ಬೆಂಗಳೂರು:ಯುವತಿ ಜೊತೆ ಲಾಡ್ಜ್ ಗೆ ತೆರಳಿದ್ದ ಬಿಎಂಟಿಸಿ ಚಾಲಕನ ಅನುಮಾನಸ್ಪದ ಸಾವು..!

ಬಿಎಂಟಿಸಿ ಚಾಲಕ ಪುಟ್ಟೇಗೌಡನು    ಓರ್ವ ಯುವತಿ ಜೊತೆ  ಕೆಂಗೇರಿಯ    ಖಾಸಗಿ ಲಾಡ್ಜ್ ಗೆ ತೆರಳಿದ್ದನು.ಲಾಡ್ಜ್ ಲ್ಲಿ ಏನು ಆಯಿತೋಎನೋ.... ಬಳಿಕ ಪುಟ್ಟೇಗೌಡನನ್ನು ಲಾಡ್ಜ್ ನಲ್ಲಿಯೇ ಬಿಟ್ಟು ರೂಂ  ಡೊರ್ ಲಾಕ್  ಮಾಡಿ ಯುವತಿ ಹೊರ ಹೋಗಿದ್ದಾಳೆ.

Last Updated : Jan 31, 2023, 01:44 PM IST
  • ಯುವತಿ ಜೊತೆ ಲಾಡ್ಜ್ ಗೆ ತೆರಳಿದ್ದ ಬಿಎಂಟಿಸಿ ಚಾಲಕನ ಅನುಮಾನಸ್ಪದ ಸಾವು
  • ಕಳೆದ ಆರು ತಿಂಗಳಿಂದ ಬೆಂಗಳೂರಿನಲ್ಲಿ ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ
  • ಕೆಲಸಕ್ಕೆಂದು ಮನೆಯಿಂದ ಹೊರಟಿದ್ದನು
ಬೆಂಗಳೂರು:ಯುವತಿ ಜೊತೆ  ಲಾಡ್ಜ್ ಗೆ ತೆರಳಿದ್ದ  ಬಿಎಂಟಿಸಿ ಚಾಲಕನ ಅನುಮಾನಸ್ಪದ ಸಾವು..!

ಬೆಂಗಳೂರು:ಕೆಲಸಕ್ಕೆಂದು ಹೊರಟ ಬಿಎಂಟಿಸಿ ಚಾಲಕ ಅನುಮಾನಸ್ಪದವಾಗಿ  ಸಾವನ್ನಪಿದ್ದಾನೆ. ಚನ್ನಪಟ್ಟಣ ಮೂಲದ ಪುಟ್ಟೇಗೌಡನು ,ಕೆಲಸಕ್ಕೆಂದು ಮನೆಯಿಂದ ಹೊರಟಿದ್ದನು .

ಕಳೆದ ಆರು ತಿಂಗಳಿಂದ ಬೆಂಗಳೂರಿನಲ್ಲಿ  ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.ಬಿಎಂಟಿಸಿ ಚಾಲಕ ಪುಟ್ಟೇಗೌಡನು    ಓರ್ವ ಯುವತಿ ಜೊತೆ  ಕೆಂಗೇರಿಯ    ಖಾಸಗಿ ಲಾಡ್ಜ್ ಗೆ ತೆರಳಿದ್ದನು.ಲಾಡ್ಜ್ ಲ್ಲಿ ಏನು ಆಯಿತೋಎನೋ.... ಬಳಿಕ ಪುಟ್ಟೇಗೌಡನನ್ನು ಲಾಡ್ಜ್ ನಲ್ಲಿಯೇ ಬಿಟ್ಟು ರೂಂ  ಡೊರ್ ಲಾಕ್  ಮಾಡಿ ಯುವತಿ ಹೊರ ಹೋಗಿದ್ದಾಳೆ.

ಇದನ್ನೂ ಓದಿ: ಬಿಎಂಟಿಸಿಯ 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು

ಹಣ ಬಾಕಿ ಹಿನ್ನೆಲೆ ಲಾಡ್ಜ್ ನವರು ರೂಂ ಬಳಿ ತೆರಳಿದ್ದಾರೆ..ಬಳಿಕ    ಸಾವಿನ ಸಂಗತಿ ಬಯಲಾಗಿದೆ ಎನ್ನಲಾಗಿದೆ..
  ನೇಣು ಬಿಗಿದ ಸ್ಥಿತಿಯಲ್ಲಿ  ಶವ ಪತ್ತೆಯಾಗಿದ್ದು, ಮೃತನ ಹಣೆ ಮೇಲೆ ಗಾಯವಾಗಿದೆ. ಸಾವಿನ ಹಿಂದೆ ಯುವತಿಯ ಕೈವಾಡ ಇರಬಹುದುದೆಂದು  ಮೃತನ ಸಂಬಂಧಿಕರು‌ ಪುಟ್ಟೆಗೌಡನ ಜೊತೆ ತೆರಳಿದ್ದ  ಯುವತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನಸ್ಪಾದ ಸಾವಿನ ಬಗ್ಗೆ ಶೋಧ ಕಾರ್ಯ     ನಡೆಸಲಾಗ್ತಿದೆ. 
ಇದನ್ನೂ ಓದಿ: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಸಮಿತಿ ರಚನೆ

ಅದೇನೆ ಇರಲಿ, ಕೆಲಸಕ್ಕೆಂದು ಮನೆಯಿಂದ ಹೊರಟಿದ್ದವನು ಯಾವುದೇ ಆಮೀಷಕ್ಕೆ ಒಳಗಾಗದಿದ್ದರೇ ಬಹುಷಃ ಅವನ ಜೀವಕ್ಕೆ ಕುತ್ತು ಬರುತ್ತಿರಲಿಲ್ಲ ಎನಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News