ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಹಾಗೂ ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಗೆಲುವಿಗೆ ಪಕ್ಷವನ್ನು ಮತ್ತಷ್ಟು ಸಂಘಟಿಸಲು ಬಿಜೆಪಿ ರಾಜ್ಯ ಘಟಕದಿಂದ 'ಜನಸೇವಕ ಸಮಾವೇಶ' ಜ.11ರಿಂದ 13ರ ವರೆಗೆ ಏರ್ಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ(BJP) ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ತಂಡಗಳಲ್ಲಿ ರಾಜ್ಯದ 26 ಜಿಲ್ಲೆಗಳಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶ ಕುರಿತ ಸಿದ್ಧತೆ ಹಾಗೂ ರೂಪುರೇಷೆ ಬಗ್ಗೆ ಪ್ರತಿ ತಂಡ ಆರು ಜಿಲ್ಲಾ ಸಮಾವೇಶಗಳಲ್ಲಿ ಭಾಗವಹಿಸಲಿದೆ ಎಂದರು.
Ramesh Jarkiholi: ಮೂಲ-ವಲಸಿಗರ ಕಿತ್ತಾಟಕ್ಕೆ ಫುಲ್ ಸ್ಟಾಪ್ ಇಟ್ರಾ ರಮೇಶ್ ಜಾರಕಿಹೊಳಿ..!?
ರಾಜ್ಯದ ಮೊದಲ ಸಮಾವೇಶ ಜ.11ರಂದು ಮೈಸೂರಿನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಅದೇ ದಿನ ಮಡಿಕೇರಿಯಲ್ಲಿ ಸಚಿವ ಈಶ್ವರಪ್ಪ, ಗದಗ್ನಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೀದರ್ನಲ್ಲಿ ಸಚಿವ ಜಗದೀಶ್ ಶೆಟ್ಟರ್, ಹಾವೇರಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ತಂಡ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದರು.
BJP: 'ಕಾಂಗ್ರೆಸ್ಗೆ ಕಾಡುತ್ತಿವೆಯಂತೆ ನಾಲ್ಕು ಶಾಪಗಳು'
ಈ ಸಮಾವೇಶದಲ್ಲಿ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿವಳಿಕೆ ಕಾರ್ಯಕ್ರಮ, ಆಡಳಿತ ನಿರ್ವಹಣೆ ಹಾಗೂ ಮುಂದಿನ ಚುನಾವಣೆಗೆ ಸಂಘಟನಾತ್ಮಕವಾಗಿ ಸಿದ್ಧತೆ ಬಗ್ಗೆ ದಿಕ್ಸೂಚಿ ನೀಡಲಿದ್ದಾರೆ. ಸುಮಾರು ಮೂರು ಸಾವಿರ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕ್ಯಾ.ಕಾರ್ಣಿಕ್ ತಿಳಿಸಿದರು.
Laxmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ಗೆ 'ಬಿಗ್ ಶಾಕ್' ನೀಡಲು ರಮೇಶ್ ಜಾರಕಿಹೊಳಿ 'ಮೆಗಾ ಪ್ಲಾನ್'..!
ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾದ ರವಿಶಂಕರ ಮಿಜಾರ್, ಜಗದೀಶ್ ಶೇಣವ, ರಾಧಾಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Radhika kumaraswamy: 'ಯಾರಾರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ