Congress Government : ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ 500 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ, ಅವರು ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇರಲಿಲ್ಲ, ವೈಚಾರಿಕತೆ ಇರಲಿಲ್ಲ, ಪಠ್ಯ ರಚನೆ ಸಮಿತಿಗೆ ಅಪಕ್ವ ರೋಹಿತ್ ಚಕ್ರತೀರ್ಥ ಅಧ್ಯಕ್ಷನನ್ನಾಗಿ ಮಾಡಿದ್ದು ನಾಗೇಶ್ ಮಾಡಿದ ಮೊದಲ ತಪ್ಪು ಎಂದು ಕಿಡಿಕಾರಿದರು.
ಹೊಸ ಸರ್ಕಾರ ಬಂದಿದ್ದು ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು. ಸಾವರ್ಕರ್, ಹೆಡ್ಗೆವಾರ್ ಎಂಬ ಹುಸಿ ದೇಶಭಕ್ತರ ಪಠ್ಯವನ್ನು ತೆಗೆಯಬೇಕು, ಯಾವ ಪಠ್ಯವನ್ನು ಬೋಧೀಸಬೇಕೆಂದು ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಿಬೇಕು ಎಂದು ಆಗ್ರಹಿಸಿದರು.
ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಸುನೀಲ್ ಕುಮಾರ್ ಹೇಳಿರುವುದು ಅಪಕ್ವ ಹೇಳಿಕೆ, ಭಾರತೀಯತೆ ಎಂದರೆ ಸಮಗ್ರತೆ, ಎಲ್ಲರ ನ್ನೂ ಒಳಗೊಳ್ಳುವ ಸಮಗ್ರತೆ, ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಪಾರ್ಸಿ ಎಲ್ಲರನ್ನೂ ಒಳಗೊಳ್ಳಬೇಕು, ಆರ್ ಎಸ್ ಎಸ್ ಪ್ರಣೀತ ಭಾರತೀಯತೆಯಲ್ಲ, 1.5% ಜನರ ಭಾರತೀಯತೆ ಅಲ್ಲ ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ-ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ : ಸಾವರ್ಕರ್ ಹಾಗೂ ಹೆಡ್ಗೆವಾರ್ ಪಠ್ಯಕ್ಕೆ ಕೊಕ್?!
ಜಾತಿ ಗಣತಿ ವರದಿ ಬಹಿರಂಗವಾಗಬೇಕು- ಜಾರಿಯಾಗಬೇಕು
ಈ ಹಿಂದೆ ನಡೆಸಿದ್ದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಜಿಕ ಗಣತಿ ವರದಿ ಬಹಿರಂಗವಾಗಬೇಕು, ಜಾರಿಯಾಗಬೇಕು. ಬ್ರಾಹ್ಮಣ ಸೇರಿದಂತೆ ಎಲ್ಲಾ ವರ್ಗಗಳಲ್ಲಿ ಯಾರು ಹಿಂದುಳಿದಿವರೋ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.
ಬೆದರಿಕೆ ಪತ್ರ ಇನ್ನೂ ನಿಂತಿಲ್ಲ
ಕಳೆದ 15 ದಿನಗಳ ಹಿಂದೆಯೂ ನನಗೆ ಬೆದರಿಕೆ ಪತ್ರ ಬಂದಿದೆ. ಯಾವ ಲೇಖಕನಿಗೆ ಹೆಚ್ಚು ಬೆದರಿಕೆ ಪತ್ರ ಬರುವೋದೋ ಆತನೇ ನಿಜವಾದ ಲೇಖಕ, ಲೇಖಕನಿಗೆ ಬೆದರಿಕೆ ಪತ್ರಗಳು ಪ್ರೇಮಪತ್ರಗಳು ಇದ್ದಂತೆ ಎಂದು ಕೊಂಡಿದ್ದೇನೆ, ಮೋದಿಯನ್ನು ಅವಹೇಳನ ಮಾಡುತ್ತೀರಿ, ಮುಸ್ಲಿಂರನ್ನು ಒಲೈಸುತ್ತೀರಿ ಎಂದು ಬೆದರಿಕೆ ಪತ್ರಗಳು ಬರುತ್ತಿದ್ದು ಒಟ್ಟು ನನಗೆ 16 ಪತ್ರಗಳು ಬಂದಿದೆ ಎಂದರು.
ಇದನ್ನೂ ಓದಿ-ಕಮಲ ನಾಯಕರ ಮೇಲೆ ಕೈ ಕಣ್ಣು! ಉಡುಪಿ-ಚಿಕ್ಕಮಗಳೂರು ಎಂಪಿ ಅಭ್ಯರ್ಥಿ ಆಗ್ತಾರ ಜಯಪ್ರಕಾಶ್ ಹೆಗ್ಡೆ?
ಬಡವರಿಗೆ ಕೊಟ್ಟರೇ ಇವರಪ್ಪನ ಗಂಟು ಹೋಗೋದೇನು
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸಂಬಂಧ ಅವರು ಇದೇ ವೇಳೆ ಮಾತನಾಡಿ, ಗ್ಯಾರಂಟಿ ಯೋಜನೆಗಳು ಬಡವರ ಪರವಾದ ಯೋಜನೆಗಳು, ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟರೇ ಇವರಪ್ಪನ ಗಂಟು ಹೋಗೋದೆನೂ..? ಬಿಜೆಪಿ ಅವರು ಲೋಕಸಭೆಯಲ್ಲಿ ಗೆಲ್ಲಬೇಕಾದರೇ ಗ್ಯಾರಂಟಿ ಯೋಜನೆ ಬೆಂಬಲಿಸಬೇಕು ಎಂದರು.