ಬೆಂಗಳೂರು: 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾದ ಘಟನೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಬಿಗಿ ಭದ್ರತೆ ನಡುವೆಯೂ ವ್ಯಕ್ತಿಯೋರ್ವ ಪರೇಡ್ ಮೈದಾನಕ್ಕೆ ನುಗ್ಗಿದ್ದಾನೆ.
ಮೈದಾನಕ್ಕೆ ನುಗ್ಗಿದ ವ್ಯಕ್ತಿಯನ್ನು ಮೈಸೂರು ಮೂಲದ ಪರುಶುರಾಮ್ ಎಂದು ಗುರುತಿಸಲಾಗಿದೆ. ಮೀಡಿಯಾ ಪಾಸ್ ಮೂಲಕ ಮೈದಾನಕ್ಕೆ ಆಗಮಿಸಿದ್ದ ಈತ ತನ್ನ ಪ್ಯಾಂಟ್ ಜೇಬಿನಿಂದ ಭಿತ್ತಿ ಪತ್ರವನ್ನು ತೆಗೆದು ಮುಖ್ಯಮಂತ್ರಿಗಳ ಗ್ಯಾಲರಿಯತ್ತ ಎಸೆದಿದ್ದಾನೆ. ಮೈದಾನಕ್ಕೆ ನುಗ್ಗಿ ಸಿಎಂ ಗ್ಯಾಲರಿಯತ್ತ ಓಡುತ್ತಿದ್ದ ಆತನನ್ನು ಕೂಡಲೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
#WATCH | Bengaluru: Security breach reported during the Republic Day parade at the Parade Ground in Bengaluru when a person managed to enter the grounds and attempted to approach Karnataka CM Siddaramaiah. The police immediately took the person into custody and took him for… pic.twitter.com/LNGAzguEB3
— ANI (@ANI) January 26, 2024
ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಜಗದೀಶ್ ಶೆಟ್ಟರ್
ಪತ್ರಕರ್ತನ ಸೋಗಿನಲ್ಲಿ ಮಾಧ್ಯಮ ಸಿಬ್ಬಂದಿ ಗ್ಯಾಲರಿಗೆ ಬಂದಿದ್ದ ಪರುಶುರಾಮ್, ಕಾರ್ಯಕ್ರಮದ ನಡುವೆ ಮೈದಾನಕ್ಕೆ ಜಿಗಿದಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿಯ ಅಳಿಯ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದನಂತೆ. ಆದರೆ ಇನ್ನೂ ಪರೀಕ್ಷೆಯ ಫಲಿತಾಂಶ ಪ್ರಕಟವಾಗದಿರುವ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.
ಕೆಪಿಎಸ್‌ಸಿಗೆ ಸಂಬಂಧಿಸಿದಂತೆ ಇನ್ನೂ ಆರ್ಡರ್ ಬಂದಿಲ್ಲ, ಫಲಿತಾಂಶ ಪ್ರಕಟ ಮಾಡದೆ ವಿಳಂಬ ಮಾಡಲಾಗುತ್ತಿದೆ. ಸಿಎಂ ಭೇಟಿಗೆ ನಮಗೆ ಅವಕಾಶ ಸಿಕ್ಕಿಲ್ಲ ಅಂತಾ ಪೊಲೀಸ್ ಭದ್ರತೆ ಮಧ್ಯೆ ಸಿಎಂ ಮುಂದೆ ಪ್ಲೇಕಾರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ಬಂಧಿತ ಪರುಶುರಾಮ್ ತನ್ನ ಅಳಿಯನ KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಬಂದಿದ್ದನಂತೆ. ಆದರೆ ಸಿಎಂ ಬಳಿ ಪೊಲೀಸರು ಬಿಡಿದ ಕಾರಣ ಆತ ಪರೇಡ್ ಮಧ್ಯದಲ್ಲೇ ನುಗ್ಗಲು ಯತ್ನಿಸಿದ್ದಾನೆ. ಪರೇಡ್ ಮಧ್ಯೆಯೇ ಆತ ಮನವಿ ಪತ್ರವನ್ನು ಪ್ರದರ್ಶಿಸಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡು ಆತನ ಪೂರ್ವಾಪರವನ್ನು ಪರಿಶೀಲಿಸಲಾಗುತ್ತಿದೆʼ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.