ಸುಮಲತಾ ಅಂಬರೀಶ್ ಬಗ್ಗೆ ಉಪೇಂದ್ರ ಹೇಳಿದ್ದೇನು?

 ಸುಮಲತಾ ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಸುಮಲತಾ ನಮ್ಮ ಅತ್ತಿಗೆ ಇದ್ದಂತೆ. ಅವರಿಗೆ ಚುನಾವಣೆಯಲ್ಲಿ ಒಳ್ಳೆಯದಾಗಲಿ, ಉತ್ತಮ ಭವಿಷ್ಯವಿದೆ ಎಂದು ಉಪೇಂದ್ರ ಹೇಳಿದ್ದಾರೆ.

Updated: Apr 15, 2019 , 11:22 AM IST
ಸುಮಲತಾ ಅಂಬರೀಶ್ ಬಗ್ಗೆ ಉಪೇಂದ್ರ ಹೇಳಿದ್ದೇನು?

ಕೊಪ್ಪಳ: ಸುಮಲತಾ ಅಂಬರೀಶ್ ಅವರು ನಮಗೆ ಅತ್ತಿಗೆ ಇದ್ದ ಹಾಗೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಸುಮಲತಾ ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಸುಮಲತಾ ನಮ್ಮ ಅತ್ತಿಗೆ ಇದ್ದಂತೆ. ಅವರಿಗೆ ಚುನಾವಣೆಯಲ್ಲಿ ಒಳ್ಳೆಯದಾಗಲಿ, ಉತ್ತಮ ಭವಿಷ್ಯವಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಜಾಕಿಯ ಪಕ್ಷದ ಬಗ್ಗೆ ಮಾತನಾಡಿದ ಅವರು, ನನಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ. ಬಳ್ಳಾರಿ ಹೊರತುಪಡಿಸಿ ನಮ್ಮ‌ ಪಕ್ಷದಿಂದ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು  ಸ್ಪರ್ಧಿಸುತ್ತಿದ್ದಾರೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ. ಉತ್ತಮ ಪ್ರಜಾಕೀಯ ಪಕ್ಷದ ಪರ ನಾನು ನಟನಾಗಿ ಮತ ಕೇಳುತ್ತಿಲ್ಲ, ನಟನಾಗಿ ಓಟು ಕೇಳಿದರೆ ನಿವೇಲ್ಲಾ ನಗುತ್ತೀರಾ. ಇದರಿಂದ ಒಳ್ಳೆಯ ವಿಚಾರಗಳಿಗೆ ಮತ ಹಾಕಿ ಎಂದು ಹೇಳಿದರು.