಹೊಟೇಲ್  title=

Rameshwaram Cafe in Ambanis Wedding : ಬೆಂಗಳೂರಿನ ಕುಂದಲಹಳ್ಳಿ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಸಭವಿಸಿದ ಸ್ಫೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇಡ್ಲಿ-ದೋಸೆಯಂತಹ ದಕ್ಷಿಣ ಭಾರತದ ಖಾದ್ಯಗಳಿಗೆ ಪ್ರಸಿದ್ಧವಾಗಿದೆ ಈ ಕೆಫೆ. ಅಲ್ಲದೆ ಇಲ್ಲಿಯ  ಫಿಲ್ಟರ್ ಕಾಫಿ ಭಾರೀ ಫೇಮಸ್. ಇಡ್ಲಿ-ಸಾಂಬಾರ್ ಮತ್ತು ಫಿಲ್ಟರ್ ಕಾಫಿಗೆನೆ ಈ ಹೊಟೇಲ್ ಖ್ಯಾತಿ. ಇಲ್ಲಿಗೆ ಬರುವ ಗ್ರಾಹಕರು ಇಡ್ಲಿ-ಸಾಂಬಾರ್ ಮತ್ತು ಫಿಲ್ಟರ್ ಕಾಫೀ ಕುಡಿಯದೆ ಹೋಗುವುದು ಬಹಳ ವಿರಳ. ಇಲ್ಲಿ ಯಾವಾಗ ನೋಡಿದರೂ ಜನ ಸಂದಣಿ ತುಂಬಿರುತ್ತಿತ್ತು. ಇಲ್ಲಿಯ ತಿಂಡಿ ಕಾಫಿಯ ರುಚಿ ಸವಿಯಬೇಕಾದರೆ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುವುದು ಅನಿವಾರ್ಯ. ಇಷ್ಟು ಹೇಳಿದ ಮೇಲೆ ಇಲ್ಲಿಯ ತಿಂಡಿ ತಿನಿಸಿನ ರುಚಿಯ ಬಗ್ಗೆ ಹೆಚ್ಚು ವಿವರಿಸಬೇಕಾಗಿಲ್ಲ. 

ಅಂಬಾನಿ ಮದುವೆಯಲ್ಲಿಯೂ  ‘ರಾಮೇಶ್ವರಂ’ ಕೆಫೆ: ಈ ಕೆಫೆಯ ತಿಂಡಿಯ ರುಚಿಯ ಖ್ಯಾತಿ ದೇಶದ ನಾನಾ ಭಾಗಗಳಲ್ಲಿಯೂ ಸುದ್ದಿಯಾಗಿದೆ. ಹೌದು, ದೇಶದ ಅತಿ ದೊಡ್ಡ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿಯೂ  ‘ರಾಮೇಶ್ವರಂ’ ಕೆಫೆ ರುಚಿ ಮೇಳೈಸಲಿದೆ. ಅಂಬಾನಿ ಮದುವೆಗೆ ಬರುವವರು  ರಾಮೇಶ್ವರಂ’ ಕೆಫೆಯ ರುಚಿಯನ್ನು ಸವಿಯಲಿದ್ದಾರೆ. 

ಇದನ್ನೂ ಓದಿ : ರಾಮೇಶ್ವರ ಕಫೆ ಸ್ಪೋಟ ಪ್ರಕರಣ: ಆರೋಪಿ ಪತ್ತೆಗೆ ತನಿಖೆ ಚುರುಕು-ಸಿಎಂ ಸಿದ್ದರಾಮಯ್ಯ

ಜಾಮ್ ​​ನಗರ ತಲುಪಿದೆ 50 ಜನರ ತಂಡ : ಗುಜರಾತಿನ ಜಾಮ್ ​​ನಗರದಲ್ಲಿ ಮುಖೇಶ ಅಂಬಾನಿ ಪುತ್ರ ಅನಂತ್ ಅಂಬಾನಿ ಮಗನ ಮದುವೆ  ನಡೆಲಿದೆ. ಈ ವೈಭವದ ಮದುವೆಯಲ್ಲಿ ದೇಶ ವಿದೇಶಗಳಿಂದ ಅದ್ಭುತ ಬಾಣಸಿಗರನ್ನು ಕರೆಸಲಾಗಿದೆ. ಹಾಗೆಯೇ ಈ ವಿವಾಹ  ಊಟದ ತಯಾರಿಕೆಗೆ ರಾಮೇಶ್ವರಂ ಕೆಫೆಯೂ ಆಯ್ಕೆಯಾಗಿದೆ. 5 ದಿನದ ಹಿಂದೆಯೇ ರಾಮೇಶ್ವರಂ ಕೆಫೆಯ 50 ಜನರ ತಂಡ, ಗುಜರಾತಿನ ಜಾಮ್ ​​ನಗರಕ್ಕೆ ತೆರಳಿದೆ. 

ರಾಮೇಶ್ವರಂ ಕೆಫೆ ಊಟದ ಗುಣಮಟ್ಟ, ರುಚಿ, ವೆರೈಟಿ ಊಟಕ್ಕೆ ಮನೆಯ ಮಾತಾಗಿದ್ದು, ಮುಖೇಶ್ ಅಂಬಾನಿಯ ಮಗನ ಮದುವೆಯಲ್ಲಿಯೂ ತಮ್ಮ ರುಚಿಯ ಕಮಾಲ್‌  ತೋರಿಸಲಿದೆ. 

ಇದನ್ನೂ ಓದಿ : ಮಾರ್ಚ್ 2ರಂದು BIFFನಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ಇಲ್ಲಿವೆ ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News