ಬೆಂಗಳೂರಿನಲ್ಲಿ ನಡೆದ ಆರನೇ ಚೀನಾ-ಭಾರತ ವಾಣಿಜ್ಯ ಮೇಳ

"ಇಡೀ ಜಗತ್ತಿನ ದೃಷ್ಠಿ ಇಂದು ಭಾರತದ ಮೇಲಿದೆ, ಅದರಲ್ಲೂ ಮುಖ್ಯವಾಗಿ ಕರ್ನಾಟದ ಮೇಲೆ ನೆಟ್ಟಿದೆ"- ಸಿದ್ದರಾಮಯ್ಯ.

Last Updated : Nov 10, 2017, 03:07 PM IST
ಬೆಂಗಳೂರಿನಲ್ಲಿ ನಡೆದ ಆರನೇ ಚೀನಾ-ಭಾರತ ವಾಣಿಜ್ಯ ಮೇಳ title=
Pic: Twitter

ಬೆಂಗಳೂರು: ಆರನೇಯ ಚೀನಾ-ಭಾರತದ ವಾಣಿಜ್ಯ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಸಿದ್ದರಾಮಯ್ಯ ಕರ್ನಾಟಕವು ಸಮೃದ್ದಿಯ ನಾಡಾಗಿದ್ದು, ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದೆ. ನೀವು ಇಲ್ಲಿ ಬಂದು ಬಂಡವಾಳ ಹೂಡಿ ಎಂದು ಚೀನಾದ ಕಂಪನಿಗಳಿಗೆ ಆಹ್ವಾನಿಸಿದರು. 

ಈ ವೇದಿಕೆಯು ಭಾರತ ಮತ್ತು ಚೀನಾ ದೇಶಗಳಲ್ಲಿನ ರಾಜ್ಯ ಮತ್ತು ಪ್ರಾಂತ್ಯಾವಾರು ವಾಣಿಜ್ಯವನ್ನು ವೃದ್ಧಿಗೊಳಿಸಲು ರಚನೆಯಾಗಿದ್ದು, ಅದರಲ್ಲೂ ಮುಖ್ಯವಾಗಿ ರಕ್ಷಣಾ, ಇಂಧನ, ಮೂಲಭೂತ ಸೌಕರ್ಯ, ಆಹಾರ, ಮಾಹಿತಿ-ತಂತ್ರಜ್ಞಾನ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳವನ್ನು ತೊಡಗಿಸಲು ಒಳ್ಳೆಯ ಅವಕಾಶ ಇದೇ ಎಂದು ಇದೇ ಸಂದರ್ಭದಲ್ಲಿ ಸಿಎಂ ವಿವರಿಸಿದರು.

"ಇಡೀ ಜಗತ್ತಿನ ದೃಷ್ಠಿ ಇಂದು ಭಾರತದ ಮೇಲಿದೆ, ಅದರಲ್ಲೂ ಮುಖ್ಯವಾಗಿ ಕರ್ನಾಟದ ಮೇಲೆ ನೆಟ್ಟಿದೆ" ಎಂದು ತಿಳಿಸಿದ ಸಿದ್ದರಾಮಯ್ಯ, ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನಾದ ದ್ವಿಪಕ್ಷೀಯ ವಾಣಿಜ್ಯ ಸಂಬಂಧದಲ್ಲಿ ಚೀನಾಕ್ಕೆ ಭಾರತದ ರಫ್ತಿನ ಪ್ರಮಾಣ US$ 8.86 ಬಿಲಿಯನ್ ರಷ್ಟು ಏರಿಕೆಗೊಂಡಿದೆ. ಅಲ್ಲದೆ ಚೀನಾದ ರಫ್ತಿನ ಪ್ರಮಾಣ US$ 61.54 ಬಿಲಿಯನ್ ನಷ್ಟಿದೆ ಎಂದು ತಿಳಿಸಿದರು.

Trending News