ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು

     

Updated: Jan 19, 2018 , 05:40 PM IST
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು 2018ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡುವಂತೆ ವಿವಿಯ ಸಿಂಡಿಕೇಟ್ ಸದಸ್ಯರಲ್ಲೋಬ್ಬರಾದ ಎಂ ಎಸ್ ಎಸ್ ಕುಮಾರ್ ರವರು ಮನವಿ ಮಾಡಿದ್ದಾರೆ.

ಕುಲಪತಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ ಅವರು ಸಿದ್ದರಾಮಯ್ಯನವರು ಬಡತನದಿಂದ ಕಲಿತು ರಾಜ್ಯದ ಮುಖ್ಯಮಂತ್ರಿ ಪದವಿಯವರೆಗೆ ಏರಿರುವುದರ ಮೂಲಕ ಇಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇಂತವರಿಗೆ ಡಾಕ್ಟರೇಟ್ ನೀಡಿದರೆ ರಾಜ್ಯದ ವಿವಿಯ ಗೌರವ ಹೆಚ್ಚಲಿದೆ ಎಂದರು.ಈ ಜೊತೆಗೆ ಇತರೆ ಸದಸ್ಯರಿಂದ ಸುತ್ತೂರು ಶ್ರೀ, ಸಾಲುಮರದ ತಿಮ್ಮಕ್ಕ, ಇಸ್ರೋ ಅಧ್ಯಕ್ಷ ಕಿರಣ್‌ಕುಮಾರ್ ರವರುಗಳಿಗೆ ಗೌರವ ಡಾಕ್ಟರೇಟ್ ನೀಡುವಂತೆ ಇತರ ಸಿಂಡಿಕೇಟ್ ಸದಸ್ಯರು ಶಿಫಾರಸ್ಸು ಮಾಡಿದ್ದಾರೆ.