ಮುಂದಿನ ಮೂರು ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ: ಸಚಿವ ವಿ. ಸೋಮಣ್ಣ

ಯಡಿಯೂರಪ್ಪ ಅತ್ಯಂತ ಅನುಭವಿ ರಾಜಕಾರಣಿ, ನಮ್ಮೆಲ್ಲರ ಪ್ರಶ್ನಾತೀತ ನಾಯಕರು. ಅವರ ನಾಯಕತ್ವ ಬದಲಾವಣೆ ಮಾಡಲಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಟಿ-  ಸಚಿವ ವಿ. ಸೋಮಣ್ಣ   

Last Updated : Sep 23, 2020, 02:31 PM IST
  • ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಎಂದು ಪುನರ್ರಚ್ಛರಿಸಿದ ವಿ. ಸೋಮಣ್ಣ
  • ಯಡಿಯೂರಪ್ಪ ಅತ್ಯಂತ ಅನುಭವಿ ರಾಜಕಾರಣಿ, ನಮ್ಮೆಲ್ಲರ ಪ್ರಶ್ನಾತೀತ ನಾಯಕರು. ಅವರ ನಾಯಕತ್ವ ಬದಲಾವಣೆ ಮಾಡಲಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಟಿ- ಸಚಿವ ವಿ. ಸೋಮಣ್ಣ
  • ಒಂದು ಮನೆಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜವಾಗಿರುವಂತೆ ಪಕ್ಷದಲ್ಲೂ ಭಿನ್ನವಾದ ಅಭಿಪ್ರಾಯಗಳಿರುತ್ತವೆ-ಸಚಿವ ವಿ. ಸೋಮಣ್ಣ
ಮುಂದಿನ ಮೂರು ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ: ಸಚಿವ ವಿ. ಸೋಮಣ್ಣ  title=

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬ‌ ಪ್ರಶ್ನೆಯೇ ಇಲ್ಲ, ಮುಂದಿನ ಮೂರು ವರ್ಷವೂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ (V Somanna) ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದು ಮನೆಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜವಾಗಿರುವಂತೆ ಪಕ್ಷದಲ್ಲೂ ಭಿನ್ನವಾದ ಅಭಿಪ್ರಾಯಗಳಿರುತ್ತವೆ. ಅವೆಲ್ಲವನ್ನೂ‌ ಸರಿದೂಗಿಸಿಕೊಂಡು‌ ಹೋಗುವ ಸಾಮರ್ಥ್ಯ ಯಡಿಯೂರಪ್ಪ ಅವರಿಗೂ ಇದೆ. ಬಿಜೆಪಿ (BJP) ಹೈಕಮಾಂಡಿಗೂ ಇದೆ ಎಂದರು.

ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಎಂದು ಪುನರ್ರಚ್ಛರಿಸಿದ ವಿ. ಸೋಮಣ್ಣ, ಯಡಿಯೂರಪ್ಪ ಅತ್ಯಂತ ಅನುಭವಿ ರಾಜಕಾರಣಿ, ನಮ್ಮೆಲ್ಲರ ಪ್ರಶ್ನಾತೀತ ನಾಯಕರು. ಅವರ ನಾಯಕತ್ವ ಬದಲಾವಣೆ ಮಾಡಲಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು.

ಪಿಎಂ ಕೇರ್ಸ್ ಫಂಡ್ ಹಾಗೂ ಸಿಎಂ ರಿಲೀಫ್ ಫಂಡ್ ಪಾರದರ್ಶಕವಾಗಿಲ್ಲ: ಸಿದ್ದರಾಮಯ್ಯ ತರಾಟೆ

ಇದೇ ವೇಳೆ ಯಡಿಯೂರಪ್ಪ ವಿರುದ್ಧ ಸ್ವಪಕ್ಷೀಯರೇ ಹೈಕಮಾಂಡಿಗೆ ದೂರು ಕೊಡುವ ಬಗ್ಗೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ, ಅಂಥ ಯಾವುದೇ ಪ್ರಸಂಗ ಇಲ್ಲ ಎಂದರು.

ತಾವು ದೆಹಲಿಗೆ ಬಂದಿರುವ ಬಗ್ಗೆ ಮಾತನಾಡಿದ ವಿ. ಸೋಮಣ್ಣ, ವಸತಿ ಇಲಾಖೆಯ ಕೆಲಸದ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರಸಿಂಗ್ ತೋಮರ್ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಗ್ರಾಮೀಣ ಭಾಗದಲ್ಲಿ‌ ಮನೆಗಳ‌ ನಿರ್ಮಾಣ ಮಾಡುವ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ಇದೇ ವೇಳೆ ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಡಿ.ವಿ.‌ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡುತ್ತೇನೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
 

Trending News