ಬೆಂಗಳೂರು: ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣ(ಮೆಜೆಸ್ಟಿಕ್)ದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿದೆ.
ಫಾರ್ಮ್ ನಂಬರ್ 1ರಿಂದ ಬೆಳಿಗ್ಗೆ 9 ಗಂಟೆಗೆ ಬಿಹಾರದ ಕಡೆಗೆ ಹೊರಡ ಬೇಕಿದ್ದ ಸಂಘಮಿತ್ರ ರೈಲಿನಲ್ಲಿ ಬಾಂಬ್ ಇರುವುದಾಗಿ ವ್ಯಕ್ತಿಯೊಬ್ಬರು ಕೂಡಿಕೊಂಡರು. ಇದರಿಂದ ಭಯಭೀತರಾದ ಅಕ್ಕ-ಪಕ್ಕದ ಬೋಗಿಗಳಲ್ಲಿದ್ದ ಪ್ರಯಾಣಿಕರು ರೈಲಿನಿಂದ ಇಳಿದು ಓಡಲಾರಂಭಿಸಿದರು. ಗ್ರೆನೇಡ್ ಮಾದರಿ ವಸ್ತು ಪತ್ತೆಯಾಗಿರುವ ಘಟನೆ ಇಲ್ಲಿನ ಇಂದು ಬೆಳಿಗ್ಗೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರೈಲ್ವೇ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಟ್ರಾಕ್ ಪಕ್ಕದಲ್ಲಿ ಗ್ರೆನೇಡ್ ಮಾದರಿಯಲ್ಲಿ ಬಿದ್ದಿದ್ದ ವಸ್ತುವನ್ನು ವಶಕ್ಕೆ ಪಡೆದಿದ್ದು, ಅನುಮಾನಾಸ್ಪದ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕೆಲ ಸಮಯ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.