Kaveri River : ತಮಿಳುನಾಡಿದ ನೀರು ಹರಿಸೋದನ್ನ ತಕ್ಷಣ ನಿಲ್ಲಿಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆಯಿಲ್ಲದೇ ಕಾವೇರಿ ಕೊಳ್ಳದ ಜಲಾಶ ಯಗಳಲ್ಲಿ ನೀರಿಲ್ಲ. ಇಂಥದ್ರಲ್ಲೂ 19.5 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ ಎಂದು ಕಲಮ ದಳ ನಾಯಕರು ಹಿಗ್ಗಾಮುಗ್ಗ ಹರಿಹಾಯ್ದಿದ್ದಾರೆ. ಮಂಡ್ಯ ಭಾಗದಲ್ಲಿ ರೈತರು ಕೂಡ ಹೆದ್ದಾರಿಗಳನ್ನ ಅಡ್ಡಗಟ್ಟಿ ತೀವ್ರ ಹೋರಾಟ ನಡೆಸ್ತಿದ್ದಾರೆ.ಸದ್ಯ ತಮಿಳುನಾಡು ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ತ್ರಿಸದಸ್ಯ ಪೀಠ ರಚನೆ ಹಿನ್ನೆಲೆ ಸರ್ಕಾರಕ್ಕೂ ಟೆನ್ಷನ್ ಶುರುವಾಗಿದೆ.ಮುಂದಿನ ಕಾನೂನು ಹೋರಾಟ ಹಾಗೂ ವಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಾಳೆ ಸಿಎಂ ಸರ್ವಪಕ್ಷ ಸಭೆ ಕರೆದಿದ್ದಾರೆ.ವಿಧಾನಸೌಧದಲ್ಲಿ ಬೆಳಿಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆ ನಡೆಯಲಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಎಸ್.ಎಂ ಕೃಷ್ಣಾ,ಬಿ.ಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಹೆಚ್.ಡಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ವೀರಪ್ಪಮೊಯ್ಲಿ ಹಾಗೂ ಹಾಲಿ ಮಾಜಿ ನೀರಾವರಿ ಮಂತ್ರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ತಮಿಳುನಾಡು ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಯಾವ ರೀತಿ ಹೋರಾಟ ಮುಂದುವರೆಸಬೇಕು. ನೀರಿನ ಲಭ್ಯತೆ ಬಗ್ಗೆ ಮನವರಿಕೆ ಮಾಡಿಕೊಡುವ ಸಂಬಂಧ ಗಂಭೀರ ಚರ್ಚೆ ನಡೆಯಲಿದೆ.
ಇದನ್ನೂ ಓದಿ-ಕಲುಷಿತ ನೀರು ಪ್ರಕರಣ ತಡೆಗೆ ಕ್ರಮ: ಸಂಜೆ ಸಿಎಂ ಸಭೆ
ಇನ್ನು 15 ದಿನ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ಕೋರ್ಟ್ ಸೂಚನೆ ನೀಡಿದೆ. ಈ ಆದೇಶವನ್ನ ಮರು ಪರಿಶೀಲನೆ ಮಾಡ ಬೇಕೆಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.ಈ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರು ಪರಿಶೀಲನಾ ಅರ್ಜಿಯನ್ನ ಸಲ್ಲಿಸಲಾಗಿದೆ.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಕಾವೇರಿ ಪ್ರಾಧಿಕಾರ ಸಭೆ ಕರೆಯುವ ಸಾಧ್ಯತೆ ಇದೆ. ನಾಲ್ಕೂ ಜಲಾಶಯಗಳಲ್ಲಿ ಈವರೆಗೆ ಕೇವಲ 55 ಟಿಎಂಸಿ ನೀರು ಮಾತ್ರ ಇದೆ.ಬೆಂಗಳೂರು ನಗರಕ್ಕೆ ಕುಡಿಯೋ ನೀರಿಗಾಗಿ 24 ಟಿಎಂಸಿ ಬೇಕು. ರಾಮನಗರ,ಮೈಸೂರು ಜಿಲ್ಲೆಗಳಿಗೆ 20 ಟಿಎಂಸಿ ನೀರು ಹರಿಸಬೇಕಿದೆ.ಕಳೆದ ವರ್ಷ ನೀರಿನ ಲಭ್ಯತೆ ಇತ್ತು. ಅಗತ್ಯಕ್ಕಿಂತ ಹೆಚ್ಚಾಗಿಯೇ ನೀರು ಹರಿಸಲಾಗಿತ್ತು.ಈಗ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ರಾಜ್ಯಸರ್ಕಾರ ವಾದ ಮಾಡಿದೆ.
ಇನ್ನು ಕಾವೇರಿ ವಿಚಾರವನ್ನ ವಿಪಕ್ಷಗಳು ರಾಜಕೀಯ ಅಸ್ತ್ರ ಮಾಡಿಕೊಂಡಿವೆ.ರೈತರ ಹೋರಾಟಕ್ಕೆ ಸಾಥ್ ಕೊಡಲು ಬಿಜೆಪಿ ನಾಯಕರು ರಸ್ತೆಗಿಳಿಯೋಕೆ ಹೊರಟಿದ್ದಾರೆ. ತಮಿಳುನಾಡಿಗೆ ನೀರು ಹರಿಸೋದನ್ನ ಖಂಡಿಸಿ ಆಗಸ್ಟ್ 28 ರಂದು ರಾಜ್ಯಾದ್ಯಂತ ದೊಡ್ಡ ಹೋರಾಟವನ್ನ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ. ನಿನ್ನೆ ಮಂಡ್ಯದಲ್ಲಿ ಸಾಂಕೇತಿಕವಾಗಿ ಬಿಜೆಪಿ ಹೋರಾಟ ಮಾಡಿತ್ತು.28 ರಂದು ಬೃಹತ್ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ.
ಇತ್ತ ನಾಳೆ ಸರ್ವಪಕ್ಷ ಸಭೆಗೆ ಬರುವಂತೆ ಮಾಜಿ ಸಿಎಂ ಹೆಚ್ ಡಿಕೆಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಸಭೆಗೆ ಹೋಗ್ತೇನೆ.ನನ್ನ ಸಲಹೆ ಕೊಡ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಒಟ್ನಲ್ಲಿ ತಮಿಳು ನಾಡು ಕ್ಯಾತೆಯಿಂದ ರಾಜ್ಯದ ರೈತರಿಗೆ ಟೆನ್ಷನ್ ಹೆಚ್ಚಾಗಿದೆ.ಕಾನೂನು ಹೋರಾಟ ಸಂಬಂಧ ಸಿಎಂ ಸರ್ವಪಕ್ಷ ಸಭೆ ಕರೆದಿದ್ದಾರೆ. ಪ್ರಮುಖ ನಾಯಕರಿಂದ ಸಲಹೆ ಪಡೆದು,ಮುಂದಿನ ಹೆಜ್ಜೆ ಇಡಲು ಸರ್ಕಾರ ತೀರ್ಮಾನಿಸಿದೆ..
ಇದನ್ನೂ ಓದಿ-ಹಾವೇರಿ ಜಿಲ್ಲೆಯ ಪ್ರತಿಷ್ಠಿತ ನಗರಗಳೇ ಕಳ್ಳರ ಟಾರ್ಗೆಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ