ರಾಜಕಾರಣಿಗಳಿಂದ ದೇಶದ ಉದ್ಧಾರ ಸಾಧ್ಯವಿಲ್ಲ : ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ

ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಎಪಿಜೆ ಅಬ್ದುಲ್ ಕಲಾಂ ಅವರು‌ ಸಾವನ್ನಪ್ಪಿದರು. ಶಿಕ್ಷಣದ ಮಹತ್ವ ಇದು, ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ- ಜಿ.ಟಿ. ದೇವೇಗೌಡ

Updated: Aug 10, 2018 , 10:43 AM IST
ರಾಜಕಾರಣಿಗಳಿಂದ ದೇಶದ ಉದ್ಧಾರ ಸಾಧ್ಯವಿಲ್ಲ : ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ
File pic

ಬೆಂಗಳೂರು: ದೇಶ ಅಭಿವೃದ್ಧಿ ಆಗಬೇಕಾದರೆ ನಿಮ್ಮಂತ ವಿದ್ಯಾರ್ಥಿಗಳು ಮುಂದೆ ಬರಬೇಕು. ರಾಜಕಾರಣಿಗಳಿಂದ ಈ ದೇಶ ಮುಂದೆ ಬರಲು ಸಾಧ್ಯವಿಲ್ಲ. ಅವರು ದೇಶವನ್ನು ಉದ್ಧಾರ ಮಾಡುವುದೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶ ಅಭಿವೃದ್ಧಿ ಆಗಬೇಕಾದರೆ ನಿಮ್ಮಂತ ವಿದ್ಯಾರ್ಥಿಗಳು ಮುಂದೆ ಬರಬೇಕು. ರಾಜಕಾರಣಿಗಳಿಂದ ದೇಶ ಉದ್ಧಾರ ಆಗುವುದು ಅಸಾಧ್ಯದ ಮಾತು ಎಂದಿದ್ದಾರೆ. ಉನ್ನತ ಶಿಕ್ಷಣ ಸಚಿವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಬಾರೀ ಚರ್ಚೆಗೆ ಗ್ರಾಸವಾಗಿದೆ.

ಡಾ ಬಿ.ಆರ್ ಅಂಬೇಡ್ಕರ್ ಒಬ್ಬರಿಗೆ ಒಂದೇ ಮತ ನೀಡುವ ಅವಕಾಶವನ್ನು ನೀಡಿದ್ದಾರೆ. ಆದ್ದರಿಂದ ನೀವು ಜನಪ್ರತಿನಿಧಿಗಳನ್ನ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಎಪಿಜೆ ಅಬ್ದುಲ್ ಕಲಾಂ ಅವರು‌ ಸಾವನ್ನಪ್ಪಿದರು. ಶಿಕ್ಷಣದ ಮಹತ್ವ ಇದು, ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ ಎಂದು ಜಿಟಿಡಿ ಇದೇ ಸಂದರ್ಭದಲ್ಲಿ ಹೇಳಿದರು.