ಕಾಂತಿ ಕಣ್ಮುಚ್ಚಿ ಕಣ್ಣೀರು ತರಿಸಿದಳು...!  ಇದು ಗ್ಯಾಂಗ್ ಲೀಡರ್ ಕಾಂತಿಯ ಇನ್‌ಸೈಡ್ ಕಹಾನಿ..

ಹೀಗೆ ಗ್ಯಾಂಗ್ ಲೀಡರ್ ಆಗಿ ಮುಂದೆ ನಿಂತು, ತನ್ನ ಮುದ್ದು ಮರಿಯೊಂದಿಗೆ ಚಿನ್ನಾಟವಾಡುತ್ತಿರುವ ಇವಳ ಹೆಸರೇ ಕಾಂತಿ... ಹೌದು.. ನಿನ್ನೆ ನಿತ್ರಾಣಗೊಂಡು ಮೃತಪಟ್ಟಿದ್ದು ಇದೇ ಕಾಡಾನೆ ಕಾಂತಿ. 

Written by - Manjunath Naragund | Last Updated : Jul 2, 2023, 02:33 AM IST
  • ಪ್ರತಿ ಕಾಡಾನೆಗಳ ಗುಂಪಿಗೆ ಅರಣ್ಯ ಇಲಾಖೆ ಸಿಬ್ಬಂದಿ ಒಂದೊAದು ಹೆಸರನ್ನು ನಾಮಕರಣ ಮಾಡಿದ್ದಾರೆ.
  • ಬೀಟಮ್ಮ ಹೆಸರಿನ ಕಾಡಾನೆ ಹಿಂಡಿನ ಗ್ಯಾಂಗ್‌ನ ಲೀಡರ್ ಆಗಿದ್ದ ಅಟ್ಯಾಕಿಂಗ್ ಎಲಿಫೆಂಟ್ ಎಂಬ ಕುಖ್ಯಾತಿ ಪಡೆದಿದ್ದ ಈ ಆನೆಗೆ ಕಾಂತಿ ಎಂದು ಹೆಸರಿಡಲಾಗಿತ್ತು.
  • ಸುಮಾರು 40 ವರ್ಷದ ಪ್ರಾಯದ ಹೆಣ್ಣಾನೆ ಮನುಷ್ಯರನ್ನು ಕಂಡರೆ ಸಾಕು ದಿಢೀರ್ ಎಂದು ದಾಳಿ ನಡೆಸುತ್ತಿತ್ತು.
ಕಾಂತಿ ಕಣ್ಮುಚ್ಚಿ ಕಣ್ಣೀರು ತರಿಸಿದಳು...!  ಇದು ಗ್ಯಾಂಗ್ ಲೀಡರ್ ಕಾಂತಿಯ ಇನ್‌ಸೈಡ್ ಕಹಾನಿ.. title=

ಹಾಸನ: ಹೀಗೆ ಗ್ಯಾಂಗ್ ಲೀಡರ್ ಆಗಿ ಮುಂದೆ ನಿಂತು, ತನ್ನ ಮುದ್ದು ಮರಿಯೊಂದಿಗೆ ಚಿನ್ನಾಟವಾಡುತ್ತಿರುವ ಇವಳ ಹೆಸರೇ ಕಾಂತಿ... ಹೌದು.. ನಿನ್ನೆ ನಿತ್ರಾಣಗೊಂಡು ಮೃತಪಟ್ಟಿದ್ದು ಇದೇ ಕಾಡಾನೆ ಕಾಂತಿ. 

ಕೆಲ ತಿಂಗಳ ಹಿಂದೆ ಕಾಫಿ ತೋಟದಲ್ಲಿ ತನ್ನ ಮರಿಯೊಂದಿಗೆ ಕಾಣಿಸಿಕೊಂಡ ಈ ಕಾಂತಿ ಮೇಲೆ ಅರಣ್ಯ ಇಲಾಖೆ ಕಣ್ಣು ಬಿದ್ದು, ಇತ್ತೀಚೆಗಷ್ಟೇ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ, ಪುನಃ ಕಾಡಿಗೆ ಬಿಡಲಾಗಿತ್ತು. ಅಲ್ಲಿಯ ವರೆಗೂ ಗ್ಯಾಂಗ್ ಲೀಡರ್ ಆಗಿದ್ದ ಕಾಂತಿ, ರೇಡಿಯೋ ಕಾಲರ್ ಅಳವಡಿಕೆ ಬಳಿಕ ಒಬ್ಬೊಂಟಿಯಾಗಿದ್ದವಳು ಕೊನೆಗೆ ಕಣ್ಮರೆಯಾಗಿದ್ದಾರೆ...

ಬೀಟಮ್ಮ ಗ್ಯಾಂಗ್ ಲೀಡರ್ ಆಗಿದ್ದ ಕಾಂತಿ: 
ಪ್ರತಿ ಕಾಡಾನೆಗಳ ಗುಂಪಿಗೆ ಅರಣ್ಯ ಇಲಾಖೆ ಸಿಬ್ಬಂದಿ ಒಂದೊAದು ಹೆಸರನ್ನು ನಾಮಕರಣ ಮಾಡಿದ್ದಾರೆ. ಬೀಟಮ್ಮ ಹೆಸರಿನ ಕಾಡಾನೆ ಹಿಂಡಿನ ಗ್ಯಾಂಗ್‌ನ ಲೀಡರ್ ಆಗಿದ್ದ ಅಟ್ಯಾಕಿಂಗ್ ಎಲಿಫೆಂಟ್ ಎಂಬ ಕುಖ್ಯಾತಿ ಪಡೆದಿದ್ದ ಈ ಆನೆಗೆ ಕಾಂತಿ ಎಂದು ಹೆಸರಿಡಲಾಗಿತ್ತು. ಸುಮಾರು 40 ವರ್ಷದ ಪ್ರಾಯದ ಹೆಣ್ಣಾನೆ ಮನುಷ್ಯರನ್ನು ಕಂಡರೆ ಸಾಕು ದಿಢೀರ್ ಎಂದು ದಾಳಿ ನಡೆಸುತ್ತಿತ್ತು. ಎಷ್ಟೋ ದಿನ ಕಾಂತಿ ಕಾಫಿ ತೋಟದೊಳಗೆ ಬಂದ ಕಾರಣದಿಂದ ಅಂದು ಕಾರ್ಮಿಕರಿಗೆ ರಜೆ ನೀಡಲಾಗಿತ್ತು.

ಕಾಂತಿ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದರು. ಬೀಟಮ್ಮ ತಂಡದ ಚಲನವಲನ ಗಮನಿಸಲು ಇತ್ತೀಚೆಗಷ್ಟೇ ಕಾಂತಿಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ನಂತರದಲ್ಲಿ ಕಾಂತಿ  ಹಿಂಡಿಗೆ ಸೇರೆ ಇರಲಿಲ್ಲ. ಕೆಲ ದಿನಗಳಿಂದ ಅನಾರೋಗ್ಯದಿಂದ ಒಂಟಿಯಾಗಿ ಸಂಚರಿಸುತ್ತಿತ್ತು. ಆದರೆ ಶುಕ್ರವಾರ ಕಳೆದ ರಾತ್ರಿ ಐಬಿಸಿ ಎಸ್ಟೇಟ್‌ನಲ್ಲಿರುವ ನೀರಿನ ಹೊಂಡದ ಬಳಿ ಬಂದು ನಿತ್ರಾಣಗೊಂಡು ಮಲಗಿದೆ. 

ಇದನ್ನೂ ಓದಿ: ಬಳ್ಳಾರಿ ನಗರದಲ್ಲಿ ವಿವಿಧೆಡೆ ದಾಳಿ: 04 ಬಾಲಕಾರ್ಮಿಕರ ರಕ್ಷಣೆ

ಬೆಳಿಗ್ಗೆ ಕಾಫಿ ತೋಟಕ್ಕೆ ಸ್ಥಳೀಯರು ತೆರಳಿದ್ದ ವೇಳೆ ಕಾಡಾನೆ ಒಂದೇ ಕಡೆ ಮಲಗಿ ಒದ್ದಾಡುತ್ತಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಶು ವೈದ್ಯರೊಂದಿಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗೆ ಚಿಕಿತ್ಸೆ ನೀಡಿದ್ದಾರೆ. ಕಾಡಾನೆ ಮೇಲೆ ನೀರು ಹಾಕಿ, ಸುಮಾರು 20ಕ್ಕೂ ಹೆಚ್ಚು ಗ್ಲೂಕೋಸ್ ಬಾಟಲ್, ಇಂಜೆಕ್ಷನ್ ನೀಡಿ ಕಾಂತಿಯನ್ನು ಆರೈಕೆ ಮಾಡಿದ್ದಾರೆ. ಚಿಕಿತ್ಸೆ ಪಡೆಯುತ್ತಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆ ಮಲಗಿದಲ್ಲಿಯೇ ಸೊಂಡಿಲನ್ನು ಅಲುಗಾಡಿಸುತ್ತಿದ್ದ ದೃಶ್ಯ ನೆರೆದಿದ್ದರ ಕಣ್ಣಲ್ಲಿ ನೀರು ತರಿಸಿತು. ಕಾಡಾನೆ ನರಳಾಟ ಕಂಡ ಸ್ಥಳೀಯರು ಮೊಮ್ಮಲ ಮರಗಿದರು. ಮಧ್ಯಾಹ್ನ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕಾಂತಿ ಕೊನೆಯುಸಿರೆಳೆದಿದೆ. ಪಶು ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕಾಂತಿಯ ಅಂತ್ಯ ಸಂಸ್ಕಾರ ನಡೆಸಿದರು. ಫುಡ್ ಪಾಯ್ಸನ್ ಅಥವಾ ಅನಾರೋಗ್ಯದಿಂದ ನಿತ್ರಾಣಗೊಂಡು ಕಾಡಾನೆ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಆರ್‌ಎಫ್‌ಓ ಶಿಲ್ಪಾ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Budget Session 2023: ಜುಲೈ 3ರಿಂದ 14ರವರೆಗೆ ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಅಟ್ಯಾಕಿಂಗ್ ಎಲಿಫೆಂಟ್ ಕಾಂತಿ ಅನಾರೋಗ್ಯದಿಂದ ನರಳಾಡಿ ಪ್ರಾಣಬಿಟ್ಟದೆ. ಕಾಂತಿ ಉಳಿಸಲು ವೈದ್ಯರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಹೋರಾಟ ಫಲಿಸಲಿಲ್ಲ. ಕಾಂತಿ ಬದುಕಿದ್ದಾಗ ಜೀವ ಭಯದಲ್ಲಿ ಓಡಾಡುತ್ತಾ ಶಪಿಸುತ್ತಿದ್ದ ಸ್ಥಳೀಯರು ಕಾಡಾನೆ ಸಾವಿಗೆ ಮರುಕ ವ್ಯಕ್ತಪಡಿಸಿ ಮಾನವೀಯತೆ ಪ್ರದರ್ಶಿದ್ದಾರೆ. ಕಾಂತಿಯಿAದ ಬೇರ್ಪಟ್ಟಿರುವ ಇತರೆ ಕಾಡಾನೆಗಳು ಐಬಿಸಿ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು ಜನರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News