Radhika kumaraswamy: 'ಯಾರಾರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ'

ಅವರ್ಯಾರು ಎಂದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಗೊತ್ತಿಲ್ಲದ ಕುಟುಂಬದವರ ಬಗ್ಗೆ ನನಗೆ ಕೇಳಬೇಡಿ ಎಂಬುದಾಗಿ ಪ್ರತಿಕ್ರಿಯಿಸಿ, ಏನೊಂದು ವಿಷಯ ತಿಳಿಸಲು ನಿರಾಕರಿಸಿದರು.

Last Updated : Jan 10, 2021, 05:40 PM IST
  • ರಾಧಿಕಾ ಕುಮಾರಸ್ವಾಮಿ ಯಾರ್ರಿ ಅದು? ಅವರ್ಯಾರೆಂದು ನನಗೆ ಗೊತ್ತಿಲ್ಲ… ಅದೇನೋ ಕೇಸ್​ ಅನ್ನುತ್ತಿದ್ದೀರಲ್ಲ, ಗೊತ್ತಿಲ್ಲದವರ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು…?
  • ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ
  • ಅವರ್ಯಾರು ಎಂದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಗೊತ್ತಿಲ್ಲದ ಕುಟುಂಬದವರ ಬಗ್ಗೆ ನನಗೆ ಕೇಳಬೇಡಿ ಎಂಬುದಾಗಿ ಪ್ರತಿಕ್ರಿಯಿಸಿ, ಏನೊಂದು ವಿಷಯ ತಿಳಿಸಲು ನಿರಾಕರಿಸಿದರು.
Radhika kumaraswamy: 'ಯಾರಾರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ' title=

ಮಂಡ್ಯ: ರಾಧಿಕಾ ಕುಮಾರಸ್ವಾಮಿ ಯಾರ್ರಿ ಅದು? ಅವರ್ಯಾರೆಂದು ನನಗೆ ಗೊತ್ತಿಲ್ಲ… ಅದೇನೋ ಕೇಸ್​ ಅನ್ನುತ್ತಿದ್ದೀರಲ್ಲ, ಗೊತ್ತಿಲ್ಲದವರ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು…?

ಹೀಗೆಂದು ಹೇಳಿದವರು ಬೇರ್ಯಾರೂ ಅಲ್ಲ.. ಖುದ್ದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ(H.D.Kumaraswamy)! ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಪತ್ರಕರ್ತರು ಪ್ರಶ್ನಿಸಿದಾಗ ರಾಧಿಕಾ ಕುಮಾರಸ್ವಾಮಿ ಅವರ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು.

JDS: '2023ಕ್ಕೆ ಕರ್ನಾಟಕ ಅಂದ್ರೇ 'ಜನತಾದಳ' ಅನ್ನೋ ಹಾಗೆ ಮಾಡ್ತೀವಿ'

ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಅದರ ಬಗ್ಗೆ ಏನ್ ಹೇಳ್ತೀರಿ ಎಂದು ಮಾಧ್ಯಮದವರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಕುಮಾರಸ್ವಾಮಿ ಅವರು, ಅವರ್ಯಾರು ಎಂದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಗೊತ್ತಿಲ್ಲದ ಕುಟುಂಬದವರ ಬಗ್ಗೆ ನನಗೆ ಕೇಳಬೇಡಿ ಎಂಬುದಾಗಿ ಪ್ರತಿಕ್ರಿಯಿಸಿ, ಏನೊಂದು ವಿಷಯ ತಿಳಿಸಲು ನಿರಾಕರಿಸಿದರು.

CM BSY : ಸಂಪುಟ ವಿಸ್ತರಣೆಗೆ ಸಿಗಲಿದೆಯಾ ಅನುಮತಿ ? ಕುತೂಹಲ ಕೆರಳಿಸಿದ ಸಿಎಂ ದೆಹಲಿ ಭೇಟಿ

ಅದೇ ವೇಳೆ ರಾಜಕೀಯದ ಈಗಿನ ಸ್ಥಿತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸದ್ಯದ ರಾಜಕೀಯ ಪರಿಸ್ಥಿತಿ, ಹಾಗೂ ರಾಜ್ಯ ಸರ್ಕಾರದ ಬಗ್ಗೆ ನಾನೇನೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನನ್ನ ಉದ್ದೇಶ ಏನಿದ್ದರೂ ಇನ್ನೂ ಎರಡೂವರೆ ವರ್ಷಗಳ ನಂತರ. ಈಗಿನ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರವೇ ಅದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದರು.

ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News