ಏರ್ ಶೋ ಸ್ಥಳಾಂತರ ಕರ್ನಾಟಕಕ್ಕೆ ಮಾಡುವ ಅಪಮಾನ: ಡಿಸಿಎಂ ಜಿ.ಪರಮೇಶ್ವರ್

ಏರ್​ ಶೋವನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡಲು ಮುಂದಾಗಿರುವುದು ಸರಿಯಲ್ಲ. ಇದು ಕರ್ನಾಟಕಕ್ಕೇ ಮಾಡಿದ ಅವಮಾನ ಎಂದು ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Aug 12, 2018, 02:55 PM IST
ಏರ್ ಶೋ ಸ್ಥಳಾಂತರ ಕರ್ನಾಟಕಕ್ಕೆ ಮಾಡುವ ಅಪಮಾನ: ಡಿಸಿಎಂ ಜಿ.ಪರಮೇಶ್ವರ್ title=

ಬೆಂಗಳೂರು: ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನಡೆಯುತ್ತಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರಿಸಬೇಕೆಂದಿರುವ ಕೇಂದ್ರ ಸರ್ಕಾರದ ಆಲೋಚನೆ ಕರ್ನಾಟಕಕ್ಕೇ ಮಾಡಿದ ಅಪಮಾನ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಏರೋ ಇಂಡಿಯಾ ಬೆಂಗಳೂರಿನಿಂದ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ನಿಜಕ್ಕೂ ದುರದೃಷ್ಟಕರ. ಆರಂಭದಿಂದಲೂ ಕರ್ನಾಟಕ ಭಾರತದ ರಕ್ಷಣಾ ಪ್ರಧಾನ ಕೇಂದ್ರವಾಗಿಯೇ ಇದೆ. ಆದರೆ ಎನ್ಡಿಎ ಸರ್ಕಾರದಿಂದಾಗಿ ನಾವು ಪ್ರಮುಖ ರಕ್ಷಣಾ ಯೋಜನೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದುವರೆಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ನಮ್ಮವರು ಎಂಬ ಭಾವನೆಯಿತ್ತು. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದವರು. ಅವರೇ ಏರ್​ ಶೋವನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡಲು ಮುಂದಾಗಿರುವುದು ಸರಿಯಲ್ಲ. ಇದು ಕರ್ನಾಟಕಕ್ಕೇ ಮಾಡಿದ ಅವಮಾನ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅಲಿಘರ್​ ನಲ್ಲಿ ರಕ್ಷಣಾ ಕಾರಿಡಾರ್ ಉದ್ಘಾಟನೆ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ಆವೃತ್ತಿಯ ಏರ್ ಶೋವನ್ನು ಲಕ್ನೌನಲ್ಲೇ ನಡೆಸಲು ಅನುಮತಿ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏರ್ ಶೋವನ್ನು ಬೆಂಗಳೂರಿನಿಂದ ಲಕ್ನೌಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದೆ. ಆದರೆ ಇದುವರೆಗೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.

Trending News