Karnataka: ಬಾಡಿಗೆ ಮನೆ ಸಿಗದೆ ದಯಾಮರಣಕ್ಕೆ ಮುಂದಾದ ತೃತೀಯಲಿಂಗಿ..!

ನಾನು 4 ಬಾರಿ ಡಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ತೃತೀಯಲಿಂಗಿಯಾಗಿ ಹುಟ್ಟಿದ್ದು ತಪ್ಪೇ? ಎಂದು ರಿಹಾನಾ ಪ್ರಶ್ನಿಸಿದ್ದಾರೆ.

Written by - Puttaraj K Alur | Last Updated : Aug 17, 2022, 04:10 PM IST
  • ಬಾಡಿಗೆ ಮನೆ ಪಡೆಯಲು ಸಾಧ್ಯವಾಗದೆ ತೃತೀಯಲಿಂಗಿಯಿಂದ ದಯಾಮರಣಕ್ಕೆ ಮನವಿ
  • 4 ಬಾರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
  • ನನಗೆ ಬಾಡಿಗೆ ಮನೆ ಕೊಡಿಸಿ, ಇಲ್ಲವೆ ದಯಾಮರಣ ಕೊಡಿ ಎಂದು ಮನವಿ
Karnataka: ಬಾಡಿಗೆ ಮನೆ ಸಿಗದೆ ದಯಾಮರಣಕ್ಕೆ ಮುಂದಾದ ತೃತೀಯಲಿಂಗಿ..! title=
ತೃತೀಯಲಿಂಗಿಯಿಂದ ದಯಾಮರಣಕ್ಕೆ ಮನವಿ

ಬೆಂಗಳೂರು: ಬಾಡಿಗೆ ಮನೆ ಪಡೆಯಲು ಸಾಧ್ಯವಾಗದೆ ತೃತೀಯಲಿಂಗಿಯೊಬ್ಬರು ದಯಾಮರಣಕ್ಕೆ ಮನವಿ ಮಾಡಿಕೊಂಡಿದ್ದಾರೆ.

‘ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾ ಹತ್ಯೆ ಅಥವಾ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ನನ್ನ ಮನವಿಗೆ ಪ್ರತಿಕ್ರಿಯಿಸಲು ಡಿಸಿ ವಿಫಲರಾಗಿದ್ದಾರೆ ಎಂದು ರಿಹಾನಾ ತಮ್ಮ ಅಳಲು ತೋಡಿಕೊಂಡಿದ್ದಾರೆ.  

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

‘ನಾನು 4 ಬಾರಿ ಡಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ನಾನು ತೃತೀಯಲಿಂಗಿಯಾಗಿ ಹುಟ್ಟಿದ್ದು ತಪ್ಪೇ? ನನಗೆ ಬದುಕುವ ಹಕ್ಕಿಲ್ಲವೇ..? ಜನರಲ್ಲಿ ಮಾನವೀಯ ಮೌಲ್ಯಗಳಿವೆಯೇ? ನಾವು ಭಾರತೀಯ ಪ್ರಜೆಗಳಲ್ಲವೇ? ಎಂದು ರಿಹಾನಾ ಪ್ರಶ್ನಿಸಿದ್ದಾರೆ.

‘ನಾನು ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದೇನೆ. ಆದರೆ, ನಮಗೆ ಯಾರೂ ಮನೆಯನ್ನು ಬಾಡಿಗೆಗೆ ನೀಡುತ್ತಿಲ್ಲ. ಡಿಸಿ ಕೂಡ ನಮಗೆ ಸಹಾಯ ಮಾಡಲು ವಿಫಲರಾಗಿದ್ದಾರೆ. ನನಗೆ ಉಚಿತ ಮನೆ ಬೇಡ, ಬಾಡಿಗೆ ನೀಡಲು ನಾನು ಸಿದ್ಧ. ಹೇಗಾದರೂ ಮಾಡಿ ನನಗೆ ಬಾಡಿಗೆ ಮನೆ ಕೊಡಿಸಿ, ಇಲ್ಲವೆ ದಯಾಮರಣ ಕೊಡಿಸಿ ಎಂದು ರಿಹಾನಾ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ.   

ಇದನ್ನೂ ಓದಿ: Bangalore Murder : ಸಿನಿಮಾ ಸ್ಟೈಲ್‌ನಲ್ಲಿ ಪತ್ನಿ ಕೊಂದು ಪೊಲೀಸರ ಅತಿಥಿಯಾದ ಪತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News