Unlock 2.O : ರಾಜ್ಯ ಸರ್ಕಾರದಿಂದ ಮತ್ತೆ ಈ 4 ಜಿಲ್ಲೆಗಳಿಗೆ ಅನ್ ಲಾಕ್ 2.0 ಘೋಷಣೆ!

ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಅನ್ ಲಾಕ್ 2.0 

Last Updated : Jun 22, 2021, 04:53 PM IST
  • ರಾಜ್ಯ ಸರ್ಕಾರ ಈಗಾಗಲೇ ನಿನ್ನೆಷ್ಟೇ ಕೊರೋನಾ ಪಾಸಿಟಿವಿಟಿ ದರ ಕಡಿಮೆ
  • ಮತ್ತೆ ಕೊರೋನಾ ಅನ್ ಲಾಕ್ 2.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಿತ್ತು
  • ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಅನ್ ಲಾಕ್ 2.0
Unlock 2.O : ರಾಜ್ಯ ಸರ್ಕಾರದಿಂದ ಮತ್ತೆ ಈ 4 ಜಿಲ್ಲೆಗಳಿಗೆ ಅನ್ ಲಾಕ್ 2.0 ಘೋಷಣೆ! title=

ಬೆಂಗಳೂರು : ರಾಜ್ಯ ಸರ್ಕಾರ ಈಗಾಗಲೇ ನಿನ್ನೆಷ್ಟೇ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡಿದ್ದಂತ 6 ಜಿಲ್ಲೆಗಳಲ್ಲಿ, ಮತ್ತೆ ಕೊರೋನಾ ಅನ್ ಲಾಕ್ 2.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಿತ್ತು. 

ಇದೀಗ ಮತ್ತೆ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡಿರುವಂತ ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಅನ್ ಲಾಕ್ 2.O(Unlock 2.O) ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಿದೆ.

ಇದನ್ನೂ ಓದಿ : BS Yediyurappa : ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿ ಸುದ್ದಿ..!

ಈ ಕುರಿತಂತೆ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಅಧಿಸೂಚನೆ ಹೊರಡಿಸಿದ್ದು, ಕೊರೋನಾ(Corona Case) ಪ್ರಕರಣಗಳು ಕಡಿಮೆಗೊಂಡಿರುವಂತ ಜಿಲ್ಲೆಗಳಾದಂತ ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 6 ಗಂಟೆಯಿಂದ 1 ಗಂಟೆಯವರೆಗೆ ತೆರೆಯಲು ಅವಕಾಶ ನೀಡಿ, ಅನ್ ಲಾಕ್ 2.0 ಮಾರ್ಗಸೂಚಿ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ : Reopen School-College : ರಾಜ್ಯದಲ್ಲಿ 'ಶಾಲಾ-ಕಾಲೇಜು' ಆರಂಭದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವರು!

ಈ ಜಿಲ್ಲೆಗಳಲ್ಲಿ ಏರ್ ಕಂಡೀಷನ್ ಶಾಪ್ಸ್(Air Conditioner Shop), ಏರ್ ಕಂಡೀಷನ್ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್ಕ ಗಳನ್ನು ತೆರೆಯೋದಕ್ಕೆ ಅವಕಾಶವಿಲ್ಲ. ಈ ಆದೇಶವು ಜುಲೈ 5, 2021ರವರೆಗೆ ಜಾರಿಯಲ್ಲಿ ಇರಲಿದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : Interstate Bus Travel : ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ : ಇಂದಿನಿಂದ ಅಂತರರಾಜ್ಯ ಪ್ರಯಾಣ ಆರಂಭ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News