ಬೆಂಗಳೂರು : ನಿನ್ನೆ(ಫೆ.4) ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಟೀಂ ಮುಖ್ಯಸ್ಥೆ ರಮ್ಯಾ ಟೀಕಿಸಿದ್ದು, ಇದಕ್ಕೆ ನಟ ಜಗ್ಗೇಶ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ನಡೆದ ಸಮಾವೇಶದಲ್ಲಿ "ರೈತರಿಗೆ ತಮ್ಮ ಮೊದಲ(top) ಆಧ್ಯತೆ" ಎಂದು ಹೇಳಿದ್ದಕ್ಕೆ ರಮ್ಯ ಅವರು, ''ನೀವು ನಶೆಯಲ್ಲಿದ್ದರೆ(POT) ಹೀಗೆ ಆಗೋದು, pot ಎಂದರೆ ಪೊಟ್ಯಾಟೋ, ಆನಿಯನ್, ಟೊಮ್ಯಾಟೋ "ಎಂದು ಟ್ವೀಟರ್ನಲ್ಲಿ ಟೀಕಿಸಿದ್ದರು.
You didn’t want to tag me cos you didn’t want people to watch the Modi video pinned on my timeline? Come on! Be a sport-
And hey, POT = Potato 🥔 Onion Tomato 🍅 what were you thinking? 😉 https://t.co/zOEthGQry8— Divya Spandana/Ramya (@divyaspandana) February 4, 2018
ಅದಕ್ಕೆ ತಮ್ಮ ಟ್ವೀಟರ್ ಖಾತೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, "ದೊಡ್ಡವರ ಬಗ್ಗೆ ಮಾತಾಡುವ ಮಂದಿಗೆ ವಯಸ್ಸು, ಅನುಭವ ಬೇಕು. ವಿಶ್ವದ ಬಲಿಷ್ಠ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪ ಈಕೆ" ಎಂದಿದ್ದಾರೆ
ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ
ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆಮಾಡಿ ನಿರ್ಣಯಸುತ್ತಾರೆ ಜನ..
ವಿಶ್ವದ ಬಲಿಷ್ಟರಾಷ್ಠ್ರದ ನಾಯಕರೆ #modi ರವರ ಒಪ್ಪಿಮೆಚ್ಚಿದ್ದಾರೆ..
ಈಕೆ ಯಾರು?ಸಾಧನೆ ಏನು?ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ! https://t.co/VV2TBVNseS— ನವರಸನಾಯಕ ಜಗ್ಗೇಶ್ (@Jaggesh2) February 4, 2018
ಮುಂದುವರೆದು ಟ್ವೀಟಿಸಿರುವ ಅವರು, ಸ್ಟಾರ್ ಹೋಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ, ದೊಡ್ಡವರ ನೆರಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸಿಕೊಂಡವರು ಯಾರನ್ನು ಬೇಕಾದರೂ ಟೀಕಿಸುತ್ತಾರೆ ಎಂದು ಅತಿ ಖಾರವಾಗಿ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
ಸ್ಟಾರ್ ಹೋಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ!
ಪ್ರತಿಚಿತ್ರದ ಕ್ಯಾಚ್ಗೆ ಅದೆಸ್ಟಾರ್ ಹೋಟಲ್ ಪಾರ್ಟಿ!
ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್!
ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು ಗಾಂದಿಆದರೇನು ಯಾರಿಗೆ ಬೇಕಾದರು ಹಂಗಿಸುತ್ತಾರೆ!
ಕಾರಣ ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ! https://t.co/ZtOvvwiVtw— ನವರಸನಾಯಕ ಜಗ್ಗೇಶ್ (@Jaggesh2) February 4, 2018
ರಮ್ಯ ಟ್ವೀಟ್ ಗೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಕೂಡ ಟ್ವಿಟರ್ನಲ್ಲಿ ಗರಂ ಟೀಕಿಸಿದ್ದು, "ರಮ್ಯಾ ಅವರ ಹೆಸರಿನಲ್ಲಿಯೇ ರಂ ಇದೆ. ಹಾಗಾಗಿ ಅವರು ನಷೆಯಲ್ಲಿದ್ದುಕೊಂಡು ಇಂತಹ ಟ್ವೀಟ್ಗಳನ್ನೂ ಮಾಡುತ್ತಾರೆ" ಎಂದಿದ್ದಾರೆ.